ಬಿಜೆಪಿ ಕಾರ್ಯಕರ್ತರು ಮೈ ಮರೆತರೆ, ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ: ಪ್ರತಾಪ್ ಸಿಂಹ
ಬಿಜೆಪಿ ಕಾರ್ಯಕರ್ತರು ಮೈ ಮರೆತರೆ, ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ PFIನ 175 ಸದಸ್ಯರ ಮೇಲಿದ್ದ ಕೇಸ್ ವಾಪಸ್ ಪಡೆದಿದ್ದರು. ಪರಿಣಾಮ ಎರಡು ಡಜನ್ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯಲು ಕಾರಣವಾಯಿತು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಚಾಮರಾಜನಗರ: ಚುನಾವಣೆ ಹೊಸ್ತಿನಲ್ಲಿ ಆರೋಪ-ಪ್ರತ್ಯಾರೋಪ ಜೋರಾಗಿಯೇ ನಡೆಯುತ್ತವೆ. ಅದರಂತೆ ಬಿಜೆಪಿ ಕಾರ್ಯಕರ್ತರು (BJP Activists) ಮೈ ಮರೆತರೆ, ಸಿದ್ದರಾಮಯ್ಯ (Siddaramaiah) ನೇತೃತ್ವದ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ PFIನ 175 ಸದಸ್ಯರ ಮೇಲಿದ್ದ ಕೇಸ್ ವಾಪಸ್ ಪಡೆದಿದ್ದರು. ಪರಿಣಾಮ ಎರಡು ಡಜನ್ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯಲು ಕಾರಣವಾಯಿತು ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ.
ಮೈಸೂರಿನಲ್ಲಿ ನಡೆ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ಈಗ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಹವಣಿಸುತ್ತಿದ್ದಾರೆ. ಒಂದು ವೇಳೆ ನಮ್ಮ ಕಾರ್ಯಕರ್ಯರು ಈ ವೇಳೆ ಮೈ ಮರೆತರೆ, ರಾಜ್ಯದಲ್ಲಿ ಮತ್ತೆ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಇದಕ್ಕೆ ಅವಕಾಶ ನೀಡದೆ, ಮತ್ತೊಮ್ಮೆ ಬಿಜೆಪಿ ನೇತೃತ್ವದ ರಾಷ್ಟ್ರೀಯವಾದಿ ಸರ್ಕಾರವನ್ನು ತರಲು ಪ್ರಯತ್ನ ಮಾಡಿ ಎಂದು ಹುರುದುಂಬಿಸಿದರು.
ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಮದುವೆ, ಮುಂಜಿ, ಬೀಗರ ಊಟ ಅನೇಕ ಕಾರ್ಯಕ್ರಮಕ್ಕೆ ಮೈಸೂರಿಗೆ ಬರುತ್ತಿದ್ದರು. ಆದರೆ ದುಷ್ಕರ್ಮಿಗಳಿಂದ ಹತ್ಯೆಯಾದ ಕ್ಯಾತಮಾರನಹಳ್ಳಿಯ ರಾಜುವಿನ ಮನೆಗೆ ಸೌಜನ್ಯಕ್ಕೂ ಭೇಟಿ ನೀಡಲಿಲ್ಲ ಎಂದು ವಾಗ್ದಾಳಿ ಮಾಡಿದರು.
ಹೇಳಿಕೆ ಸಮರ್ಥಿಸಿಕೊಂಡ ಪ್ರತಾಪ್ ಸಿಂಹ
ಇಂತವರು ಅಧಿಕಾರಕ್ಕೆ ಬಂದರೆ ಕಪಾಲಿ ಬೆಟ್ಟ ತೆಗೆದು ಏಸು ಬೆಟ್ಟ ಮಾಡುತ್ತಾರೆ. ಈ ಕಾರಣದಿಂದಲೆ ಕಾಂಗ್ರೆಸ್ ಬಗ್ಗೆ ಹೇಳಿದೆ ಎಂದು ಪ್ರತಾಪ್ ಸಿಂಹ ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಚರ್ಚೆ ವಿಚಾರವಾಗಿ ಮಾತನಾಡಿ ನಾನು 2029 ರವರೆಗೆ ಮಾತ್ರ ರಾಜಕೀಯ ಯೋಚನೆ ಮಾಡುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ಕೈ ಕೆಳಗೆ ಕೆಲಸ ಮಾಡಲು ನನಗೆ ಇಷ್ಟ. ಮೋದಿಯವರು ನನ್ನ ಪಾಲಿನ ದೇವರು. 15 ವರ್ಷದಲ್ಲಿ ಒಬ್ಬ ಸಂಸದನಾಗಿ ಎಷ್ಟು ಕೆಲಸ ಮಾಡಬಹುದು ಅದನ್ನು ಮಾಡುತ್ತೇನೆ. ನಾನು ಲಾಂಗ್ ಟರ್ಮ್ ಪಾಲಿಟೆಕ್ಸ್ ಬಗ್ಗೆ ಯೋಚನೆ ಮಾಡಿಲ್ಲ. ಮುಂದೆ ರಾಜಕಾರಣದಲ್ಲಿ ಇರಬೇಕಾ ಬೇಡ್ವ ಅಂತ ಯೋಚನೆ ಮಾಡುತ್ತೇನೆ ಎಂದು ಹೇಳಿದರು.
ಮಾರ್ಚ್ 11ರಂದು ಮೈಸೂರು-ಬೆಂಗಳೂರು ಹೈವೇ ಉದ್ಘಾಟನೆ
ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಮೊದಲ ಹಂತದಲ್ಲಿ 150 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಒಟ್ಟು 160 ಎಕರೆ ಬೇಕು, 47 ಎಕರೆ ನೋಟಿಫಿಕೇಷನ್ ಆಗಿದೆ. ಮೈಸೂರು-ನಂಜನಗೂಡು ಹೆದ್ದಾರಿ ಡೈವರ್ಟ್ ಮಾಡುತ್ತೇವೆ. ಮಾರ್ಚ್ 11ರಂದು ಮೈಸೂರು-ಬೆಂಗಳೂರು ಹೈವೇ ಉದ್ಘಾಟನೆಯಾಗುತ್ತದೆ. ಮಂಡ್ಯದಲ್ಲಿ ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ. ಅದೇ ದಿನ ಮೈಸೂರು-ಕುಶಾಲನಗರ ಹೆದ್ದಾರಿಗೂ ಗುದ್ದಲಿ ಪೂಜೆ ನೆರವೇರಿಸಲಾಗುತ್ತದೆ. ಮಂಡ್ಯ ಜಿಲ್ಲೆಯ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಲ್ಲ. ಆದರೂ ನಾವು ತಾರತಮ್ಯ ಮಾಡಿಲ್ಲ. ಮಂಡ್ಯ ಜಿಲ್ಲೆಗೆ ಪೂರಕವಾದ ಅಭಿವೃದ್ಧಿಯನ್ನು ಸರ್ಕಾರ ಮಾಡುತ್ತಿದೆ. ಕಾವೇರಿ ಎಕ್ಸ್‌ಪ್ರೆಸ್ ಹೈವೇ ನಾಮಕರಣಕ್ಕೆ ಸಹಕಾರ ಕೇಳುತ್ತೇನೆ.
ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Fri, 24 February 23