ವಿಶ್ವನಾಥ್ ಜೀ ಸಾವನಪ್ಪಿದ್ದಾರೆ ಗೋವಿಂದ ಗೋವಿಂದ ಎಂದಿದ್ದ ಗಗನ್, ಚೈತ್ರಾ ಜೋಡಿಗೆ ಹಾಲಶ್ರೀ ಸ್ವಾಮೀಜಿ ಎಂಟ್ರಿಯಿಂದ ಧೈರ್ಯ ಬಂದಿತ್ತು!

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ನಿಂದ‌ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುವ ಆಮಿಷದಲ್ಲಿ ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಪ್ರಕರಣದಲ್ಲಿ ಚೈತ್ರಾ ಮತ್ತು ಗಗನ್ ಡೀಲ್ ಕಹಾನಿ ಹೊರ ಬಂದಿದ್ದೆ ಕಡೂರಿನ ಸಲೂನ್ ಶಾಪಿಂಗ್ ನಿಂದ.

ವಿಶ್ವನಾಥ್ ಜೀ ಸಾವನಪ್ಪಿದ್ದಾರೆ ಗೋವಿಂದ ಗೋವಿಂದ ಎಂದಿದ್ದ ಗಗನ್, ಚೈತ್ರಾ ಜೋಡಿಗೆ ಹಾಲಶ್ರೀ ಸ್ವಾಮೀಜಿ ಎಂಟ್ರಿಯಿಂದ ಧೈರ್ಯ ಬಂದಿತ್ತು!
ವಿಶ್ವನಾಥ್ ಜೀ ಸಾವನಪ್ಪಿದ್ದಾರೆ ಗೋವಿಂದ ಗೋವಿಂದ ಎಂದಿದ್ದ ಗಗನ್-ಚೈತ್ರಾ ಜೋಡಿ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on:Sep 15, 2023 | 11:40 AM

ಚಿಕ್ಕಮಗಳೂರು, ಸೆಪ್ಟೆಂಬರ್​​ 15: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ (Chaitra Kundapura) ಅಂಡ್ ಗ್ಯಾಂಗ್ ನಿಂದ‌ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುವ ಆಮಿಷದಲ್ಲಿ (MLA Ticket cheating case) ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚನೆ (Cheating) ಎಸಗಿರುವ ಪ್ರಕರಣದಲ್ಲಿ ಚೈತ್ರಾ ಮತ್ತು ಗಗನ್ ಡೀಲ್ ಕಹಾನಿ ಹೊರ ಬಂದಿದ್ದೆ ಸಲೂನ್ ಶಾಪಿಂಗ್ ನಿಂದ. ವಂಚನೆಯಿಂದ ತಪ್ಪಿಸಿಕೊಳ್ಳಲು ಪಕ್ಕ ಪ್ಲಾನ್ ಮಾಡಿದ್ದ ಚೈತ್ರಾ ಮತ್ತು ಗಗನ್ ಜೋಡಿ ಉಲ್ಟಾ ಹೊಡೆದು, ಉದ್ಯಮಿ ಗೋವಿಂದ ಬಾಬು (Govind Babu Pujari) ನೀಡಿದ 3.5 ಕೋಟಿ ಹೊಡೆಯಲು ಸಿನಿಮಾ ಸ್ಟೋರಿ ರೆಡಿ ಮಾಡಿದ್ದರು. ಗೋವಿಂದ ಬಾಬು ತಮಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ವಂಚನೆಯ ಬಗ್ಗೆ ಅಲರ್ಟ್ ಆಗಿದ್ದರು. ಗಗನ್ ಹಿನ್ನೆಲೆ ಮಾಹಿತಿ ಪಡೆಯಲು ಚಿಕ್ಕಮಗಳೂರು (Kadur, Chikkamagalur) ಮೂಲದ ಹಿಂದೂ ಕಾರ್ಯಕರ್ತ ಮಂಜು ಎಂಬುವವರ ನೆರವು ಕೇಳಿದ್ದರು ಗೋವಿಂದ. ಸ್ವತಃ ತಾವೇ ತಂಡ ರಚಿಸಿಕೊಂಡು, ತನಿಖೆ ಮಾಡಲು ಮುಂದಾಗಿದ್ದರು ಗೋವಿಂದ ಪೂಜಾರಿ.

