ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿಯಿಂದ ಕರ್ನಾಟಕದ ಜನ ಬೇಸತ್ತಿದ್ದಾರೆ: ಬಿವೈ ವಿಜಯೇಂದ್ರ
ಶಿವಮೊಗ್ಗ ಕ್ಷೇತ್ರಕ್ಕೆ ಈಶ್ವರಪ್ಪನವರ ಕೊಡುಗೆ ಏನೂ ಇಲ್ಲ ಮತ್ತು ಪಕ್ಷಕ್ಕೂ ಅವರ ಕಾಣಿಕೆ ನಗಣ್ಯ. ಪಕ್ಷಕ್ಕೆ ಹಾನಿಯಾಗುವ ಚುಟುವಟಿಕೆಗಳಲ್ಲಿ ಭಾಗಿಯಾಗದಂತೆ ಹೇಳಿದರೂ ಅವರು ತಮ್ಮ ದಿಕ್ಕಿನಲ್ಲಿ ಮುಂದುವರಿದ ಕಾರಣ 6 ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ವಿಜಯೇಂದ್ರ ಹೇಳಿದರು.
ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ (Congress government) ಜನಪ್ರಿಯತೆ ತಗ್ಗಿದೆ, ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಸರ್ಕಾರದ ಆಡಳಿತ ವೈಖರಿಯಿಂದ ಜನ ಬೇಸತ್ತಿದ್ದಾರೆ, ಬೆಲೆಗಳನ್ನು ಸಿಕ್ಕಾಪಟ್ಟೆ ಏರಿಸಿದ್ದೊಂದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆ, ಹಾಗಾಗಿ ಅದನ್ನು ಸ್ಥಾನಪಲ್ಲಟಗೊಳಿಸಲು ಜನ ಕಾಯತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಹೇಳಿದರು. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮತ್ತೊಮ್ಮೆ ಪ್ರಧಾನಿಯಾಗುವುದನ್ನು ನೋಡಲು ಕಾತರಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ, ಮತ್ತು ಅವರ ಶ್ರಮದ ಫಲದಿಂದಾಗೇ ರಾಜ್ಯದ ಎಲ್ಲ 28 ಸ್ಥಾನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಹೇಳಿದರು.
ಶಿವಮೊಗ್ಗ ಕ್ಷೇತ್ರಕ್ಕೆ ಈಶ್ವರಪ್ಪನವರ ಕೊಡುಗೆ ಏನೂ ಇಲ್ಲ ಮತ್ತು ಪಕ್ಷಕ್ಕೂ ಅವರ ಕಾಣಿಕೆ ನಗಣ್ಯ. ಪಕ್ಷಕ್ಕೆ ಹಾನಿಯಾಗುವ ಚುಟುವಟಿಕೆಗಳಲ್ಲಿ ಭಾಗಿಯಾಗದಂತೆ ಹೇಳಿದರೂ ಅವರು ತಮ್ಮ ದಿಕ್ಕಿನಲ್ಲಿ ಮುಂದುವರಿದ ಕಾರಣ 6 ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ವಿಜಯೇಂದ್ರ ಹೇಳಿದರು. ಶಿವಮೊಗ್ಗ ಕ್ಷೇತ್ರದಲ್ಲಿ ಬಿವೈ ರಾಘವೇಂದ್ರ ಕನಿಷ್ಟ 2.5 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದ ಅವರು ನಾಳೆ ಭದ್ರಾವತಿಯಲ್ಲಿ ರಾಘಣ್ಣ ಪರ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಪ್ರಚಾರ ಮಾಡಲಿದ್ದಾರೆ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬರುವ ನಿರೀಕ್ಷೆ ಇದೆ ಮತ್ತು ಇವತ್ತು ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬರಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗ್ಯಾರಂಟಿ ಯೋಜನೆ ನಿಲ್ಲುತ್ತವೆ ಅಂತ ವಿಜಯೇಂದ್ರ ಕನಸು ಕಾಣುತ್ತಿದ್ದಾರೆ, ಅವು ಯಾವತ್ತೂ ನಿಲ್ಲಲ್ಲ: ಡಿಕೆ ಶಿವಕುಮಾರ್