ಬೆಂಗಳೂರು: ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ (ಎಸ್ಎಂಎ) ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಮಗು ಜನೀಶ್ ಉಳಿವಿಗಾಗಿ ನಡೆಸುತ್ತಿರುವ ಟಿವಿ 9 ಅಭಿಯಾನಕ್ಕೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಿದೆ. ಮಗುವಿನ ಚಿಕಿತ್ಸೆಗಾಗಿ ಅನುದಾನ ಕೋರಿ ಸಂಸದ ಜಿ.ಸಿ.ಚಂದ್ರಶೇಖರ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಚಂದ್ರಶೇಖರ್ ಮನವಿಗೆ ಸ್ಪಂದಿಸಿರುವ ಪ್ರಧಾನಿಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಕಾರ್ಯಲಯ, ಮೂರು ತಿಂಗಳ ಒಳಗೆ ಸಂಪೂರ್ಣ ದಾಖಲೆಗಳನ್ನು ಒದಗಿಸಿ ಎಂದು ತಿಳಿಸಿದ್ದಾರೆ. ಈ ಮೂಲಕ ಸಹಾಯ ದೊರಕುವ ಭರವಸೆ ಸಿಕ್ಕಂತಾಗಿದೆ.
11 ತಿಂಗಳ ಮಗು ಜನೀಶ್ ಉಳಿವಿಗಾಗಿ ಫೆಬ್ರವರಿ 15 ರಂದು ಚಂದ್ರಶೇಖರ್ ಬರೆದಿದ್ದ ಪತ್ರ ಪ್ರಧಾನಿಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ತಲುಪಿತ್ತು. ರಾಷ್ಟ್ರೀಯ ಪರಿಹಾರ ನಿಧಿಯಿಂದ ಈ ಪತ್ರಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ಮಗುವಿನ ಸಂಪೂರ್ಣ ವಿವರ, ಕಾಯಿಲೆಯ ವಿವರ ಮತ್ತು ಕಾಯಿಲೆಗೆ ತಗಲುವ ವೆಚ್ಚದ ದಾಖಲೆಗಳನ್ನು ಒದಗಿಸಲು ಸೂಚನೆ ನೀಡಿದೆ.
ಫೆಬ್ರವರಿ 5 ರಿಂದ ಟಿವಿ9 ಕನ್ನಡ ವಾಹಿನಿ ನಿರಂತರವಾಗಿ ‘ಕಂದನ ಉಳಿಸು ಕರ್ನಾಟಕ’ ಅಭಿಯಾನವನ್ನು ನಡೆಸಿತ್ತು. ಇದಕ್ಕೆ ಅತ್ಯುತ್ತಮ ಸ್ಪಂದನೆ ಕೂಡ ದೊರಕ್ಕಿತ್ತು. 11 ತಿಂಗಳ ಪುಟ್ಟ ಮಗುವನ್ನು ಕಾಡುತ್ತಿರುವ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ (Spinal muscular atrophy) ಸಮಸ್ಯೆಯನ್ನು ಬಗೆಹರಿಸಲು 16 ಕೋಟಿ ರೂ. ಮೊತ್ತದ ಇಂಜೆಕ್ಷನ್ ನೀಡಬೇಕಿದ್ದು, ಈ ದುಬಾರಿ ಚುಚ್ಚುಮದ್ದನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳಬೇಕಿದೆ.
ಲಕ್ಷಾಂತರ ಮಕ್ಕಳಲ್ಲಿ ಒಬ್ಬರಿಗೆ ಕಾಡುವ ಈ ಸಮಸ್ಯೆಗೆ ತುತ್ತಾಗಿರುವ ಜನೀಶ್ ಎಂಬ ಪುಟ್ಟ ಮಗುವನ್ನು ನೋಡಿ ಕನ್ನಡಿಗರ ಕಣ್ಣಾಲಿ ಒದ್ದೆಯಾಗಿದ್ದು, ಸಹೃದಯರು ಈಗಾಗಲೇ ಸಹಾಯ ಹಸ್ತ ಚಾಚಿದ್ದಾರೆ.
ಇದನ್ನೂ ಓದಿ
ಅಜ್ಜಂಪುರ ತಾಲೂಕಿನ ಶಿವಾನಂದ ಆಶ್ರಮ.. ಇಲ್ಲೀಗ ಭಗವದ್ಗೀತೆ ಪುಸ್ತಕ ಮುದ್ರಣ ಚಟುವಟಿಕೆ ಬಂದ್
ಕುಡಿಯಲು ಕಲುಷಿತ ಕಾಳಿ ನದಿ ನೀರು; ಬೃಹತ್ ವೆಚ್ಚದ ಯೋಜನೆಗೆ ಸಾರ್ವಜನಿಕರ ವಿರೋಧ
(central government responded to Kandana Ulisu Karnataka Campaign)