ಅಮಿತ್ ಶಾ ಭಾಷಣ ವಿಶ್ವದ 8ನೇ ಅದ್ಭುತವಿದ್ದಂತೆ: H.D.ಕುಮಾರಸ್ವಾಮಿ ವಾಗ್ದಾಳಿ
ಆಡಳಿತ ಮಾಡಿದ ಮೂರು ವರ್ಷ ಏನು ಮಾಡಿದ್ದಾರೆ? ಅಮಿತ್ ಶಾ ಭಾಷಣ ವಿಶ್ವದ 8ನೇ ಅದ್ಭುತವಿದ್ದಂತೆ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಶಿವಮೊಗ್ಗ: ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಕೇಂದ್ರ ಸಚಿವ ಅಮಿತ್ ಶಾ (Amit Shah) ಹೇಳ್ತಿದ್ದಾರೆ. ಆಡಳಿತ ಮಾಡಿದ ಮೂರು ವರ್ಷ ಏನು ಮಾಡಿದ್ದಾರೆ? ಅಮಿತ್ ಶಾ ಭಾಷಣ ವಿಶ್ವದ 8ನೇ ಅದ್ಭುತವಿದ್ದಂತೆ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಗ್ರಾಮದಲ್ಲಿ ಮಾತನಾಡಿ, ಬಿಜೆಪಿ ಮಾಡಿದ ಭ್ರಷ್ಟಾಚಾರವನ್ನ ಮುಕ್ತ ಮಾಡುತ್ತಾರಾ ತಿಳಿಸಲಿ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿ.ಎಸ್.ಯಡಿಯೂರಪ್ಪ ಮುಖನೋಡಿ ಮತ ಹಾಕಿ ಅಂತಿದ್ದಾರೆ. ನಿವೃತ್ತಿ ನೀಡಿ ಮೊದಲ ಬಾರಿಗೆ ಯಡಿಯೂರಪ್ಪ ಹೆಸರು ಹೇಳ್ತಿದ್ದಾರೆ. ಡಿಎನ್ಎ ವಿಚಾರ ಹೇಳಿದ್ದಕ್ಕೆ ಯಡಿಯೂರಪ್ಪ ಹೆಸರನ್ನ ಹೇಳ್ತಿದ್ದಾರೆ. ಇದುವರೆಗೂ ಮೋದಿ, ಅಮಿತ್ ಶಾ ಮುಖ ನೋಡಿ ಎನ್ನುತ್ತಿದ್ದರು ಎಂದು ಕಿಡಿಕಾರಿದರು.
ನನ್ನ ಡಿಎನ್ಎ ಪರೀಕ್ಷೆ ಹೊಡೆತಕ್ಕೆ ಬಿ.ಎಸ್ ಯಡಿಯೂರಪ್ಪ ಹೆಸರು ಹೇಳ್ತಿದ್ದಾರೆ. ಶರಾವತಿ ನಿರಾಶ್ರಿತರಿಗೆ ಶಾಶ್ವತ ಪರಿಹಾರ ನೀಡಲು ನಿಮ್ಮ ಜತೆ ಇದ್ದೇನೆ. ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನ ಪಂಚರತ್ನ ಯೋಜನೆಯಲ್ಲಿದೆ. ರಾಜ್ಯ ಸರ್ಕಾರದಿಂದಲೇ ಕಾರ್ಖಾನೆ ನಡೆಸಲು ಯೋಜನೆ ರೂಪಿಸುತ್ತೇನೆ. ನಾವು ಅಧಿಕಾರಕ್ಕೆ ಬಂದರೆ ಉಳಿದ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: Hassan Politics: ಹಾಸನದಲ್ಲಿ ಪ್ರಚಾರ ಕಾರ್ಯ ಶುರುಮಾಡಿದ ಭವಾನಿ ರೇವಣ್ಣ ಅಂತಿಮವಾಗಿ ತಮ್ಮ ಹಟ ಸಾಧಿಸಿಬಿಟ್ಟರೆ?
