ರಮೇಶ್ ಕುಮಾರ್ ಹೇಳಿಕೆ ಸಮರ್ಥಿಸಿಕೊಂಡ ಡಿ.ಕೆ.ಶಿವಕುಮಾರ್, ಭಾಷಣ ಮುಗಿಸಿ ಬಂದು ಮೌಲಾನಾಗೆ ಮುತ್ತಿಟ್ಟ ಜಮೀರ್!
ಜಮೀರ್ ಭಾಷಣ ಅಂತ್ಯದ ವೇಳೆಗೆ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡ ಖಾಜಿ ಶಂಶುದ್ದೀನ್ ಮೌಲಾನಾ ಆಗಮಿಸಿದರು. ಆ ವೇಳೆ ಭಾಷಣ ಮುಗಿಸಿ ಕೆಳಗಿಳಿದು ಬಂದ ಜಮೀರ್ ಮೌಲಾನಾಗೆ ಮುತ್ತಿಟ್ಟರು. ಜೊತೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಮೌಲಾನಾ ಅವರನ್ನ ಪರಿಚಯಿಸಿದರು.
ಹುಬ್ಬಳ್ಳಿ: ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆಂಬ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ (KR Ramesh Kumar) ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಸಮರ್ಥಿಸಿಕೊಂಡಿದ್ದಾರೆ. ರಮೇಶ್ ಕುಮಾರ್ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸೋದು ಬೇಡ. ರಮೇಶ್ ಕುಮಾರ್ ಹೇಳಿಕೆಯನ್ನು ತಿರುಚಲಾಗಿದೆ. ಬೇಕಾದ್ರೆ ಅವರ ಭಾಷಣ ಕೇಳಿ, ಅವರು ಸರಿಯಾಗೇ ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ನಮ್ಮನ್ನು ಬಲಿಷ್ಠರನ್ನಾಗಿ ಮಾಡಿದ್ದಾರೆ. ಅದನ್ನೇ ಮೂರು ತಲೆಮಾರು ಆಸ್ತಿ ಅಂತ ರಮೇಶ್ ಹೇಳಿದ್ದಾರೆ. ಆಸ್ತಿ ಅಂದ್ರೆ ಹಾಗಲ್ಲ, ಸಂವಿಧಾನ ಕೊಟ್ಟಿದ್ದಾರೆ ಎಂದು ಡಿಕೆ ಶಿ ವ್ಯಾಖ್ಯಾನಿಸಿದ್ದಾರೆ. ಉಳುವವನಿಗೆ ಭೂಮಿ ಕಾಯ್ದೆ ನೀಡಿದ್ದಾರೆ, ಅದು ಆಸ್ತಿ ಅಲ್ವಾ? ಎಂದು ರಮೇಶ್ ಕುಮಾರ್ ಹೇಳಿಕೆ ಸಮರ್ಥನೆಗೆ ಡಿ.ಕೆ. ಶಿವಕುಮಾರ್ ಉದಾಹರಣೆಯಾಗಿ ನೀಡಿದ್ದಾರೆ. ಮನಮೋಹನ್ ಸಿಂಗ್ ಗೆ ಅಧಿಕಾರ ನೀಡಿ ತ್ಯಾಗ ಮಾಡಿದ್ದಾರೆ. ಅಲ್ಲಿ ಮನರೆಗಾ ಅಂತ ಯೋಜನೆ ನೀಡಿದ್ದಾರೆ ಅದು ಆಸ್ತಿ ಅಲ್ವಾ…? ಎಂದೂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಭಾಷಣ ಮುಗಿಸಿ ಬಂದು ಮೌಲಾನಾಗೆ ಮುತ್ತಿಟ್ಟ ಜಮೀರ್!
ದಾವಣಗೆರೆ: ಎಸ್. ರಾಮಪ್ಪ ಅವರು 2023ರಲ್ಲಿ ಮತ್ತೊಮ್ಮೆ ಗೆದ್ದು ಶಾಸಕಾರಗಲಿ. ಜನೋತ್ಸಾಹ ನೋಡಿದ್ರೆ ರಾಮಪ್ಪ ಅವರನ್ನ ಸೋಲಿಸಲು ಆಗೋಲ್ಲ ಅನ್ನಿಸುತ್ತದೆ. ಪಿವನ್ ನಂತೆ ತಿರುಗಿ ಅವರು ಕ್ಷೇತ್ರದ ಕೆಲಸ ಮಾಡುತ್ತಾರೆ. ನಾನು ಮಂತ್ರಿಯಾದಾಗ ಅನೇಕ ಸಲ ನನ್ನ ಬಳಿ ಬಂದಿದ್ದರು. ಒಬ್ಬ ಪಿವನ್ ಆಗಿ, ಜನರ ಗುಲಾಮನಾಗಿ ಅವರು ಕೆಲಸ ಮಾಡಿದ್ದಾರೆ. ಸಿದ್ಧರಾಮಯ್ಯ ಬೆಂಬಲಿಸಬೇಕೆಂದರೆ ರಾಮಪ್ಪರನ್ನ ಗೆಲ್ಲಿಸಿ ಎಂದು ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಈ ವೇಳೆ ಮುಸ್ಲಿಂ ಸಮುದಾಯದವರ ಒತ್ತಾಯದ ಮೇರೆಗೆ ಹಿಂದಿಯಲ್ಲಿ ಮಾತಾಡಿದ ಜಮೀರ್ ಅಹ್ಮದ್ ಖಾನ್ ರಾಮಪ್ಪಗೆ ಮತ ಹಾಕಿದರೆ ಸಿದ್ಧರಾಮಯ್ಯ ಮತ್ತು ನನಗೆ ಮತ ಹಾಕಿದಂತೆ. ಮುಸ್ಲಿಂ ಸಮುದಾಯದವರು ತಲೆ ಎತ್ತಿ ನಡೆಯಬೇಕು. ಎಂದರು.
ಅದಾದ ಮೇಲೆ ಜಮೀರ್ ಭಾಷಣ ಅಂತ್ಯದ ವೇಳೆಗೆ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡ ಖಾಜಿ ಶಂಶುದ್ದೀನ್ ಮೌಲಾನಾ ಆಗಮಿಸಿದರು. ಆ ವೇಳೆ ಭಾಷಣ ಮುಗಿಸಿ ಕೆಳಗಿಳಿದು ಬಂದ ಜಮೀರ್ ಮೌಲಾನಾಗೆ ಮುತ್ತಿಟ್ಟರು. ಜೊತೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಮೌಲಾನಾ ಅವರನ್ನ ಪರಿಚಯಿಸಿದರು.