ಕಡೂರಿನಲ್ಲಿ 10 ದಿನಗಳ ಕಾಲ ಗಗನ್ ಮಾಹಿತಿ ಪಡೆದಿತ್ತು ಗೋವಿಂದ ಬಾಬು ತಂಡ. ಸಲೂನ್ ಶಾಪ್ ನಲ್ಲಿ ಮೇಕಪ್ ಮಾಡಿಸಿದ್ದ ಸುಳಿವು ಸಿಕ್ಕ ಹಿನ್ನೆಲೆ ಗೋವಿಂದ ಬಾಬು ತನಿಖಾ ತಂಡವು ಧನರಾಜ್ ಎಂಬಾತನನ್ನು ವಿಚಾರಿಸಿಕೊಂಡಿದ್ದರು. ಧನರಾಜ್ ವಿಚಾರಣೆ ಮಾಡುವ ವೇಳೆ ನಕಲಿ RSS ಮತ್ತು ಬಿಜೆಪಿ ನಾಯಕರ ಪತ್ರಗಳು ರಿವಿಲ್ ಆಗಿದ್ದವು. ರಮೇಶ್ ಧನರಾಜ್ ನನ್ನ ಉಡುಪಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ: ಮಠದಲ್ಲೇ ಟಿಕೆಟ್​ ಡೀಲ್​​ ನಡೆದಿತ್ತಾ? ಗೋವಿಂದ್​ ಬಾಬು, ಚೈತ್ರಾ-ಸ್ವಾಮೀಜಿ ಭೇಟಿ ಫೋಟೋಸ್ ವೈರಲ್

ರಮೇಶ್, ಧನರಾಜ್ ಹೇಳಿಕೆ ರೆಕಾರ್ಡ್ ಮಾಡಿದ್ದ ಗೋವಿಂದ ಬಾಬು ತಂಡದ ಮುಂದೆ ಚೈತ್ರಾ, ಗಗನ್ ವಂಚನೆಯ ಮುಖ ಹೊರಕ್ಕೆ ಬಂದಿತ್ತು. ವಿಡಿಯೋ ರೆಕಾರ್ಡ್ ಸಾಕ್ಷವಾಗಿ ಸಂಗ್ರಹಿಸಿದ ಮೇಲೆ‌ ದೂರು ನೀಡಲು ಬಾಬು ಮುಂದಾಗಿದ್ದರು.

ನಕಲಿ RSS, ಕೇಂದ್ರ ನಾಯಕರ ಸೃಷ್ಟಿಸಿದ ಕಥೆ ಕೇಳಿ ಸ್ವತಃ ಗೋವಿಂದ ಬಾಬು ದಂಗುಬಿದ್ದಿದ್ದರು. ಆ ವೇಳೆ ಹಣ ಪಡೆದ ವಿಶ್ವನಾಥ್ ಜೀ ಸಾವನಪ್ಪಿದ್ದಾರೆ ಎಂದು ಗಗನ್-ಚೈತ್ರಾ ಜೋಡಿ ಗೋವಿಂದ ಗೋವಿಂದ ಎಂದಿದ್ದರು.

