ಅಪ್ಪ ಉಪ ತಹಶೀಲ್ದಾರ್-ಅಮ್ಮ ಶಿಕ್ಷಕಿ: ಮಗಳಿಗೆ 625ಕ್ಕೆ 625 ಅಂಕ!

ಅಪ್ಪ ಉಪ ತಹಶೀಲ್ದಾರ್-ಅಮ್ಮ ಶಿಕ್ಷಕಿ: ಮಗಳಿಗೆ 625ಕ್ಕೆ 625 ಅಂಕ!

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ವಿದ್ಯಾರ್ಥಿನಿ ಐ.ಪಿ ತನ್ಮಯಿ ಸಹ 625ಕ್ಕೆ 625 ಅಂಕ ಪಡೆದಿದ್ದಾರೆ. ಇಂದಾವರ ಗ್ರಾಮದ ನಿವಾಸಿಯಾದ ತನ್ಮಯಿ ಜಿಲ್ಲೆಯ ಸಂತ ಜೋಸೆಫರ ಬಾಲಕಿಯರ ಶಾಲೆಯ ವಿದ್ಯಾರ್ಥಿನಿ.

ಇನ್ನು ಮಗಳ ಸಾಧನೆಗೆ ಸಂತಸಗೊಂಡ ಪೋಷಕರು ಮಗಳಿಗೆ ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡರು. 625ಕ್ಕೆ 625 ಅಂಕ ಪಡೆದಿರುವ ತನ್ಮಯಿ ತಂದೆ ಪ್ರಸನ್ನ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಹಾಗೂ ತಾಯಿ ಸಂಧ್ಯಾ ಶಿಕ್ಷಕಿಯಾಗಿದ್ದಾರೆ.

Read Full Article

Click on your DTH Provider to Add TV9 Kannada