ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷನ ಆಯ್ಕೆ ಯಾವಾಗ ಅಂತ ಯಡಿಯೂರಪ್ಪಗೆ ಈಗಲೂ ಗೊತ್ತಿಲ್ಲ!

|

Updated on: Nov 02, 2023 | 2:12 PM

ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷರ ಆಯ್ಕೆಗೆ ಸಾಕಷ್ಟು ತಡವಾಗಿದೆ, ಆದಷ್ಟು ಬೇಗ ನೇಮಕ ಮಾಡಬೇಕು ಅಂತ ವರಿಷ್ಠರನ್ನು ಒತ್ತಾಯಿಸುತ್ತೇವೆ ಅಂತಷ್ಟೇ ಹೇಳಿದರು. ಇವೆರಡು ಸ್ಥಾನಗಳಿಗೆ ಇಬ್ಬರು ಸಮರ್ಥ ನಾಯಕರನ್ನು ಆಯ್ಕೆ ಮಾಡುವ ಕಾರ್ಯ ಅಷ್ಟೊಂದು ಜಟಿಲವೇ?

ಬೆಂಗಳೂರು: ಬಹಳ ದಿನಗಳ ನಂತರ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಹಲವು ವಿಷಯಗಳ ಬಗ್ಗೆ ಮಾತಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ (Congress government) ಬಂದು ಹೆಚ್ಚು ಕಡಿಮೆ ಅರ್ಧ ವರ್ಷ ಕಳೀತಾ ಬಂತು. ಆದರೆ, ಬಿಜೆಪಿ ಇದುವರೆಗೆ ವಿರೋಧ ಪಕ್ಷದ (Leader of Opposition) ನಾಯಕ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ನಳಿನ್ ಕುಮಾರ್ ಕಟೀಲ್ ಅವರ ಜಾಗದಲ್ಲಿ ಮತ್ತೊಬ್ಬರನ್ನು ಆಯ್ಕೆ ಮಾಡೋದು ಬಿಜೆಪಿಗೆ ಸಾಧ್ಯವಾಗಿಲ್ಲ. ನಿರ್ದಿಷ್ಟವಾಗಿ ಈ ವಿಷಯಗಳಿಗೆ ಸಂಬಂಧಿಸಿದಂತೆ ಆಗುತ್ತಿರುವ ವಿಳಂಬಕ್ಕೆ ಯಡಿಯೂರಪ್ಪ ಅವರಲ್ಲಿ ಈಗಲೂ ಸ್ಪಷ್ಟವಾದ ಉತ್ತರವಿಲ್ಲ. ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಒಂದು ವಾರ ವಿಳಂಬ ಮಾಡಿದಾಗ ಅಷ್ಟೆಲ್ಲ ಟೀಕೆ ಮಾಡಿದ್ರಲ್ಲ ಸಾರ್, ನೀವ್ಯಾಕೆ ಹೀಗೆ ಅಂತ ಪತ್ರಕರ್ತರು ಕೇಳಿದರೆ, ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷರ ಆಯ್ಕೆಗೆ ಸಾಕಷ್ಟು ತಡವಾಗಿದೆ, ಆದಷ್ಟು ಬೇಗ ನೇಮಕ ಮಾಡಬೇಕು ಅಂತ ವರಿಷ್ಠರನ್ನು ಒತ್ತಾಯಿಸುತ್ತೇವೆ ಅಂತಷ್ಟೇ ಹೇಳಿದರು. ಇವೆರಡು ಸ್ಥಾನಗಳಿಗೆ ಇಬ್ಬರು ಸಮರ್ಥ ನಾಯಕರನ್ನು ಆಯ್ಕೆ ಮಾಡುವ ಕಾರ್ಯ ಅಷ್ಟೊಂದು ಜಟಿಲವೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