ನೌಕರರ ಮನವೊಲಿಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪುತ್ರ; ಮುಷ್ಕರ ವಾಪಸ್​, ಅಥಣಿಯಲ್ಲಿ ಬಸ್​ ಸಂಚಾರ ರೈಟ್​ ರೈಟ್​!

bus strike called off in athani | ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ ಅವರೇ ಮುಷ್ಕರನಿರತ ಸಾರಿಗೆ ನೌಕರರ ಜೊತೆ ಯಶಸ್ವಿಯಾಗಿ ಮಾತುಕತೆ ನಡೆಸಿದ್ದು, ನೌಕರರನ್ನು ಮತ್ತೆ ಕೆಲಸಕ್ಕೆ ಮರಳುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಡಿಪೋದಿಂದ ಬಸ್ ಸಂಚಾರ ಪುನರಾರಂಭಗೊಂಡಿದೆ.

ನೌಕರರ ಮನವೊಲಿಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪುತ್ರ; ಮುಷ್ಕರ ವಾಪಸ್​, ಅಥಣಿಯಲ್ಲಿ ಬಸ್​ ಸಂಚಾರ ರೈಟ್​ ರೈಟ್​!
ನೌಕರರ ಮನವೊಲಿಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪುತ್ರ; ಮುಷ್ಕರ ವಾಪಸ್​, ಅಥಣಿಯಲ್ಲಿ ಬಸ್​ ಸಂಚಾರ ರೈಟ್​ ರೈಟ್​!
Follow us
ಸಾಧು ಶ್ರೀನಾಥ್​
|

Updated on:Apr 14, 2021 | 2:54 PM

ಬೆಳಗಾವಿ: ಸಾರಿಗೆ ನೌಕರರು 8 ದಿನಗಳಿಂದ ನಡೆಸುತ್ತಿರುವ ಮುಷ್ಕರದಿಂದ ರಾಜ್ಯಾದ್ಯಂತ ಜನ ಬಸವಳದಿದ್ದಾರೆ. ಅದರಲ್ಲೂ ಉಪ ಮುಖ್ಯಮಂತ್ರಿಯೂ ಆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೂ ಹೈರಾಣಗೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸ್ವತಃ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ ಅವರೇ ಮುಷ್ಕರನಿರತ ಸಾರಿಗೆ ನೌಕರರ ಜೊತೆ ಯಶಸ್ವಿಯಾಗಿ ಮಾತುಕತೆ ನಡೆಸಿದ್ದು, ನೌಕರರನ್ನು ಮತ್ತೆ ಕೆಲಸಕ್ಕೆ ಮರಳುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಹಾಗಾಗಿ, ಅಥಣಿಯಲ್ಲಿ 210 ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. 400 ಸಾರಿಗೆ ನೌಕರರ ಪೈಕಿ 210 ನೌಕರರು ಕೆಲಸಕ್ಕೆ ಹಾಜರಾಗಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ಡಿಪೋದಿಂದ ಬಸ್ ಸಂಚಾರ ಪುನರಾರಂಭಗೊಂಡಿದೆ.

ಸಾರಿಗೆ ನೌಕರರ ಮುಷ್ಕರಕ್ಕೆ ಬ್ರೇಕ್​

ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ವಕ್ಷೇತ್ರದಲ್ಲಿ ಕೊನೆಗೂ ಬಸ್‌ಗಳು ರ‌ಸ್ತೆಗಿಳಿದಿವೆ. ಅಥಣಿ ಪಟ್ಟಣದ ಬಸ್ ಡಿಪೋದಲ್ಲಿ ಸಚಿವ ಸವದಿ ಪುತ್ರ ಚಿದಾನಂದ್ ಸವದಿ ಸಾರಿಗೆ ಸಿಬ್ಬಂದಿಗಳ ಜೊತೆಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಚಿದಾನಂದ್ ಸವದಿ ಮನವಿಗೆ ಸ್ಪಂದಿಸಿದ 400 ಸಾರಿಗೆ ನೌಕರರ ಪೈಕಿ 210 ನೌಕರರು ಕರ್ತವ್ಯಕ್ಕೆ ಹಾಜರು. ಇದೀಗತಾನೆ ಅಥಣಿ ತಾಲೂಕಿನ ಗ್ರಾಮೀಣ ಮತ್ತು ಹೊರ ರಾಜ್ಯಕ್ಕೂ ಸಾರಿಗೆ ಸೇವೆ ಆರಂಭಗೊಂಡಿದೆ. ಅಥಣಿಯಿಂದ ಪೂನಾ, ಶ್ರೀಶೈಲಂ, ನಾಂದೇಡ್‌ಗೆ ಸಾರಿಗೆ ಸೇವೆ ಪುನಃ ಪ್ರಾರಂಭಗೊಂಡಿದೆ.

Transport minister lakshman savadi son chidanand savadi talks with employees

ಸಾರಿಗೆ ನೌಕರರ ಮುಷ್ಕರಕ್ಕೆ ಬ್ರೇಕ್; ಸಾಲು ಸಾಲಾಗಿ ಹೊರಟು ನಿಂತ ಬಸ್​ಗಳು

ಸಾರಿಗೆ ಸಚಿವರ ತವರಿನಲ್ಲಿ ಬಸ್ ಸೇವೆ ಸ್ಥಗಿತಗೊಂಡಿದ್ದು ವ್ಯಾಪಕ ಮುಜುಗರಕ್ಕೆ ಕಾರಣವಾಗಿತ್ತು. ಇದರಿಂದ ಲಕ್ಷ್ಮಣ ಸವದಿ ಪುತ್ರ ಚಿದಾನಂದ್ ಅವರೇ ಫೀಲ್ಡಿಗಿಳಿದಿದ್ದರು. ಕೊನೆಗೂ ಸಚಿವ ಪುತ್ರ ಚಿದಾನಂದ್ ಸವದಿ ಸಂಧಾನ ಯಶಸ್ವಿಯಾಗಿದೆ.

Published On - 2:44 pm, Wed, 14 April 21