Chikkaballapur: ಫೋಟೋ ಶೂಟ್​​ ಮಾಡಲು ಹೋಗಿ 3 ವಿದ್ಯಾರ್ಥಿಗಳು ನೀರು ಪಾಲು: ಚಿಕ್ಕಬಳ್ಳಾಪುರದಲ್ಲಿ ಹೃದಯ ವಿದ್ರಾವಕ ಘಟನೆ

ನೀರಿನಲ್ಲಿ ಫೋಟೋ ಶೂಟ್ (photo shoot)​ ಮಾಡುವಾಗ ಮುಳುಗಿ ಇಬ್ಬರು ಯುವತಿಯರು, ಒಬ್ಬ ಯುವಕ ಸಾವನ್ನಪ್ಪಿರುವಂಹ ದುರಂತ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ.

Chikkaballapur: ಫೋಟೋ ಶೂಟ್​​ ಮಾಡಲು ಹೋಗಿ 3 ವಿದ್ಯಾರ್ಥಿಗಳು ನೀರು ಪಾಲು: ಚಿಕ್ಕಬಳ್ಳಾಪುರದಲ್ಲಿ ಹೃದಯ ವಿದ್ರಾವಕ ಘಟನೆ
ಶ್ರೀನಿವಾಸ ಸಾಗರ ಜಲಾಶಯ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 01, 2023 | 6:32 PM

ಚಿಕ್ಕಬಳ್ಳಾಪುರ: ನೀರಿನಲ್ಲಿ ಫೋಟೋ ಶೂಟ್ (photo shoot)​ ಮಾಡುವಾಗ ಮುಳುಗಿ ಇಬ್ಬರು ಯುವತಿಯರು, ಒಬ್ಬ ಯುವಕ ಸಾವನ್ನಪ್ಪಿರುವಂಹ ದುರಂತ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ. ರಾಧಿಕಾ(21), ಇಮ್ರಾನ್(21), ಪೂಜಾ(21) ಮೃತರು. ಮೂವರು ಬೆಂಗಳೂರಿನ ಸಾರಾಯಿಪಾಳ್ಯದ ನಿವಾಸಿಗಳಾಗಿದ್ದು ಬಿ ಫಾರ್ಮ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಶ್ರೀನಿವಾಸ ಸಾಗರ ಜಲಾಶಯಕ್ಕೆ ರಾಧಿಕಾ, ಇಮ್ರಾನ್, ಪೂಜಾ ಸೇರಿ ಒಟ್ಟು ಆರು ಬಂದಿದ್ದಾರೆ. ಮೂರು ಬೈಕ್​ಗಳಲ್ಲಿ ಚಿಕ್ಕಬಳ್ಳಾಪುರ ತಾಲುಕಿನ ಶ್ರೀನಿವಾಸಸಾಗರ ಜಲಾಶಯದ ಬಳಿ ಆಗಮಿಸಿ ನೀರಿನಲ್ಲಿ ಜಾಲಿಯಾಗಿ ಆಟವಾಡುತ್ತ, ತಂದಿದ್ದ ಡಿಎಸ್​ಎಲ್​ಆರ್ ಕ್ಯಾಮೆರಾದಲ್ಲಿ ಶೂಟ್ ಶೂಟ್ ಮಾಡುತ್ತಿದ್ದರು. ಆದರೆ ನೀರಿನಲ್ಲಿ ಒಳ ಹೋಗುತ್ತಾ ಹೋಗುತ್ತಾ ಪೂಜಾ ನೀರಿನಲ್ಲಿ ಮುಳುಗಿದ್ದಾಳೆ. ಪೂಜಾಳ ರಕ್ಷಣೆಗೆ ರಾಧಿಕಾ ಹೋಗಿದ್ದಾಳೆ, ಇಬ್ಬರ ರಕ್ಷಣೆಗೆ ಇಮ್ರಾನ್ ತೆರಳಿ ಮೂವರು ನೀರು ಪಾಲಾಗಿದ್ದಾರೆ.

