ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಬಗ್ಗೆ ಕೇಳಿದ ಪ್ರಶ್ನೆಗೆ ಬಿವೈ ವಿಜಯೇಂದ್ರ ಕ್ಲುಪ್ತ ಪ್ರತಿಕ್ರಿಯೆ ನೀಡಿದರು
ಪ್ರಧಾನಿ ಮೋದಿಯವರ ಹೊಸಪೇಟೆ ಸಭೆಯಲ್ಲಿ ತಾನು ಭಾಗಿಯಾಗಿದ್ದೆ, ಅಲ್ಲಿ ಅವರು ಸುಮಾರು ಒಂದು ಗಂಟೆ ಕಾಲ ಮಾತಾಡಿದರು ಮತ್ತು ಆಯಾಸದ ಲವಲೇಶವೂ ಅವರ ಮುಖದಲ್ಲಿ ಕಾಣಲಿಲ್ಲ ಎಂದು ವಿಜಯೇಂದ್ರ ಹೇಳಿದರು. ಎಲ್ಲ ಸಭೆಗಳು ಯಶ ಕಂಡಿವೆ ಮತ್ತು ಜನರ ಉತ್ಸಾಹ ಮತ್ತು ಪ್ರತಿಕ್ರಿಯೆ ನೋಡಿ ಮೋದಿಯವರೇ ಸಂತೃಪ್ತಿ ವ್ಯಕ್ತಪಡಿಸಿದರು ಎಂದು ಹೇಳಿದ ವಿಜಯೇಂದ್ರ ಎಲ್ಲರಲ್ಲೂ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ನೋಡುವ ಮಹದಾಸೆ ಇದೆ ಎಂದರು.
ಬಾಗಲಕೋಟೆ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ವಿದೇಶದಲ್ಲಿ ಅಡಗಿ ಕೂತಿರುವ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ (Prajwal Revanna) ಬಗ್ಗೆ ಕೇಳಿದ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದರು. ದೂರು ದಾಖಲಾದ ಬಳಿಕ ರಾಜ್ಯ ಸರ್ಕಾರ ಎಸ್ ಐಟಿಯನ್ನು (SIT) ರಚಿಸಿದೆ, ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ, ಅಷ್ಟು ಮಾತ್ರ ಹೇಳಬಲ್ಲೆ ಎಂದು ಹೇಳಿದರು. ನಿನ್ನೆ ರಾಜ್ಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರ ನಡೆಸಿದ ಬಗ್ಗೆ ಮಾತಾಡಿದ ವಿಜಯೇಂದ್ರ, ರವಿವಾರದಂದು ಪ್ರಧಾನಿ ಮೋದಿ ದಣಿವರಿಯದೆ 4 ಸಭೆಗಳಲ್ಲಿ ಭಾಗವಹಿಸಿದರು. ಉತ್ತರ ಕರ್ನಾಟಕದ ಎಲ್ಲ ಕ್ಷೇತ್ರಗಳ ಮತದಾರರನ್ನು ಉದ್ದೇಶಿಸಿ ಮಾತಾಡಿದರು. ಪ್ರಧಾನಿ ಮೋದಿಯವರ ಹೊಸಪೇಟೆ ಸಭೆಯಲ್ಲಿ ತಾನು ಭಾಗಿಯಾಗಿದ್ದೆ, ಅಲ್ಲಿ ಅವರು ಸುಮಾರು ಒಂದು ಗಂಟೆ ಕಾಲ ಮಾತಾಡಿದರು ಮತ್ತು ಆಯಾಸದ ಲವಲೇಶವೂ ಅವರ ಮುಖದಲ್ಲಿ ಕಾಣಲಿಲ್ಲ ಎಂದು ವಿಜಯೇಂದ್ರ ಹೇಳಿದರು. ಎಲ್ಲ ಸಭೆಗಳು ಯಶ ಕಂಡಿವೆ ಮತ್ತು ಜನರ ಉತ್ಸಾಹ ಮತ್ತು ಪ್ರತಿಕ್ರಿಯೆ ನೋಡಿ ಮೋದಿಯವರೇ ಸಂತೃಪ್ತಿ ವ್ಯಕ್ತಪಡಿಸಿದರು ಎಂದು ಹೇಳಿದ ವಿಜಯೇಂದ್ರ ಎಲ್ಲರಲ್ಲೂ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ನೋಡುವ ಮಹದಾಸೆ ಇದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿಯಿಂದ ಕರ್ನಾಟಕದ ಜನ ಬೇಸತ್ತಿದ್ದಾರೆ: ಬಿವೈ ವಿಜಯೇಂದ್ರ