ಸ್ನೇಹಿತರ ಫೋಟೋ ತೆಗೆಯಲು ಹೋಗಿ ಜೀವಬಿಟ್ಟ ಚಿಗುರು ಮೀಸೆ ಯುವಕ, ದೀಪಾವಳಿ ದಿನ ಮನೆಯ ದೀಪ ಕಳೆದುಕೊಂಡ ತಾಯಿಯ ಆಕ್ರಂದನ

ದಾಬಸ್ ಪೇಟೆ ರಸ್ತೆಯಲ್ಲಿರುವ ಡಾರ್ಕ್ ಫ್ಯಾಮಿಲಿ ರೆಸ್ಟೋರೆಂಟ್​ಗೆ ಬಂದಿದ್ದ ಆ ಯುವಕ ರೆಸ್ಟೋರೆಂಟ್ ನಲ್ಲಿ ಕಲರ್ ಫುಲ್ ಆಗಿ ಕಾಣುತ್ತಿರುವ ಆ ಚಿತ್ರಗಳ ನಡುವೆ ಸ್ನೇಹಿತರ ಫೋಟೋಗಳನ್ನ ತೆಗೆದಿದ್ದಾನೆ. ಈ ವೇಳೆ ಕಲರ್ ಫುಲ್ ಫೋಟೋ ತೆಗೆಯುವುದನ್ನ ಕಂಡ ಕೆಲ ಪುಂಡರು ಸೂರ್ಯನ ಕೈನಿಂದ ತಮ್ಮ ಫೊಟೋಗಳನ್ನು ತೆಗೆಸಿಕೊಂಡಿದ್ದು ಫೋಟೋಗಳನ್ನ ವಾಟ್ಸ್ ಆಪ್ ಗೆ ಹಾಕುವಂತೆ ಹೇಳಿದ್ದಾರಂತೆ. ಆದ್ರೆ ಈ ವೇಳೆ ಕ್ಯಾಮರಾ ಫೋಟೋ ಮೊಬೈಲ್ ಗೆ ಕಳಿಸಲು ಆಗಲ್ಲ ಅಂದಿದಕ್ಕೆ ಕ್ಯಾಮರಾ ಕಿತ್ತುಕೊಂಡು ಕಿರಿಕ್ ಮಾಡಿ, ಯುವಕನ ಮೇಲೆ ಹಲ್ಲೆ ಮಾಡಿ, ಸಾಯಿಸಿದ್ದಾರೆ.

ಸ್ನೇಹಿತರ ಫೋಟೋ ತೆಗೆಯಲು ಹೋಗಿ ಜೀವಬಿಟ್ಟ ಚಿಗುರು ಮೀಸೆ ಯುವಕ, ದೀಪಾವಳಿ ದಿನ ಮನೆಯ ದೀಪ ಕಳೆದುಕೊಂಡ ತಾಯಿಯ ಆಕ್ರಂದನ
ಸ್ನೇಹಿತರ ಫೋಟೋ ತೆಗೆಯಲು ಹೋಗಿ ಜೀವಬಿಟ್ಟ ಚಿಗುರು ಮೀಸೆ ಯುವಕ, ದೀಪಾವಳಿ ದಿನ ಮನೆಯ ದೀಪ ಕಳೆದುಕೊಂಡ ತಾಯಿಯ ಆಕ್ರಂದನ
Follow us
ಸಾಧು ಶ್ರೀನಾಥ್​
|

Updated on: Nov 13, 2023 | 6:14 PM

ಆತ ಇನ್ನೂ ಐಟಿಐ ಓದುತ್ತಿರುವ ಚಿಗುರು ಮೀಸೆ ಯುವಕ, ಓದುವ ಜೊತೆಗೆ ಫೋಟೋ ಶೂಟ್ ಅನ್ನ ಹವ್ಯಾಸ ಮಾಡಿಕೊಂಡಿದ್ದು ಕಲರ್ ಪುಲ್ ಫೋಟೋ ತೆಗೆಯುವುದರಲ್ಲಿ ಏಕ್ಸಪರ್ಟ್ ಆಗಿದ್ದ. ಹೀಗಾಗೆ ಸ್ನೇಹಿತರು ಪ್ರತಿ ಬಾರಿ ಅವನನ್ನ ಫೋಟೋಶೋಟ್ ಗೆ ಕರೆದುಕೊಂಡುಹೋಗುತ್ತಿದ್ದರು. ನಿನ್ನೆ ಭಾನುವಾರವೂ ಇದೇ ರೀತಿ ಸ್ನೇಹಿತರ ಜೊತೆ ಹೊರಗಡೆ ಹೋದವನು ಮನೆಗೆ ಬಂದಿದ್ದು ಮಾತ್ರ ಹೆಣವಾಗಿ.

