ಸಿಸಿಬಿ ಪೊಲೀಸರಿಂದ ಮೂರು ರೌಡಿ ಗ್ಯಾಂಗ್​​ಗಳ 11 ಜನರ ಬಂಧನ: ಆಯುಕ್ತ ಕಮಲ್ ಪಂಥ್ ಮಾಹಿತಿ

| Updated By: ಸಾಧು ಶ್ರೀನಾಥ್​

Updated on: Feb 24, 2021 | 3:44 PM

CCB Police: ಗ್ಯಾಂಗ್ ವಾರ್ ನಡೆಸುವುದಕ್ಕೆ ಮಾಸ್ಟರ್ ಪ್ಲಾನ್ ಮಾಡಿದ್ದ ರೌಡಿ ಕಾಡುಬಿಸನಹಳ್ಳಿ ರೋಹಿತ್ ಮಂಗಳೂರು ಮೂಲದ ಇಬ್ಬರು ರೌಡಿ ಶೀಟರ್​ಗಳನ್ನ ಕರೆಸಿದ್ದ. ಕಳೆದ 20 ದಿನಗಳ ಹಿಂದೆ ಕಿರಣ್ ಗೌಡ ಮತ್ತ ವಿಶ್ವನಾಥ್​​ನನ್ನು ಬೆಂಗಳೂರಿಗೆ ಕರೆಸಿಕೊಂಡು ಕರಿಯಮ್ಮನ ಅಗ್ರಹಾರದಲ್ಲಿ ಇರಿಸಿದ್ದ ಎಂದು ತಿಳಿದುಬಂದಿದೆ.

ಸಿಸಿಬಿ ಪೊಲೀಸರಿಂದ ಮೂರು ರೌಡಿ ಗ್ಯಾಂಗ್​​ಗಳ 11 ಜನರ ಬಂಧನ: ಆಯುಕ್ತ ಕಮಲ್ ಪಂಥ್ ಮಾಹಿತಿ
ಮೂರು ರೌಡಿ ಗ್ಯಾಂಗ್ನ 11 ಜನರನ್ನು ಬಂಧಿಸಿದ ಸಿಸಿಬಿ ಪೊಲೀಸರು
Follow us on

ಬೆಂಗಳೂರು: ಮೂರು ರೌಡಿ ಗ್ಯಾಂಗ್​​ಗಳಿಗೆ ಸೇರಿದ 11 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಕಾಡಬೀಸನಹಳ್ಳಿಯ ಸೋಮ ಹಾಗೂ ರೋಹಿತ್ ಮಧ್ಯೆ ದ್ವೇಷವಿತ್ತು. ಹೀಗಾಗಿ ಗ್ಯಾಂಗ್ ವಾರ್ ನಡೆಸುವುದಕ್ಕೆ ಸೋಮ ಪ್ಲ್ಯಾನ್ ಮಾಡಿದ್ದ. ರೋಹಿತ್ ಕೂಡ ಹಲವು ರೌಡಿಗಳನ್ನ ಸಂಪರ್ಕಿಸಿದ್ದ. ಸದ್ಯ ಎಲ್ಲ 11 ರೌಡಿಗಳನ್ನೂ ಸಿಸಿಬಿ ಪೊಲೀಸರು ಬಂಧಿಸಿದ್ದು, ಈ ಪ್ರಕರಣ ಬೆಂಗಳೂರಿನ ಮಾರತ್ತಹಳ್ಳಿ ಠಾಣೆಯಲ್ಲಿ ದಾಖಲಾಗಿದೆ ಎಂದು ಕಮಲ್ ಪಂತ್ ಹೇಳಿದ್ದಾರೆ.

ಗ್ಯಾಂಗ್ ವಾರ್ ನಡೆಸುವುದಕ್ಕೆ ಮಾಸ್ಟರ್ ಪ್ಲಾನ್ ಮಾಡಿದ್ದ ರೌಡಿ ಕಾಡುಬಿಸನಹಳ್ಳಿ ರೋಹಿತ್ ಮಂಗಳೂರು ಮೂಲದ ಇಬ್ಬರು ರೌಡಿ ಶೀಟರ್​ಗಳನ್ನ ಕರೆಸಿದ್ದ. ಕಳೆದ 20 ದಿನಗಳ ಹಿಂದೆ ಕಿರಣ್ ಗೌಡ ಮತ್ತ ವಿಶ್ವನಾಥ್​​ನನ್ನು ಬೆಂಗಳೂರಿಗೆ ಕರೆಸಿಕೊಂಡು ಕರಿಯಮ್ಮನ ಅಗ್ರಹಾರದಲ್ಲಿ ಇರಿಸಿದ್ದ ಎಂದು ತಿಳಿದುಬಂದಿದೆ. ಸದ್ಯ ಆನೇಕಲ್ ರೌಡಿ ಶೀಟರ್ ಹರೀಶ್, ಸರ್ಜಾಪುರ ರೌಡಿ ಶೀಟರ್ ವೆಂಕಟೇಶ್, ಮಂಗಳೂರು ರೌಡಿ ಶೀಟರ್ ಕಿರಣ್ ಗೌಡ ಮತ್ತು ಉಲ್ಲಾಳ ರೌಡಿ ವಿಶ್ವನಾಥ ಭಂಡಾರಿ ಸೇರಿ 11 ಜನ ನಟೋರಿಯಸ್​ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಕಿರಣ್ ಮತ್ತು ರೋಹಿತ್

ಸೋಮ ಮತ್ತು ವಿಶ್ವನಾಥ್

ಇದನ್ನೂ ಓದಿ

ಹಳೆ ವೈಷಮ್ಯ: ಉಲ್ಲಾಳು ಬಳಿ ರೌಡಿಶೀಟರ್​ನ ಕೊಚ್ಚಿ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಮದುವೆ ಮಂಟಪದಲ್ಲಿ ವರನಿಗೆ ಚಾಕು ತೋರಿಸಿ ಬೆದರಿಸಿದ ರೌಡಿ ಶೀಟರ್ ಅಲ್ಲೇ ಮಟ್ಯಾಶ್​!

Published On - 3:43 pm, Wed, 24 February 21