AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದಲ್ಲಿ ನಡೆದ ಸ್ವಚ್ಛತಾ ಸ್ಪರ್ಧೆ; ವಿಭಿನ್ನ ಸವಾಲಿಗೆ ಸಾಕ್ಷಿಯಾದ ಸಾರ್ವಜನಿಕರು

ಸ್ವಚ್ಛತೆಯನ್ನು ಸವಾಲಾಗಿ ಸ್ವೀಕರಿಸುವ ಜನರು ಏನು ಮಾಡಬಹುದು ಎನ್ನುವುದಕ್ಕೆ ಧಾರವಾಡದಲ್ಲಿ ನಡೆದ ಈ ಸ್ಪರ್ಧೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಯುಗಾದಿ ಇರುವ ಹಿನ್ನಲೆಯಲ್ಲಿ ಈ ರೀತಿಯಲ್ಲಿ ಸ್ವಚ್ಛತೆ ನಡೆಯುತ್ತಿದೆ ಎಂದು ಹಲವು ಭಾವಿಸಿದ್ದರು. ಆದರೆ, ಇಲ್ಲಿನ ಬಡಾವಣೆಯ ಜನರಿಗೆ ಸ್ವಚ್ಛ ಮಾಡುವ ಸ್ಪರ್ದೆ ಏರ್ಪಡಿಸಲಾಗಿತ್ತು.

ಧಾರವಾಡದಲ್ಲಿ ನಡೆದ ಸ್ವಚ್ಛತಾ ಸ್ಪರ್ಧೆ; ವಿಭಿನ್ನ ಸವಾಲಿಗೆ ಸಾಕ್ಷಿಯಾದ ಸಾರ್ವಜನಿಕರು
ಸ್ವಚ್ಛತಾ ಸ್ಪರ್ಧೆ
preethi shettigar
| Updated By: ganapathi bhat|

Updated on: Apr 14, 2021 | 10:24 PM

Share

ಧಾರವಾಡ: ಸಾಮಾನ್ಯವಾಗಿ ಜನರಿಗೆ ತಮ್ಮ ಮನೆಯ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛ ಮಾಡಲು ಯಾರೂ ಹೇಳುವುದಿಲ್ಲ. ಕೆಲವರು ತಾವಾಗಿಯೇ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಹಲವರು ಸುತ್ತಲ ಪರಿಸರವನ್ನು ಸ್ವಚ್ಛವಾಗಿಡುವ ಬದಲು ಹಾಳು ಮಾಡಲು ಮುಂದಾಗುತ್ತಾರೆ. ಆದರೆ ಧಾರವಾಡದ ಮಹಾಂತ ನಗರ ಬಡಾವಣೆಯಲ್ಲಿ ಸ್ವಚ್ಛ ಮಾಡುವುದಕ್ಕೆ ಒಂದು ಸ್ಪರ್ಧೆ ಮಾಡಿದ್ದಾರೆ.

ಸ್ವಚ್ಛತೆಯನ್ನು ಸವಾಲಾಗಿ ಸ್ವೀಕರಿಸುವ ಜನರು ಏನು ಮಾಡಬಹುದು ಎನ್ನುವುದಕ್ಕೆ ಧಾರವಾಡದಲ್ಲಿ ನಡೆದ ಈ ಸ್ಪರ್ಧೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಯುಗಾದಿ ಇರುವ ಹಿನ್ನಲೆಯಲ್ಲಿ ಈ ರೀತಿಯಲ್ಲಿ ಸ್ವಚ್ಛತೆ ನಡೆಯುತ್ತಿದೆ ಎಂದು ಹಲವು ಭಾವಿಸಿದ್ದರು. ಆದರೆ, ಇಲ್ಲಿನ ಬಡಾವಣೆಯ ಜನರಿಗೆ ಸ್ವಚ್ಛ ಮಾಡುವ ಸ್ಪರ್ದೆ ಏರ್ಪಡಿಸಲಾಗಿತ್ತು. ಈ ನಿಟ್ಟಿನಲ್ಲಿ ಮನೆ ಮುಂದೆ ಸ್ವಚ್ಛ ಮಾಡಿ, ರಂಗೋಲಿ ಹಾಕಿ, ಸ್ವಚ್ಛ ಭಾರತ ಅಭಿಯಾನದ ಘೋಷ ವಾಕ್ಯವನ್ನು ಆಚರಣೆಗೆ ತರಲಾಯಿತು.

