ಶಿವಸೇನೆ ಪ್ರತಿಭಟನೆ; ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ ಬಸ್​ ಸಂಚಾರ ಸ್ಥಗಿತ

| Updated By: ganapathi bhat

Updated on: Mar 20, 2021 | 5:14 PM

ಬೆಳಗಾವಿಯಿಂದ ನಿತ್ಯ 400 ಕ್ಕೂ ಅಧಿಕ ಕೆಎಸ್ಆರ್‌ಟಿಸಿ ಬಸ್‌ಗಳು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದವು. ಆದರೆ ಶೀವಸೇನೆಯವರ ಪ್ರತಿಭಟನೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರ ಬಂದ್ ಮಾಡಲಾಗಿದೆ.

ಶಿವಸೇನೆ ಪ್ರತಿಭಟನೆ; ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ ಬಸ್​ ಸಂಚಾರ ಸ್ಥಗಿತ
ಕೆಎಸ್​ಆರ್​ಟಿಸಿ ಬಸ್​
Follow us on

ಬೆಳಗಾವಿ: ಜಿಲ್ಲೆಯ ಮಹಾನಗರ ಪಾಲಿಕೆ ಮುಂದಿನ ಕನ್ನಡ ಧ್ವಜವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದ ಇಂದು (ಮಾರ್ಚ್ 20) ಪ್ರತಿಭಟನೆ ನಡೆಸಿದೆ. ಕೊಲ್ಲಾಪುರ, ಸತಾರ, ಸಾಂಗ್ಲಿ ಜಿಲ್ಲೆಯಲ್ಲಿ ಪ್ರತಿಭಟನೆ ತೀವ್ರವಾಗಿದ್ದು, ಕನ್ನಡಿಗರ ಹೊಟೇಲ್ ಮತ್ತು ಅಂಗಡಿಗಳನ್ನು ಬಂದ್ ಮಾಡಿಸಿ ಧರಣಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ ಬಸ್​ಗಳ ಸಂಚಾರವನ್ನು ಬಂದ್ ಮಾಡಲಾಗಿದೆ.

ಬೆಳಗಾವಿಯಿಂದ ನಿತ್ಯ 400 ಕ್ಕೂ ಅಧಿಕ ಕೆಎಸ್ಆರ್‌ಟಿಸಿ ಬಸ್‌ಗಳು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದವು. ಆದರೆ ಶೀವಸೇನೆಯವರ ಪ್ರತಿಭಟನೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರ ಬಂದ್ ಮಾಡಲಾಗಿದೆ. ಇನ್ನು ಕರ್ನಾಟಕ ಪಾಸಿಂಗ್ ವಾಹನಗಳ ಸಂಚಾರಕ್ಕೆ ಅವಕಾಶ ಕೊಡಲ್ಲ ಎಂದಿರುವ ಶಿವಸೇನೆ ಪುಂಡಾಟಿಕೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ ಕರ್ನಾಟಕ ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತವಾಗಿದೆ.

ಶಿವಸೇನೆ ಪ್ರತಿಭಟನೆಗೆ ವಾಟಾಳ್​ ನಾಗರಾಜ್ ತಿರುಗೇಟು:
ಶಿವಸೇನೆ ಮತ್ತು ಎಂಇಎಸ್​ (ಮಹಾರಾಷ್ಟ್ರ ಏಕೀಕರಣ ಸಮೀತಿ)ನ ಪುಂಡಾಟಿಕೆಯ ಮುಂದಿನ ಹೋರಾಟದ ರೂಪುರೇಷೆಗೆ ಸಂಬಂಧಿಸಿದಂತೆ, ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ನೇತೃತ್ವದಲ್ಲಿ ಇಂದು ವುಡ್ ಲ್ಯಾಂಡ್ ಹೋಟೆಲ್​ನ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ಪರಬಾಷಿಗರ ಸಂಖ್ಯೆ ಜಾಸ್ತಿಯಾಗುತ್ತಿದೆ. ಬೇರೆ ರಾಜಕೀಯ ಪಕ್ಷಗಳು ಲೂಟಿಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಿಗರ ಪರಿಸ್ಥಿತಿ ಏನೂ..? ಬ್ಯಾಂಕ್​ಗಳಲ್ಲಿ ಕನ್ನಡ ಮಾತನಾಡುವವರು ಇಲ್ಲ. ಹಿಂದಿಯವರು ಬ್ಯಾಂಕ್​ನಲ್ಲಿ ದಬ್ಬಾಳಿಕೆಯನ್ನು ಮಾಡುವುದು ಹೆಚ್ಚಾಗಿದೆ.ಹೀಗೆ ಆದರೆ ಬೆಂಗಳೂರು ಉಳಿಯುವುದಿಲ್ಲ ಎಂದು ಹೇಳಿದ್ದಾರೆ.

ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ನೇತೃತ್ವದಲ್ಲಿ ಶೀವಸೇನೆ ಪ್ರತಿಭಟನೆ ವಿರುದ್ಧ ಪೂರ್ವಭಾವಿ ಸಭೆ

ಎಂಎಲ್ಎ, ಎಂಪಿ, ಅಧಿಕಾರಿಗಳಿಗೆ ಇದೆಲ್ಲ ಬೇಕಾಗಿಲ್ಲ. ಬಹಳ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ 23ನೇ ತಾರೀಖಿನಂದು 11 ಗಂಟೆಗೆ ಮಹಾರಾಷ್ಟ್ರ ಏಕೀಕರಣ ಶಿವಸೇನೆ ವಿರುದ್ಧ ಬೆಳಗಾವಿಯ ಕಿತ್ತೂರು ಚೆನ್ನಮ್ಮ ಸರ್ಕಲ್​ನಲ್ಲಿ ತೀವ್ರ ಹೋರಾಟ ಮಾಡಲಾಗುತ್ತದೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಯಡಿಯೂರಪ್ಪ ಒಬ್ಬ ಸರ್ವಾಧಿಕಾರಿ. ಅತ್ಯಂತ ಕೆಳಮಟ್ಟದ ರಾಜಕೀಯ ಮಂತ್ರಿ. ಸರ್ಕಾರಕ್ಕೀಗ ಯಾವುದು ಬೇಕಾಗಿಲ್ಲ. ಅವರಿಗೀಗ ಸಿಡಿ ಮಾತ್ರ ಬೇಕಾಗಿದೆ. ಸಿಡಿ ವಿಚಾರದಲ್ಲಿ ಯಡಿಯೂರಪ್ಪ ಅವರು ಗೌಪ್ಯವಾಗಿದ್ದಾರೆ. ಸಿಡಿ ವಿಚಾರ ಸರ್ಕಾರದ ಮರ್ಯಾದೆ ಪ್ರಶ್ನೆಯಾಗಿದೆ ಮತ್ತು ಯಾರಿಗೂ ಇದು ಗೌರವ ಕೊಡುವಂತಹದಲ್ಲ. ಈ ನಿಟ್ಟಿನಲ್ಲಿ ಸುವರ್ಣ ಸೌಧದಲ್ಲಿ ಶಾಸನ ಸಭೆ ಮಾಡಿಲ್ಲ. ಜಂಟಿ ಅಧಿವೇಶನ ಮಾಡಲಿಲ್ಲ ಹಾಗೂ ಬೆಂಗಳೂರು ಬಿಟ್ಟು ಅಲ್ಲಾಡುತ್ತಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಇದನ್ನೂ ಓದಿ:

ಅನುದಾನ ಕಡಿತ ವಿರೋಧಿಸಿ ಸದನದಲ್ಲಿ ಬಾವಿಗಿಳಿದು ಜೆಡಿಎಸ್ ಸದಸ್ಯರ ಪ್ರತಿಭಟನೆ: ಸ್ಪೀಕರ್ ಕಾಗೇರಿ ಕೆಂಡಾಮಂಡಲ

ಕೊಟ್ಟ ಮಾತು ತಪ್ಪಿದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮತ್ತೆ ಪ್ರತಿಭಟನೆಗೆ ಇಳಿದ ಅಂಗನವಾಡಿ ಕಾರ್ಯಕರ್ತೆಯರು.. ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