ಬೆಂಗಳೂರು, (ಸೆಪ್ಟೆಂಬರ್ 15): ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ವಂಚನೆ ಪ್ರಕರಣಕ್ಕೆ(Cheating Case) ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ(Chaitra Kundapaura) ಹಣ ಪಡೆದಿರುವುದನ್ನು ಸತ್ಯ ಒಪ್ಪಿಕೊಂಡಿದ್ದಾಳೆ. ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಹಣ ಪಡೆದಿದ್ದಾಗಿ ಚೈತ್ರಾ ಕುಂದಾಪುರ ಬಾಯ್ಬಿಟ್ಟಿದ್ದಾಳೆ. ಆದರೆ 5 ಕೋಟಿ ರೂ. ಅಲ್ಲ 3 ಕೋಟಿ ರೂ. ಪಡೆದಿರುವ ಬಗ್ಗೆ ಚೈತ್ರಾ ಕುಂದಾಪುರ ಮತ್ತು ಆಕೆಯ ಗ್ಯಾಂಗ್ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ ಹಣ ಪಡೆದಿರುವುದಾಗಿ ವಂಚನೆ ಪ್ರಕರಣದ ಏಳನೇ ಆರೋಪಿ ಶ್ರೀಕಾಂತ್ ಒಪ್ಪಿಕೊಂಡಿದ್ದಾನೆ. ಗೋವಿಂದ್ ಬಾಬು ಅವರಿಂದ ನಾನೇ ಹಣ ಪಡೆದುಕೊಂಡು ಬಂದು ಚೈತ್ರಾ ಕುಂದಾಪುರ, ಗಗನ್ಗೆ ನೀಡಿದ್ದೇನೆ ಸತ್ಯ ಒಪ್ಪಿಕೊಂಡಿದ್ದಾನೆ. ಆದ್ರೆ, ಆರೋಪಿಗಳು ಈಗ ಆ ಹಣ ಎಲ್ಲಿದೆಯೋ ಗೊತ್ತಿಲ್ಲ ಎನ್ನುತ್ತಿದ್ದಾರೆ.
ಚೈತ್ರಾ ಕುಂದಾಪುರ.. ರಾಜ್ಯದ ಉದ್ದಗಲಕ್ಕೂ ಭಾಷಣ ಬಿಗಿಯುತ್ತಿದ್ದಾಕೆ. ಆದ್ರೆ ಇದೇ ಚೈತ್ರಾ ಕುಂದಾಪುರ ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸ್ತೀನಿ ಅಂತಾ ಗೋವಿಂದ್ ಬಾಬು ಎನ್ನುವರಿಗೆ ವಂಚನೆ ಮಾಡಿದ್ದು, ಬರೋಬ್ಬರಿ 5 ಕೋಟಿ ಹಣ ನುಂಗಿರೋ ಆರೋಪದಲ್ಲಿ ಮೊನ್ನೆ ಅರೆಸ್ಟ್ ಆಗಿದ್ದಾಳೆ. ಇದೀಗ ಸಿಸಿಬಿ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಇನ್ನು ಸ್ವಾಮೀಜಿ ಅರೆಸ್ಟ್ ಆದ್ರೆ ದೊಡ್ಡವರ ಹೆಸರು ಬಯಲಾಗುತ್ತೆ ಎಂದು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಅಷ್ಟಕ್ಕೂ 2017 ರಿಂದ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಸ್ತಿರೋ ಗೋವಿಂದ್‌ಬಾಬುಗೆ ಸರ್ಕಾರದಿಂದ 35 ಕೋಟಿ ಹಣ ಬರಬೇಕಿದೆ. ಆ ಹಣಕ್ಕಾಗಿಯೇ ಈ ರೀತಿ ಆರೋಪ ಮಾಡಿದ್ದಾರೆ ಅನ್ನೋದು ಚೈತ್ರಾ ಆರೋಪ. ಆದ್ರೆ ಇದನ್ನ ತಳ್ಳಿಹಾಕಿರೋ ಗೋವಿಂದ್ ಬಾಬು, ಇದ್ರಲ್ಲಿ ಯಾರ ಪಾತ್ರವೂ ಇಲ್ಲ. ಯಾವ ಷಡ್ಯಂತ್ರ ಇಲ್ಲ. ಈಕೆಯೇ ಹಣ ನುಂಗಿದ್ದಾಳೆ. ಇಂದಿರಾ ಕ್ಯಾಂಟೀನ್‌ಗೂ ಇದಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.
ಈವರೆಗೂ 8 ಆರೋಪಿಗಳು ಲಾಕ್ ಆಗಿದ್ದು ಎಲ್ಲರ ಮೊಬೈಲ್ ವಶಕ್ಕೆ ಪಡೆದಿರೋ ಸಿಸಿಬಿ ರಿಟ್ರೀವ್‌ಗಾಗಿ ಎಫ್‌ಎಸ್‌ಎಲ್‌ಗೆ ಕಳಿಸಿದೆ. ಅದೇನೇ ಇರಲಿ, ಈ ಕೇಸ್ ದಿನದಿನಕ್ಕೂ ಟ್ವಿಸ್ಟ್ ಪಡೆದುಕೊಳ್ತಿದ್ದು, ಹಾಲಶ್ರೀ ಸ್ವಾಮೀಜಿ ಬಂಧನ ಬಳಿಕ ಮತ್ತಷ್ಟು ತಿರುವು ಪಡೆಯಲಿದೆ.
Published On - 12:42 pm, Fri, 15 September 23