ಒಂದಕ್ಕಿಂತ ಒಂದು ಫೋಟೋ ಕಲರ್ ಫುಲ್, ಬ್ಯೂಟಿಫುಲ್. ಪ್ರೊಫೆಷನಲ್ ಫೋಟೋ ಗ್ರಾಫರ್ ತೆಗೆಯುವ ರೇಂಜಿಗೆ ಈ ಯುವಕ ಕ್ಯಾಮರಾಗೆ ಅಡಿಕ್ಟ್​​ ಆಗಿದ್ದು ಸೋಶಿಯಲ್ ಮೀಡಿಯಾ ಹಾಗೂ ಸ್ನೇಹಿತರ ಬಳಗದಲ್ಲಿ ತನ್ನದೆ ಟ್ರೆಂಡ್ ಸೃಷ್ಟಿಸಿಕೊಂಡಿದ್ದ. ಆದ್ರೆ ಇದೇ ಕಲರ್ ಫುಲ್ ಫೋಟೋ ಟ್ರೆಂಡ್ ಆ ಯುವಕನ ಜೀವಕ್ಕೆ ಕೊಳ್ಳಿಯಿಟ್ಟಿದೆ. ಕಲರ್ ಕಲರ್ ಡಿಫರೆಂಟ್ ಫೋಟೊ ತೆಗೆಯುವ ಯುವಕ ಕ್ಯಾಮರಾದಿಂದಲೆ ಕೊಲೆಯಾಗಿ ಹೋಗಿದ್ದಾನೆ.

ಫೋಟೋ ತೆಗೆದು ಮೊಬೈಲ್ ಗೆ ಹಾಕಲಿಲ್ಲ ಅಂತ ಯುವಕನ ಕೊಲೆ

ಮೇಲಿನ ಚಿತ್ರದಲ್ಲಿ ಕಾಣುವಂತೆ, ಕೈಯಲ್ಲಿ ಕ್ಯಾಮರಾ ಹಿಡಿದು ಕಲರ್ ಫುಲ್ ಫೋಟೋ ತೆಗೆಯುತ್ತಾ ರೀಲ್ಸ್ ಮಾಡ್ತಿದ್ದ ಈ ಯುವಕನ ಹೆಸರು ಸೂರ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಕಛೇರಿ ಪಾಳ್ಯ ನಿವಾಸಿಯಾದ ಈತ ನಿನ್ನೆ ಸಂಜೆ ಹಬ್ಬ ಅಂತ ಸ್ನೇಹಿತರ ಫೋಟೋ ಶೂಟ್ ಮಾಡಲು ತೆರಳಿದ್ದ.

ನಗರದಿಂದ ದಾಬಸ್ ಪೇಟೆ ರಸ್ತೆಯಲ್ಲಿರುವ ಡಾರ್ಕ್ ಫ್ಯಾಮಿಲಿ ರೆಸ್ಟೋರೆಂಟ್​ಗೆ ಬಂದವನೆ ರೆಸ್ಟೋರೆಂಟ್ ನಲ್ಲಿ ಕಲರ್ ಫುಲ್ ಆಗಿ ಕಾಣುತ್ತಿರುವ ಆ ಚಿತ್ರಗಳ ನಡುವೆ ಸ್ನೇಹಿತರ ಫೋಟೋಗಳನ್ನ ತೆಗೆದಿದ್ದಾನೆ. ಇನ್ನು ಈ ವೇಳೆ ಕಲರ್ ಫುಲ್ ಫೋಟೋ ತೆಗೆಯುವುದನ್ನ ಕಂಡ ಕೆಲ ಪುಂಡರು ಸೂರ್ಯನ ಕೈನಿಂದ ತಮ್ಮ ಫೊಟೋಗಳನ್ನು ತೆಗೆಸಿಕೊಂಡಿದ್ದು ಫೋಟೋಗಳನ್ನ ವಾಟ್ಸ್ ಆಪ್ ಗೆ ಹಾಕುವಂತೆ ಹೇಳಿದ್ದಾರಂತೆ.