ಇದರ ಹಿಂದೆ ಒಂದು ವಿಭಿನ್ನ ಬಗೆಯ ಸ್ಪರ್ಧೆ ಹಾಗೂ ಸ್ವಚ್ಛ ಭಾರತದ ಪರಿಕಲ್ಪನೆ ಇದೆ. ಈ ಬಡಾವಣೆಯ ನಿವಾಸಿಗಳ ಸಂಘದಿಂದ ಪ್ರತಿ ವರ್ಷ ಯುಗಾದಿ ಸಂದರ್ಭದಲ್ಲಿ ಸಭಾಭವನದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಪರ್ಧೆ ಆಯೋಜಿಸಲು ಅವಕಾಶ ಇಲ್ಲದ್ದರಿಂದ ಮನೆಯ ಮುಂದೆಯೇ ರಂಗೋಲಿ ಹಾಕುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಎಂದು ಸ್ಥಳೀಯರಾದ ಪ್ರಜ್ಞಾ ನಡಕಟ್ಟಿ ಹೇಳಿದ್ದಾರೆ.

ಸಾಮಾನ್ಯವಾಗಿ ಎಲ್ಲ ಕಡೆ ನಡೆಯುವಂತೆ ಇಲ್ಲಿಯೂ ರಂಗೋಲಿ ಸ್ಪರ್ಧೆ ನಡೆದಿತ್ತು. ಆದರೆ ಇದು ವಿಶೇಷ ಏಕೆಂದರೆ ತಮ್ಮ ಮನೆಯ ಅಂಗಳವಷ್ಟೇ ಅಲ್ಲದೇ ಸುತ್ತಮುತ್ತಲಿನ ಭಾಗವನ್ನು ಕೂಡ ಸ್ವಚ್ಛಗೊಳಿಸಬೇಕು ಎಂಬ ಷರತ್ತು ಹಾಕಲಾಗಿತ್ತು. ಹೀಗಾಗಿ ಎಲ್ಲರೂ ಕೂಡ ಸ್ವಚ್ಛತೆಯನ್ನು ಸ್ಪರ್ಧೆಯ ಒಂದು ಭಾಗವಾಗಿ ಪರಿಗಣಿಸಿ, ಮೊದಲು ತಮಗೆ ಸಂಬಂಧಿಸಿದ ಪ್ರದೇಶವನ್ನು ಸ್ಚಚ್ಛ ಮಾಡಿ ರಂಗೋಲಿಯನ್ನು ಹಾಕಿದರು. ಒಂದು ಕಡೆ ಯುಗಾದಿ ಸಂಭ್ರಮ. ಇನ್ನೊಂದು ಕಡೆ ರಂಗೋಲಿ ಅಂದ. ಮತ್ತೊಂದು ಕಡೆ ಸ್ವಚ್ಛತಾ ಅಭಿಯಾನದ ಸಾಕಾರತೆ. ಹೀಗಾಗಿ ಈ ಸ್ಪರ್ಧೆಯಲ್ಲಿ ವಯಸ್ಸಿನ ಭೇದ ಭಾವ ಇಲ್ಲದೇ ಎಲ್ಲರೂ ಭಾಗವಹಿಸಿದರು.

different competition

ಸ್ವಚ್ಛ ಮಾಡಿ ರಂಗೋಲಿ ಹಾಕುತ್ತಿರುವ ದೃಶ್ಯ

ಒಂದು ಬಡಾವಣೆಯ ಜನರು ಸೇರಿ ಕೊರೊನಾ ಮಧ್ಯೆಯೂ ವಿಭಿನ್ನವಾಗಿ ಯುಗಾದಿಯನ್ನು ಆಚರಿಸಬಹುದು ಎನ್ನುವುದಕ್ಕೆ ಧಾರವಾಡದ ಈ ಬಡಾವಣೆಯ ಜನರೇ ಸಾಕ್ಷಿ.

ಇದನ್ನೂ ಓದಿ:

ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಾಗರದ ಯುವಕ; ಜನುಮದಿನಕ್ಕೂ ಮೊದಲು ಸ್ವಚ್ಛತಾ ಕಾರ್ಯ

ಸ್ವಚ್ಛ ಕಿರೀಟ ಪಟ್ಟವನ್ನು ಮುಡಿಗೇರಿಸಿಕೊಳ್ಳಲು ಮೈಸೂರು ಕಸರತ್ತು: ಮುಂಜಾಗೃತಾ ಕ್ರಮಕ್ಕೆ ಮುಂದಾದ ಮಹಾನಗರ ಪಾಲಿಕೆ

( Dharwad people performed cleaning competition in a unique way to maintain hygiene )

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!