ಅನುಕಂಪ ತೋರಿಸುವುದು ಬೇಡ, ಅವರ ಪಕ್ಷ ಅವರು ನೋಡಿಕೊಳ್ಳಲಿ: ಡಿಕೆಶಿಗೆ, ಯಡಿಯೂರಪ್ಪ ತಿರುಗೇಟು

| Updated By: ವಿವೇಕ ಬಿರಾದಾರ

Updated on: Jul 22, 2022 | 7:44 PM

ನಾನು 4 ಬಾರಿ ಸಿಎಂ ಆಗುವುದಕ್ಕೆ ಬಿಜೆಪಿ ಅವಕಾಶ ಮಾಡಿಕೊಟ್ಟಿದೆ, ನನ್ನ ಬಗ್ಗೆ ಡಿ.ಕೆ. ಶಿವಕುಮಾರ  ಅನುಕಂಪ ತೋರಿಸುವುದು ಬೇಡ, ಅವರ ಪಕ್ಷ ನೋಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್​ ಯಡಿಯೂರಪ್ಪ ಶಿಕಾರಿಪುರದಲ್ಲಿ ಹೇಳಿದ್ದಾರೆ.

ಅನುಕಂಪ ತೋರಿಸುವುದು ಬೇಡ, ಅವರ ಪಕ್ಷ ಅವರು ನೋಡಿಕೊಳ್ಳಲಿ: ಡಿಕೆಶಿಗೆ, ಯಡಿಯೂರಪ್ಪ ತಿರುಗೇಟು
ಬಿಎಸ್ ಯಡಿಯೂರಪ್ಪ
Follow us on

ಶಿವಮೊಗ್ಗ: ನಾನು 4 ಬಾರಿ ಸಿಎಂ ಆಗುವುದಕ್ಕೆ ಬಿಜೆಪಿ (BJP) ಅವಕಾಶ ಮಾಡಿಕೊಟ್ಟಿದೆ, ನನ್ನ ಬಗ್ಗೆ ಡಿ.ಕೆ. ಶಿವಕುಮಾರ (DK Shivakumar) ಅನುಕಂಪ ತೋರಿಸುವುದು ಬೇಡ, ಅವರು ಪಕ್ಷ ನೋಡಿಕೊಳ್ಳಲಿ ಎಂದು ಯಡಿಯೂರಪ್ಪ ಮಾನಸಿಕವಾಗಿ ಕುಗ್ಗಿದ್ದಾರೆ, ಬಿಜೆಪಿ ಬಳಸಿ ಬಿಸಾಡಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್​ ಯಡಿಯೂರಪ್ಪ (BS Yediyurappa) ಶಿಕಾರಿಪುರದಲ್ಲಿ (Shikaripur) ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪರನ್ನು ಸೈಡ್​ಲೈನ್​ ಮಾಡಿದ್ದಾರೆಂಬ ಪ್ರಶ್ನೆಯೇ ಇಲ್ಲ. ಯಾವುದೇ ಅಧಿಕಾರ ಇಲ್ಲದಿದ್ದರೂ ಕೆಲಸ ಮಾಡಿ ತೋರಿಸುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್​ ವರದಿ ಒಪ್ಪಲು ಸಾಧ್ಯವಿಲ್ಲ. ಡಾ.ಕಸ್ತೂರಿ ರಂಗನ್​ ವರದಿ ಸಂಬಂಧ ಸಿಎಂ ನೇತೃತ್ವದಲ್ಲಿ ಸಭೆ ನಡೆದಿದೆ. ಡಾ.ಕಸ್ತೂರಿ ರಂಗನ್ ವರದಿ ಒಪ್ಪಿಕೊಂಡರೆ ದುಷ್ಪರಿಣಾಮ ಉಂಟಾಗುತ್ತೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲೂ ಸಾಕಷ್ಟು ಹಾನಿಯಾಗಲಿದೆ. ದೆಹಲಿಗೆ ತೆರಳಲಿರುವ ಸಿಎಂ ಅಧಿಕಾರಿಗಳ ಜೊತೆ ವರದಿ ಜಾರಿಯಿಂದ ಆಗುವ ಹಾನಿ ಬಗ್ಗೆ ಮನವರಿಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದಿಲ್ಲ. ಆದರೂ ಹಠ ಬಿಡದೆ ಜಾರಿಗೆ ಪ್ರಯತ್ನಿಸಿದರೆ ಹೋರಾಟಕ್ಕೆ ನಾವು ಸಿದ್ಧರಾಗಿದ್ದೇವೆ.  ಕಸ್ತೂರಿ ರಂಗನ್​ ವರದಿ ವಿಚಾರದಲ್ಲಿ ರೈತರು ಭಯ ಪಡುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ, ದೆಹಲಿ ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಮಾತನಾಡುತ್ತಾರೆ ಎಂದು ಹೇಳಿದರು.

Published On - 7:42 pm, Fri, 22 July 22