ಕಾಂತರಾಜು ವರದಿ ಬಂದಾಕ್ಷಣಕ್ಕೆ ಒಪ್ಪಲು ಅದೇನು ಭಾರತದ ಸಂವಿಧಾನನಾ?: ಕೆಎನ್ ರಾಜಣ್ಣ

| Updated By: Rakesh Nayak Manchi

Updated on: Nov 13, 2023 | 6:31 PM

ಕರ್ನಾಟಕದಲ್ಲಿ ಜಾತಿಜನಗಣತಿ ಬಿಡುಗಡೆಗೆ ಕಾಂಗ್ರೆಸ್ ತುದಿಗಾಲಿನಲ್ಲಿ ನಿಂತಿದ್ದರೆ, ಇತ್ತ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ವಿರೋಧಿಸುತ್ತಿವೆ. ಅಲ್ಲದೆ, ಲಿಂಗಾಯತ ಸಮುದಾಯ, ಒಕ್ಕಲಿಗ ಸಮುದಾಯ ಸೇರಿದಂತೆ ಹಲವು ಜಾತಿ ಸಮುದಾಯಗಳು ವರದಿ ಬಿಡುಗಡೆಗೆ ವಿರೋಧಿಸುತ್ತಿವೆ. ಈ ನಡುವೆ ಹೇಳಿಕೆ ನೀಡಿದ ಸಚಿವ ಕೆಎನ್ ರಾಜಣ್ಣ, ಜಾತಿಗಣತಿ ವರದಿ ಬಿಡುಗಡೆ ಆಗುತ್ತದೆ ಎಂದಿದ್ದಾರೆ.

ಕಾಂತರಾಜು ವರದಿ ಬಂದಾಕ್ಷಣಕ್ಕೆ ಒಪ್ಪಲು ಅದೇನು ಭಾರತದ ಸಂವಿಧಾನನಾ?: ಕೆಎನ್ ರಾಜಣ್ಣ
ಕೆಎನ್ ರಾಜಣ್ಣ
Follow us on

ತುಮಕೂರು, ನ.13: ಕರ್ನಾಟಕದಲ್ಲಿ ಜಾತಿ ಜನಗಣತಿ ವರದಿ (Caste Census Report) ಬಿಡುಗಡೆಗೆ ಕಾಂಗ್ರೆಸ್ ತುದಿಗಾಲಿನಲ್ಲಿ ನಿಂತಿದ್ದರೆ, ಇತ್ತ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ವಿರೋಧಿಸುತ್ತಿವೆ. ಅಲ್ಲದೆ, ಲಿಂಗಾಯತ ಸಮುದಾಯ, ಒಕ್ಕಲಿಗ ಸಮುದಾಯ ಸೇರಿದಂತೆ ಹಲವು ಜಾತಿ ಸಮುದಾಯಗಳು ವರದಿ ಬಿಡುಗಡೆಗೆ ವಿರೋಧಿಸುತ್ತಿವೆ. ಈ ನಡುವೆ ಹೇಳಿಕೆ ನೀಡಿದ ಸಹಕಾರ ಇಲಾಖೆ ಸಚಿವ ಕೆ.ಎನ್. ರಾಜಣ್ಣ (K.N.Rajanna), ಜಾತಿಗಣತಿ ವರದಿ ಬಿಡುಗಡೆ ಆಗುತ್ತದೆ ಎಂದಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಜಾತಿ ಗಣತಿ ಬಿಡುಗಡೆ ಮಾಡಿದ ತಕ್ಷಣವೇ ಸರ್ಕಾರ ಒಪ್ಪಿಬಿಟ್ಟಿದೆ ಅಂತಾ ಅಲ್ಲ. ವರದಿಯನ್ನು ಜನರಿಗೆ ನೀಡಲಾಗುತ್ತಿದೆ. ಅವರು ಚರ್ಚೆ ಮಾಡುತ್ತಾರೆ. ಯಾವುದು ಸರಿ, ಯಾವುದು ಸರಿ ಇಲ್ಲ ಅಂತಾ ಜನಾಭಿಪ್ರಾಯ ಸಂಗ್ರಹಣೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಜಾತಿ ಗಣತಿ ವಿರೋಧ: ಶಾಮನೂರು ಶಿವಶಂಕರಪ್ಪ ನಿರ್ಧಾರಕ್ಕೆ ಸ್ವಾಮೀಜಿಗಳ ಸಹಮತ

ಅಂತಿಮವಾಗಿ ಮಂತ್ರಿ ಮಂಡಲದಲ್ಲಿ ಯಾವ ಅಂಶ ಒಪ್ಪಬೇಕು, ಯಾವ ಅಂಶ ತಿರಸ್ಕರಿಸಬೇಕು ಅಂತಾ ಚರ್ಚೆ ಮಾಡಿ ಬಳಿಕ ತೀರ್ಮಾನ ಮಾಡಲಾಗುತ್ತದೆ. ವರದಿ ಜಾರಿ ಮಾಡಿದ ತಕ್ಷಣ ಒಪ್ಪಿಕೊಳ್ಳಬೇಕು ಅಂತ ಸರ್ಕಾರದ ಮೇಲೆ ಬೈಂಡಿಂಗ್ ಇಲ್ಲ. ಬಹಳ‌ ಜನ ಅದನ್ನ ತಪ್ಪು ಅರ್ಥ ಮಾಡಿಕೊಳ್ಳುತ್ತಾರೆ. ಬಿಹಾರದಲ್ಲಿ ಬಿಡುಗಡೆ ಆಯ್ತು, ಪರ ವಿರೋಧ ಎರಡೂ ಇದೆ. ಏನು ಆಕಾಶ ಬಿದ್ದೋಯ್ತಾ? ಸರ್ಕಾರ ವರದಿಯನ್ನು ಒಪ್ಪಿಕೊಂಡಿದಾ ಎಂದು ಕೇಳಿದರು.