ಪೂಜಾ, ರಾಧಿಕಾ ಹಾಗೂ ಇಮ್ರಾನ್ ನೀರಿನಲ್ಲಿ ಮುಳುಗಿ, ನಂತರ ವಿಕಾಶ್​ ಕಿರುಚಾಡುತ್ತಿದ್ದ ಕಾರಣ ಚನ್ನರಾಜ್ ತಕ್ಷಣ ನೀರಿನಲ್ಲಿ ಆಚೆ ಬಂದು ಪಕ್ಕದ ತೋಟದ ಹತ್ತಿರ ಹೋಗಿ ರಕ್ಷಣೆಗೆ ಮೊರೆ ಇಟ್ಟಿದ್ದಾನೆ. ತಕ್ಷಣ ಸ್ಥಳಿಯ ರೈತರು ಬಂದು ವಿಕಾಶ್​ನನ್ನು ರಕ್ಷಣೆ ಮಾಡಿದ್ದಾರೆ. ಪೂಜಾಳನ್ನು ಆಚೆ ತಂದಿದ್ದಾರೆ. ಆದರೆ ಅಷ್ಟೊತ್ತಿಗೆ ಮೃತಪಟ್ಟಿದ್ದಾಳೆ. ನಂತರ ಸ್ಥಳಕ್ಕೆ ಬಂದ ಚಿಕ್ಕಬಳ್ಲಾಪುರ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳಿಯ ಮೀನುಗಾರರು, ಮೃತರ ಶವಗಳನ್ನು ಮೇಲೆ ತಂದು ಆಸ್ಪತ್ರೆಗೆ ಸಾಗಿಸಿದ್ದಾರೆ.

ಇದನ್ನೂ ಓದಿ: Lokayukta Raid: ಮುಂದುವರಿದ ಭ್ರಷ್ಟರ ಬೇಟೆ, ಲಂಚಕ್ಕೆ ಕೈಯೊಡ್ಡುತ್ತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ

ಶವಗಳನ್ನು ಕಂಡು ದುಃಖತಪ್ತರಾದ ಪೋಷಕರು 

ಜಲಾಶಯದ ಬಳಿ ಆಗಮಿಸಿದ ಮೃತ ವಿದ್ಯಾರ್ಥಿಗಳ ಪೋಷಕರು, ಶವಗಳನ್ನು ಕಂಡು ದುಃಖತಪ್ತರಾದ್ದಾರೆ. ಮಕ್ಕಳು ಶಾಲೆಗೆ ಹೋಗಿ ವಿದ್ಯಾಬ್ಯಾಸ ಮಾಡಲಿ ಅಂದರೆ ಸ್ನೇಹಿತರ ಜೊತೆ ಜಲಾಶಯಕ್ಕೆ ಆಗಮಿಸಿ ನೀರು ಪಾಲಾದರಾರಲ್ಲ ಅಂತ ಗೋಳಾಡಿದ್ದಾರೆ. ಜಲಾಶಯದ ಸುತ್ತಲು ಯಾವುದೇ ತಂತಿ ಬೇಲಿ ರಕ್ಷಣೆ ಇಲ್ಲದೆ ಮನಸ್ಸೊ ಇಚ್ಚೆ ನೀರಿಗಿಳಿದು ಜಲಾಶಯಕ್ಕೆ ಬಲಿಯಾಗಿದ್ದು ವಿಪರ್ಯಾಸ.

ಮಂಡ್ಯದಲ್ಲಿ ದಂಪತಿ ಆತ್ಮಹತ್ಯೆಗೆ ಶರಣು

ಮಂಡ್ಯ: ಕೌಟುಂಬಿಕ ಕಲಹಕ್ಕೆ ಮನನೊಂದು ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುರುಷೋತ್ತಮ (45), ವಿದ್ಯಾ(32) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ದಂಪತಿಗಳ ನಡುವಿನ ಕಲಹದಿಂದ ಬೇಸತ್ತು ಪುರುಷೋತ್ತಮ ಹಾಗೂ ವಿದ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಪತಿ ಕೆಲಸಕ್ಕೆ ತೆರಳಿದಾಗ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ವಿಷಯ ತಿಳಿದು ಮನೆಗೆ ಬಂದ ಪತಿ ಮನೆ ಪಕ್ಕದ ಜಮೀನಿಗೆ ತೆರಳಿ ನೇಣಿಗೆ ಕೊರಳೊಡ್ಡಿದ್ದಾರೆ. ಮೃತ ಪುರುಷೋತ್ತಮ್ ಮೈಸೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು.

ಇದನ್ನೂ ಓದಿ: ರಾಮನಗರ: ಕಸಾಯಿಖಾನೆಗೆ ಜಾನುವಾರು ಸಾಗಾಟ ವಾಹನದ ಮೇಲೆ ದಾಳಿ, ವಾಹನದಲ್ಲಿದ್ದ ವ್ಯಕ್ತಿ ನಿಗೂಢ ಸಾವು

ಮೃತ ದಂಪತಿಗೆ 7 ಹಾಗೂ 5 ವರ್ಷದ ಇಬ್ಬರು ಮಕ್ಕಳಿದ್ದಾರೆ. ಇದೀಗ ತಂದೆ-ತಾಯಿ ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನ ನಡೆಸಿದ್ದಾರೆ. ಮೃತ ದೇಹಗಳನ್ನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:25 pm, Sat, 1 April 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