Cancer Cases: ಕರ್ನಾಟಕದಲ್ಲಿ ಕ್ಯಾನ್ಸರ್​​​ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಏರಿಕೆ

ಕರ್ನಾಟಕದಲ್ಲಿ ಕ್ಯಾನ್ಸರ್​​​ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಎಸ್‌ಪಿ ಸಿಂಗ್ ಬಘೆಲ್ ಅವರು ಲೋಕಸಭೆಯಲ್ಲಿ ತಿಳಿಸಿದರು.

Cancer Cases: ಕರ್ನಾಟಕದಲ್ಲಿ ಕ್ಯಾನ್ಸರ್​​​ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಏರಿಕೆ
ಕ್ಯಾನ್ಸರ್​
Follow us
ವಿವೇಕ ಬಿರಾದಾರ
|

Updated on: Jul 25, 2023 | 10:06 AM

ಬೆಂಗಳೂರು: ಕರ್ನಾಟಕದಲ್ಲಿ (Karnataka) ಕ್ಯಾನ್ಸರ್ (Cancer)​​​ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಎಸ್‌ಪಿ ಸಿಂಗ್ ಬಘೆಲ್ ಅವರು ಲೋಕಸಭೆಯಲ್ಲಿ (Lok Sabha) ತಿಳಿಸಿದರು. ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದು, ಶುಕ್ರವಾರ (ಜು.21) ರಂದು ಸಂಸತ್ತಿನಲ್ಲಿ ಸಂಸದ ರಾಜ್‌ವೀರ್ ದಿಲೆರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕರ್ನಾಟಕದಲ್ಲಿ ಕ್ಯಾನ್ಸರ್ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿವೆ. 2020 ರಲ್ಲಿ ಕರ್ನಾಟಕದಲ್ಲಿ ಕ್ಯಾನ್ಸರ್ ಪ್ರಕರಣಗಳ ಅಂದಾಜು ಪ್ರಮಾಣ 85,968 ಆಗಿದ್ದು, 2021 ರಲ್ಲಿ 88,126 ಕ್ಕೆ ಏರಿಯಾಗಿದ್ದವು. 2022 ರಲ್ಲಿ, 90,349 ಪ್ರಕರಣಗಳು ವರದಿಯಾಗಿವೆ.

ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕ್ಯಾನ್ಸರ್​​ನಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಳವಾಗಿದೆ. 2020 ರಲ್ಲಿ, 47,113 ಸಾವುಗಳು ವರದಿಯಾಗಿದ್ದು, ಇದು 2021 ರಲ್ಲಿ 48,290 ಕ್ಕೆ ಮತ್ತು 2022 ರಲ್ಲಿ 49,516 ಜನ ಸಾವನ್ನಪ್ಪಿದ್ದಾರೆ. ಕ್ಯಾನ್ಸರ್ ಪ್ರಕರಣಗಳು ಮತ್ತು ಮರಣಗಳಲ್ಲಿ ತಮಿಳುನಾಡಿನ ನಂತರ ಕರ್ನಾಟಕವು ದಕ್ಷಿಣದ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Bone Cancer: ಮೂಳೆ ಕ್ಯಾನ್ಸರ್​​​ನ ಆರಂಭಿಕ ಲಕ್ಷಣಗಳನ್ನು ತಿಳಿದುಕೊಳ್ಳಿ

ಈ ಬಗ್ಗೆ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ರಾಮಚಂದ್ರ ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ, ವಿಜಯಪುರ ಮತ್ತು ಕಲಬುರಗಿಯಂತಹ ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿವೆ. “ತಡವಾದ ಸ್ಕ್ರೀನಿಂಗ್ ಮತ್ತು ರೋಗನಿರ್ಣಯವು ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತದೆ”. ಈ ಗಡಿ ಜಿಲ್ಲೆಗಳ ಜನರು ತಪಾಸಣೆಗಾಗಿ ದೂರದ ಪ್ರಯಾಣ ಮಾಡಬೇಕಾಗುತ್ತದೆ. ಸ್ಕ್ರೀನಿಂಗ್ ಮತ್ತು ರೋಗನಿರ್ಣಯದಲ್ಲಿ ವಿಳಂಬವು ಮರಣ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಹೇಳಿದರು.

ಕ್ಯಾನ್ಸರ್ ಪ್ರಕರಣಗಳ ಹೆಚ್ಚಳಕ್ಕೆ ತಂಬಾಕು ಸೇವನೆ, ಧೂಮಪಾನ, ಸ್ಥೂಲಕಾಯತೆ ಮತ್ತು ಮದ್ಯಪಾನ ಸೇರಿದಂತೆ ವಿವಿಧ ಕಾರಣಗಳನ್ನು ಅವರು ತಿಳಿಸಿದರು. ಸ್ಥೂಲಕಾಯತೆಯು ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿದೆ ಎಂದರು. “ನಾನು ಅಧ್ಯಯನ ಮಾಡುವಾಗ, 70-80 ವರ್ಷ ವಯಸ್ಸಿನ ಹಿರಿಯರಲ್ಲಿ ಹೆಚ್ಚಾಗಿ ಕ್ಯಾನ್ಸರ್​ ರೋಗ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ 45-60 ವರ್ಷ ವಯಸ್ಸಿನವರಲ್ಲಿ ಕಾನ್ಸರ್​ ರೋಗ ಕಾಣಿಸಿಕೊಳ್ಳುತ್ತಿದೆ. ಮಾಲಿನ್ಯ, ಕೀಟನಾಶಕಗಳು, ಕಳೆನಾಶಕಗಳ ಬಳಕೆ ಮತ್ತು ತಂಬಾಕು ಸೇವನೆಯು ಕ್ಯಾನ್ಸರ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಡಾ ಅಜಯ್ ಕುಮಾರ್ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