ಸಲೂನ್ ಮಾಲೀಕ ರಾಮು ನೀಡಿದ ಸುಳಿವು , ವಂಚನೆ ಪ್ರಕರಣಕ್ಕೆ ಟ್ವಿಸ್ಟ್

ಕಡೂರಿನ ಸಲೂನ್ ಮಾಲೀಕ ರಾಮು ಧನರಾಜ್ ಬಂದು ಚನ್ನಾನಾಯ್ಕ್ ಗೆ ಬಿಜೆಪಿ ನಾಯಕರ ಪೋಟೋ ತೋರಿಸಿ ಇದೇ ತರ ಮೇಕಪ್ ಮಾಡುವಂತೆ ಹೇಳಿದ್ದು ಪಕ್ಕ ಆಗಿತ್ತು. ಧನರಾಜ್ ನನ್ನ ವಿಚಾರಣೆ ನಡೆಸಿದ ತಂಡಕ್ಕೆ ತಾವೇ ಚೈತ್ರಾ ಗಗನ್ ಹೇಳಿದಂತೆ ತನ್ನ ಚಿಕ್ಕಪ್ಪ ರಮೇಶ್ಗೆ RSS ಪ್ರಚಾರಕ ವಿಶ್ವನಾಥ್ ಜೀ ವೇಷ, ತಮ್ಮ ಪರಿಚಯದ ಚನ್ನಾನಾಯ್ಕ್ ಗೆ ಕೇಂದ್ರ ಚುನಾವಣಾ ಸಮಿತಿ ಸದಸ್ಯನ ವೇಷ ಹಾಕಿಸಿದ್ದನ್ನ ಧನರಾಜ್ ಒಪ್ಪಿಕೊಂಡಿದ್ದ .

ಉಡುಪಿ ಗೆ ಕರೆದೊಯ್ದು ಧನರಾಜ್, ರಮೇಶ್ ರಿಂದ ಸಂಪೂರ್ಣ ಮಾಹಿತಿ ಪಡೆದ ಗೋವಿಂದ

ನಕಲಿ RSS ಪ್ರಚಾರಕ, ಬಿಜೆಪಿ ಕೇಂದ್ರ ನಾಯಕರ ವೇಷ ಹಾಕಿಸಿ 3.5 ಕೋಟಿ ಹಣವನ್ನ ಟಿಕೆಟ್ ಕೊಡಿಸುವುದಾಗಿ ಚೈತ್ರಾ ,ಗಗನ್ ವಂಚನೆ ಮಾಡಿರುವುದು ಗೋವಿಂದ ಬಾಬುಗೆ ಸ್ಪಷ್ಟವಾಗಿತ್ತು. ರಮೇಶ್ ಧನರಾಜ್ ನನ್ನ ಉಡುಪಿಯ ಹೋಟೆಲ್ ನಲ್ಲಿ ಕೂರಿಸಿಕೊಂಡು ಗಗನ್ ಚೈತ್ರಾ ಮಾಡಿದ ವಂಚನೆಯ ಪ್ಲಾನ್ ಅನ್ನ ತನ್ನ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ.ರಮೇಶ್, ಧನರಾಜ್ ಹೇಳಿಕೆಯ ವೀಡಿಯೋವನ್ನ ದಾಖಲೆಯಾಗಿ ಇಟ್ಟುಕೊಂಡು ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ದೂರು ನೀಡಲು ಗೋವಿಂದ ಬಾಬು ಪೂಜಾರಿ ನಿರ್ಧಾರ ಮಾಡಿದ್ರು. ಕಡೂರು ಸಲೂನ್ ಮಾಲೀಕ ರಾಮು ನೋಡಿದ ಸುಳಿವು ಗೋವಿಂದ ಬಾಬುಗೆ ಆದ ವಂಚನೆಯ ಪ್ರಕರಣಕ್ಕೆ ತಿರುವು ನೀಡಿದ್ದು, ರಮೇಶ್ ಧನರಾಜ್ ನೀಡಿದ ಮಾಹಿತಿಯಿಂದ ಚೈತ್ರಾ ,ಗಗನ್ ಮಾಡಿದ್ದ ಕೋಟಿ ಹಣ ಹೊಡೆಯುವ ಅತಿ ದೊಡ್ಡ ವಂಚನೆ ಪ್ರಕರಣ ಹೊರ ಬಂದಿದೆ.

ಟಿಕೆಟ್ ಕೊಡಿಸುವುದಾಗಿ ಒಪ್ಪಿಕೊಂಡು ಹಾಲಶ್ರೀ 1.5 ಕೋಟಿ ಹಣ ಪಡೆದಿದ್ದರು!

