ಮದುವೆ ಮಂಟಪದಲ್ಲಿ ವರನಿಗೆ ಚಾಕು ತೋರಿಸಿ ಬೆದರಿಸಿದ ರೌಡಿ ಶೀಟರ್ ಅಲ್ಲೇ ಮಟ್ಯಾಶ್​!

ಯಾದಗಿರಿ: ಮದುವೆಯಲ್ಲಿ ದರೋಡೆ ಮಾಡಲು ಹೋದ ರೌಡಿ ಶೀಟರ್​ನನ್ನೇ ಬರ್ಬರವಾಗಿ ಕೊಲೆ ಮಾಡಿರುವ ಪ್ರಸಂಗ ಜಿಲ್ಲೆಯ ಗುರುಮಠಕಲ್ ತಾಲೂಕಿನ ಪರಮೇಶಪಲ್ಲಿ ಗ್ರಾಮದಲ್ಲಿ ನಡೆದಿದೆ. ಮದುವೆ ಸ್ಥಳಕ್ಕೆ ನುಗ್ಗಿದ ರೌಡಿ ಶೀಟರ್ ಮಹ್ಮದ ಹನೀಫ್ (32) ಮದುವೆ ಗಂಡಿಗೆ ಚಾಕು ತೋರಿಸಿ ಚಿನ್ನ ಕೊಡುವಂತೆ ಹೆದರಿಸಿದ್ದಾನೆ. ಈ ವೇಳೆ ಅಲ್ಲೇ ನೆರೆದಿದ್ದ ಸಂಬಂಧಿಕರು ರೌಡಿ ಶೀಟರ್ ಹನೀಫ್​ನ ತಲವಾರ್ ಹಾಗೂ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಗುರುಮಠಕಲ್ ಪೊಲೀಸರ ಭೇಟಿ ಕೊಟ್ಟು ಪರಿಶೀಲನೆ […]

ಮದುವೆ ಮಂಟಪದಲ್ಲಿ ವರನಿಗೆ ಚಾಕು ತೋರಿಸಿ ಬೆದರಿಸಿದ ರೌಡಿ ಶೀಟರ್ ಅಲ್ಲೇ ಮಟ್ಯಾಶ್​!
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 10, 2020 | 5:05 PM

ಯಾದಗಿರಿ: ಮದುವೆಯಲ್ಲಿ ದರೋಡೆ ಮಾಡಲು ಹೋದ ರೌಡಿ ಶೀಟರ್​ನನ್ನೇ ಬರ್ಬರವಾಗಿ ಕೊಲೆ ಮಾಡಿರುವ ಪ್ರಸಂಗ ಜಿಲ್ಲೆಯ ಗುರುಮಠಕಲ್ ತಾಲೂಕಿನ ಪರಮೇಶಪಲ್ಲಿ ಗ್ರಾಮದಲ್ಲಿ ನಡೆದಿದೆ.

ಮದುವೆ ಸ್ಥಳಕ್ಕೆ ನುಗ್ಗಿದ ರೌಡಿ ಶೀಟರ್ ಮಹ್ಮದ ಹನೀಫ್ (32) ಮದುವೆ ಗಂಡಿಗೆ ಚಾಕು ತೋರಿಸಿ ಚಿನ್ನ ಕೊಡುವಂತೆ ಹೆದರಿಸಿದ್ದಾನೆ. ಈ ವೇಳೆ ಅಲ್ಲೇ ನೆರೆದಿದ್ದ ಸಂಬಂಧಿಕರು ರೌಡಿ ಶೀಟರ್ ಹನೀಫ್​ನ ತಲವಾರ್ ಹಾಗೂ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಗುರುಮಠಕಲ್ ಪೊಲೀಸರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಒಟ್ನಲ್ಲಿ ಏರಿಯಾದಲ್ಲಿ ಹವಾ ಮೇಂಟೇನ್​ ಮಾಡಲು ಮದುವೆ ಮನೆಗೆ ಹೋದ ರೌಡಿ ಕೊನೆಗೆ ಅಲ್ಲೇ ಪಂಚರ್​ ಆಗಿ ಬಿಟ್ಟ!