ಆದ್ರೆ ಈ ವೇಳೆ ಕ್ಯಾಮರಾ ಫೋಟೋ ಮೊಬೈಲ್ ಗೆ ಕಳಿಸಲು ಆಗಲ್ಲ ಅಂದಿದಕ್ಕೆ ಕ್ಯಾಮರಾ ಕಿತ್ತುಕೊಂಡು ಕಿರಿಕ್ ಮಾಡಿದ್ದು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಸೂರ್ಯನ ಎದೆ ಭಾಗಕ್ಕೆ ಹರಿತವಾದ ಆಯುಧದಿಂದ ಚುಚ್ಚಿದ್ದು ತೀವ್ರ ರಕ್ತ ಸಾವ್ರದಿಂದ ಬಳಲಿದ ಸೂರ್ಯ ಸ್ಥಳದಲ್ಲೆ ಕುಸಿದು ಬಿದ್ದಿದ್ದಾನೆ.

Also Read: ಫೋಟೋ ಶೂಟ್​​ ಮಾಡಲು ಹೋಗಿ 3 ವಿದ್ಯಾರ್ಥಿಗಳು ನೀರು ಪಾಲು: ಚಿಕ್ಕಬಳ್ಳಾಪುರದಲ್ಲಿ ಹೃದಯ ವಿದ್ರಾವಕ ಘಟನೆ

ಸೂರ್ಯ ರಕ್ತದ ಮಡುವಿನಲ್ಲಿ ಕುಸಿದು ಬೀಳ್ತಿದ್ದಂತೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದು ಕೂಡಲೆ ಸ್ನೇಹಿತರು ಸೂರ್ಯನನ್ನ ದೊಡ್ಡಬಳ್ಳಾಪುರ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ. ಆದ್ರೆ ಎದೆ ಭಾಗಕ್ಕೆ ಚುಚ್ಚಿದ್ದ ಕಾರಣ ಸೂರ್ಯ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೆ ಸಾವನ್ನಪಿದ್ದಾನೆ.

ಇನ್ನು ಸೂರ್ಯ ಸಾವನ್ನಪಿರುವ ವಿಚಾರ ತಿಳಿಯುತ್ತಿದ್ದಂತೆ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದ್ದು ಆಸ್ವತ್ರೆ ಬಳಿ ಬಂದು ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಹಬ್ಬ ಅಂತ ಹೊಸ ಬಟ್ಟೆ ಹಾಕಿಕೊಂಡು ಹೋದ ಮಗ ಹೆಣವಾಗಿ ಬಂದಿದ್ದನ್ನ ಕಂಡು ತಾಯಿಯ ಆಕ್ರಂದನವು ಮುಗಿಲು ಮುಟ್ಟಿತ್ತು.

ಇನ್ನು ಸೂರ್ಯನಿಗೆ ಇರಿದ ಆರೋಪಿಗಳು ಸುತ್ತಾಮುತ್ತಲಿನ ಗ್ರಾಮಸ್ಥರು ಎನ್ನಲಾಗಿದ್ದು ಆಗಾಗ ಡಾಬಾ ಬಳಿ ಬಂದು ಪುಂಡಾಟ ಮೆರೆಯುತ್ತಿದ್ರು ಎನ್ನಲಾಗಿದ್ದು ಆರೋಪಿಗಳ ಬಂಧನಕ್ಕೆ ದೊಡ್ಡಬೆಳವಂಗಲ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮಲ್ಲಿಕಾರ್ಜುನ್ ಬಾಲದಂಡಿ,ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ತಿಳಿಸಿದ್ದಾರೆ.

ಒಟ್ಟಾರೆ ಕಲರ್ ಪುಲ್ ಪೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಪಡೆಯೋಣ ಅಂತ ಸ್ನೇಹಿತರ ಜೊತೆ ಹೋದ ಯುವಕ ಪೋಟೋದಿಂದಲೆ ಕೊಲೆಯಾಗಿ ಹೋಗಿದ್ದು ನಿಜಕ್ಕೂ ದುರಂತ. ಇನ್ನೂ ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಆರೋಪಿಗಳ ಬಂಧನದ ನಂತರ ಕೊಲೆ ಹಿಂದಿನ ಮತ್ತಷ್ಟು ರಹಸ್ಯ ಬೆಳಕಿಗೆ ಬರಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