ಶ್ರೀರಾಮುಲು ಆಪ್ತ ರಾಜಣ್ಣ ಪ್ರಕರಣ: ವಿಜಯೇಂದ್ರ ವಿರುದ್ಧ ಹಸ್ತಕ್ಷೇಪ ಆರೋಪ ತೊಡೆದುಹಾಕಲು ಬಿ ಎಸ್ ಯಡಿಯೂರಪ್ಪ ಪ್ರಯತ್ನ?

| Updated By: ganapathi bhat

Updated on: Jul 02, 2021 | 7:20 PM

ರಾಜಣ್ಣರನ್ನು ಮಾಹಿತಿ ನೀಡದೆ ವಶಕ್ಕೆ ಪಡೆದಿದ್ದಕ್ಕೆ ಶ್ರೀರಾಮುಲು ಬೇಸರ ವ್ಯಕ್ತಪಡಿಸಿದ್ದಾರೆ. ಪುತ್ರನ ವಿರುದ್ಧ ಹಸ್ತಕ್ಷೇಪದ ಆರೋಪ ತೊಡೆದು ಹಾಕಲು ಹಾಗೂ ಸರ್ಕಾರದಲ್ಲಿ ಅವ್ಯವಹಾರಕ್ಕೆ ಅವಕಾಶ ಇಲ್ಲವೆಂಬ ಸಂದೇಶ ನೀಡಲು ರಾಜಣ್ಣ ವಶಕ್ಕೆ ಪಡೆಯಲು ಮುಖ್ಯಮಂತ್ರಿ ಅನುಮತಿ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಶ್ರೀರಾಮುಲು ಆಪ್ತ ರಾಜಣ್ಣ ಪ್ರಕರಣ: ವಿಜಯೇಂದ್ರ ವಿರುದ್ಧ ಹಸ್ತಕ್ಷೇಪ ಆರೋಪ ತೊಡೆದುಹಾಕಲು ಬಿ ಎಸ್ ಯಡಿಯೂರಪ್ಪ ಪ್ರಯತ್ನ?
ಬಿ.ಎಸ್.ಯಡಿಯೂರಪ್ಪ
Follow us on

ಬೆಂಗಳೂರು: ಸಚಿವ ಶ್ರೀರಾಮುಲು ಆಪ್ತ ಕಾರ್ಯದರ್ಶಿ ರಾಜಣ್ಣ ಪ್ರಕರಣ ರಾಜಕೀಯ ತಿರುವು ಪಡೆಯುವ ಸುಳಿವು ಸಿಗುತ್ತಿದ್ದಂತೆ ಕಾಣುತ್ತಿದೆ. ವಿವಿಧ ರಾಜಕೀಯ ನಾಯಕರ ಹೇಳಿಕೆಗಳು, ಸಿಸಿಬಿ ತನಿಖೆ ಚುರುಕುಗೊಳ್ಳುತ್ತಿದೆ. ಈ ಕಾರಣಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಶ್ರೀರಾಮುಲು ಸಮಾಧಾನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿ.ಎಸ್. ಯಡಿಯೂರಪ್ಪಗೆ ಪುತ್ರ ವಿಜಯೇಂದ್ರ ಜೊತೆಗಿನ ಡೀಲ್ ಮಾಹಿತಿ ಮೊದಲೇ ಇರಲಿಲ್ಲ. ವಿಜಯೇಂದ್ರ ಪ್ರಕರಣ ಬೆಳಕಿಗೆ ಬಂದ ಬಳಿಕ ಸಿಎಂ ಗಮನಕ್ಕೆ ಈ ವಿಚಾರ ಬಂದಿದೆ. ರಾಜಣ್ಣ ಡೀಲ್​ನಿಂದ ಸರ್ಕಾರ, ವಿಜಯೇಂದ್ರ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ. ಇದೇ ಕಾರಣಕ್ಕಾಗಿ ರಾಜಣ್ಣ ವಶಕ್ಕೆ ಪಡೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಹೈ ಪ್ರೊಫೈಲ್ ಕೇಸ್ ಹಿನ್ನೆಲೆ ಸಚಿವರ ನಿವಾಸದಲ್ಲೇ ವಶಕ್ಕೆ ಪಡೆಯಲಾಗಿದೆ. ಶ್ರೀರಾಮುಲುಗೆ ತಿಳಿಸಿ ಚರ್ಚೆ ಮಾಡಿದರೆ ಡೀಲ್ ವಿಚಾರ‌ ಮುಚ್ಚಿ ಹೋಗುತ್ತದೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ವಿಜಯೇಂದ್ರ ಹೆಸರಿರುವ ಕಾರಣ ಪಾಲುದಾರಿಕೆ ಅನುಮಾನ ಉಂಟಾಗಿದೆ. ಹೀಗಾಗಿ ಬಿ.ವೈ. ವಿಜಯೇಂದ್ರ ನೇರವಾಗಿ ದೂರು ದಾಖಲಿಸಿದ್ದರು ಎಂದು ಹೇಳಲಾಗಿದೆ.

