ಕಲಬುರಗಿಯಲ್ಲಿ ಬಿಜೆಪಿ ಸೋತಿದ್ದಕ್ಕೆ ಅವಲೋಕನ ಸಭೆ: ನಾಯಕರಿಗೆ ಹಿಗ್ಗಾಮುಗ್ಗಾ ಕ್ಲಾಸ್

|

Updated on: Jul 05, 2024 | 8:10 PM

ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್​ ಸಮ್ಮುಖದಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರಗಿ ಲೋಕಸಭಾ ಕ್ಷೇತ್ರಗಳ ಪಕ್ಷದ ಪ್ರಮುಖರೊಂದಿಗೆ ಲೋಕಸಭಾ ಚುನಾವಣೆಯ ಫಲಿತಾಂಶದ ಅವಲೋಕನ ಸಭೆ ಮಾಡಲಾಗಿದೆ. ಈ ವೇಳೆ ಮುಖಂಡರಿಗೆ ತರಾಟೆ ತೆಗೆದುಕೊಳ್ಳಲಾಗಿದೆ.

ಕಲಬುರಗಿಯಲ್ಲಿ ಬಿಜೆಪಿ ಸೋತಿದ್ದಕ್ಕೆ ಅವಲೋಕನ ಸಭೆ: ನಾಯಕರಿಗೆ ಹಿಗ್ಗಾಮುಗ್ಗಾ ಕ್ಲಾಸ್
ಕಲಬುರಗಿಯಲ್ಲಿ ಬಿಜೆಪಿ ಸೋತಿದ್ದಕ್ಕೆ ಅವಲೋಕನ ಸಭೆ ನಾಯಕರಿಗೆ ಹಿಗ್ಗಾಮುಗ್ಗಾ ಕ್ಲಾಸ್
Follow us on

ಬೆಂಗಳೂರು, ಜುಲೈ 05: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ (BJP) ಸೋಲು ಕುರಿತಾಗಿ ಇಂದು  ಅವಲೋಕನ ಸಭೆ ಮಾಡಲಾಗಿದೆ. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರರಿಂದ (Vijayendra) ತರಾಟೆ ತೆಗೆದುಕೊಳ್ಳಲಾಗಿದೆ. ಈ ವೇಳೆ ಕಲಬುರಗಿ ಕ್ಷೇತ್ರದ ಬಿಜೆಪಿ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ವೇಳೆ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ್​ನಿಂದ ಹೊಂದಾಣಿಕೆ ಆರೋಪ ಮಾಡಿದ್ದಾರೆ.

ಸಭೆಯಲ್ಲಿ ಮುಖಂಡರಿಗೆ ವಿಜಯೇಂದ್ರ ತರಾಟೆ

ಹೊಂದಾಣಿಕೆ ಕಾರಣದಿಂದ ಬಿಜೆಪಿಗೆ ಸೋಲು ಎಂದು ಕೆಲವರು ಆರೋಪಿಸಿದ್ದು, ಕಲಬುರಗಿ ಲೋಕಸಭಾ ಕ್ಷೇತ್ರದ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿದೆ. ಪಕ್ಷ, ಅಭ್ಯರ್ಥಿ ವಿರುದ್ಧ ಯಾರೆಲ್ಲ ಮಸಲತ್ತು ಮಾಡಿದ್ದರೆಂದು ಗೊತ್ತಿದೆ ಎಂದು ಮುಖಂಡರ ಸಭೆಯಲ್ಲಿ ವಿಜಯೇಂದ್ರ ತರಾಟೆ ತೆಗೆದುಕೊಂಡರು.

ಬಿವೈ ವಿಜಯೇಂದ್ರ ಟ್ವೀಟ್​

ಕಲಬುರಗಿ ಜಿಲ್ಲಾ ಬಿಜೆಪಿ ನಾಯಕರಿಗೆ ರಾಧಾಮೋಹನ ದಾಸ್ ಕೂಡ ತರಾಟೆ ತೆಗೆದುಕೊಂಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಪಡೆದ ಮತಗಳಿಗಿಂತಲೂ ಕಡಿಮೆ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಟಕ್ಕರ್ ಕೊಡುವ ಬದಲು ಹಸ್ತಲಾಘವ ಮಾಡಿದ್ದೀರಿ. ಕಲಬುರಗಿಯಲ್ಲಿ ಬಿಜೆಪಿ ಸೋಲಿಗೆ ಒಳಒಪ್ಪಂದವೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪರಿಷತ್ ಚುನಾವಣೆ: ಈಶಾನ್ಯ ಪದವೀಧರ ಕ್ಷೇತ್ರದಲ್ಲೂ ಕಾಂಗ್ರೆಸ್​​ಗೆ ಭರ್ಜರಿ ಜಯ

ಬಾಬುರಾವ್ ಚೌಹಾಣ್ ಮಾತ್ರ ಪಕ್ಷದ ಪರ ಕೆಲಸ ಮಾಡಿದ್ದಾರೆ. ಪರಾಜಿತ ಅಭ್ಯರ್ಥಿ ಡಾ.ಉಮೇಶ್ ಜಾಧವ್ ವಿರುದ್ಧವೂ ಅಗರ್ವಾಲ್ ಕಿಡಿ ಕಾರಿದ್ದು, 2019ರಲ್ಲಿ ಡಾ.ಉಮೇಶ್ ಜಾಧವ್ ಗೆದ್ದ ನಂತರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಪುತ್ರನ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕೆಲಸ ಮಾಡಿದ್ದಾರೆಂದು ಆರೋಪಿಸಿದರು. ಆ ಮೂಲಕ ರಾಧಾಮೋಹನ ದಾಸ್, ಬಿ.ವೈ.ವಿಜಯೇಂದ್ರಗೆ ಮುಖಂಡರ ಮನವರಿಕೆ ಮಾಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮರುಕಳಿಸದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ.

ಶಾಸಕ ಬಸವರಾಜ ಮತ್ತಿಮೂಡ್, ಮಣಿಕಂಠ ರಾಠೋಡ್, ಚಂದ್ರಪಾಟೀಲ್​, ರಘುನಾಥ ಮಲ್ಕಾಪುರೆ, ನಿನಿತ್ ಗುತ್ತೇದಾರ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:51 pm, Fri, 5 July 24