BS Yediyurappa: ಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಬಿಎಸ್​ ಯಡಿಯೂರಪ್ಪ ಭಾಷಣ ಸ್ಫೂರ್ತಿದಾಯಕ: ಪ್ರಧಾನಿ ಮೋದಿ ಕನ್ನಡದಲ್ಲಿ ಟ್ವೀಟ್

|

Updated on: Feb 24, 2023 | 2:21 PM

ಬಿಎಸ್​ ಯಡಿಯೂರಪ್ಪ ಅವರು ಬುಧವಾರ (ಫೆ.22) ರಂದು ವಿಧಾನಸಭೆಯಲ್ಲಿ ಮಾಡಿದ ಭಾಷಣದ ತುಣಕನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು, ಕನ್ನಡದಲ್ಲಿ ಟ್ವೀಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಈ ಭಾಷಣ ಸ್ಫೂರ್ತಿದಾಯಕ ಎಂದು ಹೇಳಿದ್ದಾರೆ. ​​

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ (BS Yediyurappa) ಅವರು ಮತ್ತ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ನಿರ್ಧರಿಸಿದ್ದು, ಇಂದು (ಫೆ.24) ವಿಧಾನಸಭೆಯಲ್ಲಿ ಕೊನೆಯ ಭಾಷಣವನ್ನು ಮಾಡಿದ್ದಾರೆ. ಇನ್ನು ಬಿಎಸ್​ ಯಡಿಯೂರಪ್ಪ ಅವರು ಬುಧವಾರ (ಫೆ.22) ರಂದು ವಿಧಾನಸಭೆಯಲ್ಲಿ ಮಾಡಿದ ಭಾಷಣದ ತುಣಕನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು, ಕನ್ನಡದಲ್ಲಿ ಟ್ವೀಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಈ ಭಾಷಣ ಸ್ಫೂರ್ತಿದಾಯಕ. ಇದರಲ್ಲಿ ನಮ್ಮ ಪಕ್ಷದ ನೈತಿಕತೆಯೂ ಅಡಕವಾಗಿದೆ. ಇದು ಖಂಡಿತವಾಗಿಯೂ ಇತರೆ ಕಾರ್ಯಕರ್ತರಿಗೂ ಸ್ಫೂರ್ತಿ ನೀಡುತ್ತದೆ” ಎಂದು ಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ಮೋದಿಯನ್ನು ಕೊಂಡಾಡಿದ ಸಿಎಂ ಬಸವರಾಜ ಬೊಮ್ಮಾಯಿ ​

ಒಳಿತನ್ನು ಮೆಚ್ಚಿ ಬೆನ್ನು ತಟ್ಟುವ ಪ್ರಧಾನಿ ನರೇಂದ್ರ ಮೋದಿ ಅವರ ಗುಣ ಅನುಕರಣೀಯ. ಬಜೆಟ್ ಬಗ್ಗೆ ಬಿ ಎಸ್​ ಯಡಿಯೂರಪ್ಪ ಅವರು ವ್ಯಕ್ತಪಡಿಸಿದ ಶ್ಲಾಘನೆಯ ಮಾತು ನನಗೆ ಪ್ರೇರಣೆ. ಮಾಜಿ ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಅವರು ನನ್ನ ಮಾರ್ಗದರ್ಶಕರು. ಯಡಿಯೂರಪ್ಪ ಅವರ ಭಾಷಣವನ್ನು ಪ್ರಧಾನಿ ಮೋದಿಯವರು ಕೊಂಡಾಡಿದ್ದು ಹೆಮ್ಮೆಯ ಸಂಗತಿ. ತಾವೊಬ್ಬ ಕಾರ್ಯಕರ್ತ ಎನ್ನುವ ಮೂಲಕ ಎಲ್ಲರಿಗೂ ಮಾದರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಟ್ವೀಟ್​ ಮಾಡಿದ್ದಾರೆ.

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Fri, 24 February 23