ರಾಜಣ್ಣರನ್ನು ಮಾಹಿತಿ ನೀಡದೆ ವಶಕ್ಕೆ ಪಡೆದಿದ್ದಕ್ಕೆ ಶ್ರೀರಾಮುಲು ಬೇಸರ ವ್ಯಕ್ತಪಡಿಸಿದ್ದಾರೆ. ಪುತ್ರನ ವಿರುದ್ಧ ಹಸ್ತಕ್ಷೇಪದ ಆರೋಪ ತೊಡೆದು ಹಾಕಲು ಹಾಗೂ ಸರ್ಕಾರದಲ್ಲಿ ಅವ್ಯವಹಾರಕ್ಕೆ ಅವಕಾಶ ಇಲ್ಲವೆಂಬ ಸಂದೇಶ ನೀಡಲು ರಾಜಣ್ಣ ವಶಕ್ಕೆ ಪಡೆಯಲು ಮುಖ್ಯಮಂತ್ರಿ ಅನುಮತಿ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ವಿಪಕ್ಷ ನಾಯಕರು ಟೀಕೆ ಮಾಡಿದ್ದಾರೆ. ಆಪ್ತರ ವ್ಯವಹಾರಕ್ಕೆ ನಾನು ಮಧ್ಯಪ್ರವೇಶ ಮಾಡುವುದಿಲ್ಲ. ಇವರ ವಿಚಾರ ಮಾತಾಡೋದು ನನ್ನ ಲೆವೆಲ್ ಅಲ್ಲ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ರಾಮುಲು, ವಿಜಯೇಂದ್ರ ಬಗ್ಗೆ ಹೇಳಿಕೆ ನನ್ನ ಲೆವೆಲ್ ಅಲ್ಲ. ಅದರ ಬಗ್ಗೆ ನಾನು ಕಮೆಂಟ್ ಕೂಡಾ ಮಾಡುವುದಿಲ್ಲ. ಇದರಿಂದ ಅವ್ರ ಸರ್ಕಾರ ಫೌಂಡೇಷನ್ ಏನೆಂದು ಗೊತ್ತಾಗ್ತಿದೆ ಎಂದು ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಸಚಿವ ಶ್ರೀರಾಮುಲು ಪಿಎ ವಿರುದ್ಧ ವಂಚನೆ ಆರೋಪ ಪ್ರಕರಣ ಆರೋಪಕ್ಕೆ ಸಂಬಂಧಿಸಿ, ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಕುಟುಕಿದ್ದಾರೆ. ಸರ್ಕಾರ ಹೇಗೆ ನಡೆಸ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆ. ರಾಜ್ಯದ ಜನರು ಪ್ರತಿಯೊಂದು ವಿಚಾರವನ್ನೂ ಗಮನಿಸ್ತಿದ್ದಾರೆ. ಸರಿಯಾದ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ತಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಲಂಚ ಪಡೆಯುವವರಿಗೆ ಶ್ರೀರಾಮುಲು ಬೆಂಬಲ ಕೊಟ್ಟರೆ, ಗೊತ್ತಿದ್ದೂ ಮಾಡ್ತಿದ್ದಾನೆಂದು ಅರ್ಥ: ಸಿದ್ದರಾಮಯ್ಯ

ಬಿ ವೈ ವಿಜಯೇಂದ್ರಗೆ ಹಣ ತಲುಪಿಸಬೇಕು ಎಂದು ಶ್ರೀರಾಮುಲು ಆಪ್ತ ರಾಜಣ್ಣ ಡೀಲ್; 3 ಸ್ಫೋಟಕ ಆಡಿಯೋ ಆಧರಿಸಿ ತನಿಖೆ

Published On - 7:14 pm, Fri, 2 July 21