ಈಗ ಸ್ವಚ್ಛ ಬಿಜೆಪಿ ಇಲ್ಲ: ಅವರಿಗೆ ಗೆಲುವು ಬೇಕಷ್ಟೇ, ಯಾವುದೇ ತತ್ವ ಸಿದ್ಧಾಂತವಿಲ್ಲ -ಶ್ರೀರಾಮಸೇನೆ ಮುತಾಲಿಕ್ ವಾಗ್ದಾಳಿ
Pramod Muthalik: ಗೆಲ್ಲುವವರಿದ್ದರೆ 80 ವರ್ಷದ ಮುದುಕನಿಗೂ ಬಿಜೆಪಿಯವರು ಟಿಕೆಟ್ ಕೊಡುತ್ತಾರೆ. ಗೆಲ್ಲುವಂತಿದ್ದರೆ ಸೋನಿಯಾ ಗಾಂಧಿಗೂ ಬಿಜೆಪಿ ಟಿಕೆಟ್ ಕೊಡ್ತಾರೆ. ಬಿಜೆಪಿಯಲ್ಲಿ ಈಗ ಶೇ. 70ರಷ್ಟು ಕಾಂಗ್ರೆಸ್, ಜೆಡಿಎಸ್ನವರಿದ್ದಾರೆ ಎಂದು ಬಿಜೆಪಿ ವಿರುದ್ಧ ಪ್ರಮೋದ್ ಮುತಾಲಿಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಾಲಕೋಟೆ: ಬಿಜೆಪಿಯಲ್ಲಿ (BJP) ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡುವುದಿಲ್ಲ ಅಂದ್ರು, ದಿವಂಗತ ಸುರೇಶ್ ಅಂಗಡಿ ಪತ್ನಿಗೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಿದರು. 75 ವರ್ಷ ತುಂಬಿದವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದರು. ಪರಿಷತ್ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿಗೆ ಟಿಕೆಟ್ ನೀಡಿದರು. ಒಟ್ನಲ್ಲಿ ಬಿಜೆಪಿಯವರಿಗೆ ಗೆಲ್ಲಬೇಕು ಅಷ್ಟೇ, ಯಾವುದೇ ತತ್ವ ಸಿದ್ಧಾಂತವಿಲ್ಲ ಎಂದು ಬಾಗಲಕೋಟೆಯಲ್ಲಿ ಶ್ರೀರಾಮಸೇನೆ (Sri Ram Sene) ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗೆಲ್ಲುವವರಿದ್ದರೆ 80 ವರ್ಷದ ಮುದುಕನಿಗೂ ಬಿಜೆಪಿಯವರು ಟಿಕೆಟ್ ಕೊಡುತ್ತಾರೆ. ಗೆಲ್ಲುವಂತಿದ್ದರೆ ಸೋನಿಯಾ ಗಾಂಧಿಗೂ ಬಿಜೆಪಿ ಟಿಕೆಟ್ ಕೊಡ್ತಾರೆ. ಬಿಜೆಪಿಯಲ್ಲಿ ಈಗ ಶೇ. 70ರಷ್ಟು ಕಾಂಗ್ರೆಸ್, ಜೆಡಿಎಸ್ನವರಿದ್ದಾರೆ. ಕಮ್ಯುನಿಸ್ಟರು ಬಿಜೆಪಿ ಒಳಹೊಕ್ಕಿದ್ದಾರೆ, ಇವರಿಗೆ ಅಧಿಕಾರ ಮುಖ್ಯ. ಈಗ ಸ್ವಚ್ಛ ಬಿಜೆಪಿ ಇಲ್ಲವೆಂದು ಪ್ರಮೋದ್ ಮುತಾಲಿಕ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಎಸ್ವೈ ಬಿಜೆಪಿಯನ್ನುಕಟ್ಟಿ ಬೆಳೆಸಿದ ಶ್ರೇಷ್ಠ ವ್ಯಕ್ತಿ:
ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ವಿಚಾರ ಪ್ರಸ್ತಾಪಿಸಿದ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಬಿಎಸ್ವೈ ಬಿಜೆಪಿಯನ್ನು ದೊಡ್ಡಮಟ್ಟದಲ್ಲಿ ಕಟ್ಟಿ ಬೆಳೆಸಿದ ಶ್ರೇಷ್ಠ ವ್ಯಕ್ತಿ. ಬಿಜೆಪಿ ಅಂದರೆ ಕೇವಲ ಪಟ್ಟಣ, ಬ್ರಾಹ್ಮಣರ ಪಕ್ಷ ಎಂಬಂತಿತ್ತು. ಬಿಜೆಪಿ ಅಂದರೆ ಕೇವಲ ವಿದ್ಯಾವಂತ ಜನರಿಗೆ ಮಾತ್ರ ಎಂಬಂತಿತ್ತು. ಬಿಜೆಪಿಯನ್ನು ಸರ್ವವ್ಯಾಪಿಯಾಗಿ ಬೆಳೆಸಿದಂತಹ ವ್ಯಕ್ತಿ ಯಡಿಯೂರಪ್ಪ. ಮಗನ ಸಲುವಾಗಿ BSY ಎಲ್ಲೋ ಒಂದು ಕಡೆ ಎಡವುತ್ತಿದ್ದಾರೆ ಅನಿಸುತ್ತಿದೆ. ನಾನು ಇದನ್ನು ಬಹಳ ನೋವಿನಿಂದ, ದುಃಖದಿಂದ ಹೇಳುತ್ತಿದ್ದೇನೆ ಎಂದು ಮುತಾಲಿಕ್ ಹೇಳಿದ್ದಾರೆ.
Published On - 7:03 pm, Fri, 22 July 22