ಕಾಂತರಾಜು ವರದಿ ಬಂದಾಕ್ಷಣಕ್ಕೆ ಒಪ್ಪಲು ಅದೇನು ಭಾರತದ ಸಂವಿಧಾನನಾ?

ಕಾಂತರಾಜು ಅವರು ಅವರ ಬುದ್ಧಿಶಕ್ತಿಗೆ ತಕ್ಕಂತೆ ಒಂದು ಸರ್ವೆ ಮಾಡಿಸಿದ್ದಾರೆ. ಜನರ ಅಭಿಪ್ರಾಯಗಳನ್ನ ಮಂತ್ರಿ ಮಂಡಲದಲಿಟ್ಟು ಅದರ ಚರ್ಚೆ ಮಾಡಿ ಒಪ್ಪುವಂತದ್ದನ್ನು ಒಪ್ಪುತ್ತೇವೆ. ಒಪ್ಪದೇ ಇರುವಂತಹದ್ದನ್ನು ತಿರಸ್ಕಾರ ಮಾಡುತ್ತೇವೆ. ಕಾಂತರಾಜು ವರದಿ ಬಂದಾಕ್ಷಣಕ್ಕೆ ಒಪ್ಪಲು ಅದೇನು ಭಾರತದ ಸಂವಿಧಾನನಾ? ಅದು ಕೇವಲ ಅವರ ಅಭಿಪ್ರಾಯ, ಸರ್ವೇ ಅಷ್ಟೆ ಎಂದರು.

ವರದಿ ವಿರೋಧಿಸಲು ಇವರು ಏನಾದರು ಇವರ ಕೈಗೆ ಬಂದಿದೆಯಾ? ಇವರೇನು ಓದಿದ್ದಾರಾ? ಅವೈಜ್ಙಾನಿಕ ಅಂತಾ ಹೇಗೆ ಹೇಳಲು ಆಗುತ್ತದೆ? ವರದಿ ಕೈ ಸೇರಿದ ಮೇಲೆ ಅಧ್ಯಯನ ಮಾಡಿದ ಮೇಲೆ ಹೇಳಿ ಎಂದರು.

ಇದನ್ನೂ ಓದಿ: ಮನೆಯಲ್ಲೇ ಕುಳಿತು ಜಾತಿ ಗಣತಿ ವರದಿ ಸಿದ್ಧಪಡಿಸಿದ್ದಾರೆ: ತಮ್ಮದೇ ಸರ್ಕಾರದ ವಿರುದ್ಧ ಶಾಮನೂರು ಶಿವಶಂಕರಪ್ಪ ಕಿಡಿ

ಹೈಕಮಾಂಡ್ ಸೂಚಿಸಿದರೆ ಲೋಕಸಭೆಗೆ ಸ್ಪರ್ಧೆ

ಪರಿಷತ್ ಆಯ್ತು, ವಿಧಾನಸಭೆ ಚುನಾವಣೆ ಆಯ್ತು. ಇನ್ನು ಲೋಕಸಭೆ ಚುನಾವಣೆ ಒಂದು ಬಾಕಿ ಇದೆ. ಲೋಕಸಭೆಗೆ ಸ್ಪರ್ಧೆ ಮಾಡಬೇಕು ಅನ್ನೋ ಆಸೆ ನನಗೆ ಇದೆ. ಹೈಕಮಾಂಡ್ ಸೂಚಿಸಿದರೆ ನಿಲ್ಲುತ್ತೇನೆ. ಅಲ್ಲಿಗೆ ಮೂರು ಸದನ ಆಗುತ್ತದೆ. ಒಪ್ಪಿಲ್ಲಾಂದರೆ ಸುಮ್ಮನೆ ಇರುತ್ತೇನೆ. ವಯಸ್ಸು ಇದ್ದರೆ ರಾಜ್ಯಸಭೆಗೂ ಬರುತ್ತೇನೆ ಎಂದರು.

ರಾಜ್ಯರಾಜಕಾರಣದಲ್ಲಿ ಯಾವ ಚುನಾವಣೆಗೂ ನಿಲ್ಲುವುದಿಲ್ಲ. ಲೋಕಸಭೆ ಹೇಗಿರುತ್ತದೆ ಅಂತಾ ನೋಡೋಣ ಅಂತಾ ಅಷ್ಟೆ. ಹಿಂದಿ ಬರದೇ ಇದ್ದರೆ ಕಷ್ಟ, ಬಹಳಷ್ಟು ಐಎಎಸ್ ಆಫಿಸರ್ಸ್​ಗೆ ಇಂಗ್ಲೀಷ್ ಬರುವುದೇ ಇಲ್ಲ. ತಳಸಮುದಾಯಗಳಿಗೆ ರಾಜಕಾರಣನೂ ಗೊತ್ತಿಲ್ಲ, ಅದರ ಅಧಿಕಾರದ ಪ್ರಭಾವನೂ ಗೊತ್ತಿಲ್ಲ. ಇವತ್ತಿಗೂ ಅಂತಹ ಮುಗ್ದ ಜನರು ಬಹಳಷ್ಟು ಇದ್ದಾರೆ. ಅರಿವು ಮೂಡಿ ಸಂಘಟಿತರಾದರೆ ಸರ್ವರಿಗೂ ಸಮಬಾಳು, ಸಮಪಾಲು ಅರ್ಥ ಆಗ ಬರುತ್ತದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