ಜೆಡಿಎಸ್ ಪಕ್ಷ ಕೇವಲ 2 ಜಿಲ್ಲೆಗಳಿಗೆ ಸೀಮಿತವಾಗಿಲ್ಲ
ಜೆಡಿಎಸ್ ಪಕ್ಷ ಕೇವಲ 2 ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾತೆ ತೆರೆಯುತ್ತೇವೆ. ಉತ್ತರ ಕರ್ನಾಟಕದಲ್ಲಿ ಈ ಬಾರಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕರಾವಳಿ ಭಾಗದಲ್ಲಿ ನಾನು ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇವೆ. ಪ್ರವಾಸ ಮಾಡಿ ಜನರ ನಾಡಿಮಿಡಿತ ತಿಳಿದುಕೊಳ್ಳುವೆ. ಉಳಿದಂತೆ ರಾಜ್ಯದಲ್ಲಿ ಜೆಡಿಎಸ್ ಸಂಪೂರ್ಣವಾಗಿ ಗಟ್ಟಿಯಾಗಿದೆ ಎಂದರು.
ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ವಿಚಾರವಾಗಿ ಎಲ್ಲಾ ಗೊಂದಲಕ್ಕೆ ತೆರೆ ಎಳೆಯಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡುತ್ತಿದ್ದು, ಕ್ಷೇತ್ರದ ಪ್ರಮುಖ ಕಾರ್ಯಕರ್ತರು, ಮುಖಂಡರ ಸಭೆ ಕರೆದಿದ್ದಾರೆ. ಸುಮಾರು 300 ಜನ ಪ್ರಮುಖರ ಸಭೆ ಕರೆದಿರುವ ಕುಮಾರಸ್ವಾಮಿ, ಚಿಕ್ಕಮಗಳೂರಿನಲ್ಲಿ ನಡೆಯುತ್ತಿರೊ ಪಂಚರತ್ನ ಯಾತ್ರೆ ಬಳಿಕ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಅಭ್ಯರ್ಥಿ ಯಾರಾದರೆ ಗೆಲುವು ಸುಲಭವಾಗಲಿದೆ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ.
ಭವಾನಿಗೆ ಟಿಕೆಟ್ ಬೇಡಾ ಎಂದ ಕುಮಾರಸ್ವಾಮಿ
ಎಲ್ಲರ ಅಭಿಪ್ರಾಯ ಪಡೆದ ಹಾಸನ ಟಿಕೆಟ್ ಬಗ್ಗೆ ತೀರ್ಮಾನ ಮಾಡಲು ತಂತ್ರ ಸಿದ್ಧಪಡಿಸಲಿದ್ದಾರೆ. ಇನ್ನೊಂದೆಡೆ ಹಾಸನ ಕ್ಷೇತ್ರದ ಬಗ್ಗೆ ಗೌಪ್ಯ ಸರ್ವೆ ಮಾಡಿಸಿ ಕುಮಾರಸ್ವಾಮಿ ವರದಿ ತರಿಸಿ ಕೊಂಡಿದ್ದಾರೆ. ಗೌಪ್ಯ ವರದಿ, ಪ್ರಮುಖರ ಅಭಿಪ್ರಾಯ ಎರಡನ್ನು ಆದರಿಸಿ ಟಿಕೆಟ್ ಘೋಷಣೆ ಮಾಡಲಿದ್ದಾರೆ. ಇದುವರೆಗೆ ಭವಾನಿಗೆ ಟಿಕೆಟ್ ಬೇಡಾ ಎಂದೇ ಕುಮಾರಸ್ವಾಮಿ ಪ್ರತಿಪಾದಿಸುತ್ತಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಬಾವುಟ ಹಾರಿಸೇ ಹಾರುಸುತ್ತೇವೆ: ಶಾಸಕ ಪ್ರೀತಮ್ ಗೌಡ ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ
ವಿರೋದದ ನಡುವೆ ಕೂಡ ಹಾಸನ ಕ್ಷೇತ್ರದಲ್ಲಿ ಭವಾನಿ ಭರ್ಜರಿ ಪ್ರಚಾರ ಆರಂಭಿಸಿದ್ದು, ಹಾಸನ ಕ್ಷೇತ್ರದಲ್ಲಿ ತಾವೇ ಆಕಾಂಕ್ಷಿ ಎಂದು ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರವನ್ನು ಸ್ವರೂಪ್ ಮುಗಿಸಿದ್ದಾರೆ. ಸದ್ಯ ಭಾನುವಾರದ ಕುಮಾರಸ್ವಾಮಿ ಸಭೆ ತೀವ್ರ ಕುತೂಹಲ ಮೂಡಿಸಿದೆ. ಸಭೆ ಬಳಿಕ ಹಾಸನ ಕದನ ಕಲಿ ಯಾರಾಗ್ತಾರೆ ಎನ್ನೋ ಗೊಂದಲಕ್ಕೆ ತೆರೆ ಸಾಧ್ಯತೆ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:51 pm, Fri, 24 February 23