ನಿನ್ನೆ ಸಿಸಿಬಿ ಕಚೇರಿಯ ಮುಂದೆ ಚೈತ್ರಾ ಕುಂದಾಪುರ ಹೀಗೆ ಹೇಳಿಕೆ ನೀಡಿದ್ದಾಳೆ. ಬೈಂದೂರು ಟಿಕೆಟ್ ಗೋವಿಂದ ಬಾಬುಗೆ ಸಿಗುವ ವಿಶ್ವಾಸ ಹೊಂದಿದ್ದ ಗಗನ್ ಚೈತ್ರಾ ಟಿಕೆಟ್ ಗೋವಿಂದ ಬಾಬುಗೆ ಕೈ ತಪ್ಪುವ ಸುಳಿವು ಸಿಗುತ್ತಿದ್ದಂತೆ ಸ್ವಾಮೀಜಿ ಬಳಸಿಕೊಳ್ಳಲು ಪ್ಲಾನ್ ಮಾಡಿದ್ದಳು. ಗೋವಿಂದ ಬಾಬುಗೆ ಟಿಕೆಟ್ ಕೊಡಿಸುವಂತೆ ಚೈತ್ರಾ ಕೇಳಿಕೊಂಡಿದ್ದಳು. ಅದರಂತೆ ಗೋವಿಂದ ಬಾಬು ಪೂಜಾರಿಗೆ ಟಿಕೆಟ್ ಕೊಡಿಸಲು ಒತ್ತಡ ಹಾಕಿದ್ರು ಸ್ವಾಮೀಜಿ ಅನ್ನೋ ಮಾತು ಈಗ ಕೇಳಿಬಂದಿದೆ.

ಬೈಂದೂರು ಕ್ಷೇತ್ರದ ಟಿಕೆಟ್ ಗಾಗಿ ತಮ್ಮ ಸಂಪರ್ಕದಲ್ಲಿದ್ದ ಪ್ರಭಾವಿ ಬಿಜೆಪಿ ನಾಯಕರ ಜೊತೆ ಸ್ವಾಮೀಜಿ ಚರ್ಚೆ ನಡೆಸಿದ್ದರು. ಮೊದಲು ಟಿಕೆಟ್ಗಾಗಿ 3.5 ಕೋಟಿ ಹಣ ಪಡೆದಿದ್ದ ಚೈತ್ರಾ ಗಗನ್, ತನ್ನ ಕೈಗೆ ಹಣ ಬಂದ ಬಳಿಕ ಸ್ವಾಮೀಜಿಗೆ 1.5 ಕೋಟಿ ಹಣ ಕೊಡಿಸಿದ್ದಳು. ಸ್ವಾಮೀಜಿಯ ಪ್ರಭಾವ ಬಳಸಿಕೊಳ್ಳಲು ಗಗನ್-ಚೈತ್ರಾ ಜೋಡಿ ಪ್ಲಾನ್ ಹಾಕಿತ್ತು. ಟಿಕೆಟ್ ಕೊಡಿಸುವುದಾಗಿ ಒಪ್ಪಿಕೊಂಡು ಹಾಲಶ್ರೀ ಹಣ ಪಡೆದಿದ್ದರು. ಕುತೂಹಲಕಾರಿ ಸಂಗತಿಯೆಂದರೆ ಹಾಲಶ್ರೀ ಸ್ವಾಮೀಜಿಗೆ ನಕಲಿ ನಾಯಕರ ಕಥೆಯನ್ನು ಗಗನ್, ಚೈತ್ರಾ ಮುಚ್ಚಿಟ್ಟಿದ್ದರು. 3.5‌ ಕೋಟಿ ಹಣ ಪಡೆದುಕೊಂಡಿರುವ ವಿಚಾರವನ್ನೂ ಗಗನ್, ಚೈತ್ರಾ ಮುಚ್ಚಿಟ್ಟಿದ್ದರು. ಸ್ವಾಮೀಜಿ ಟಿಕೆಟ್ ಕೊಡಿಸುತ್ತಾರೆ ಎಂದೇ ನಂಬಿದ್ದ ಚೈತ್ರಾ-ಗಗನ್ ಜೋಡಿ ನಂಬಿತ್ತು! ಆದರೆ ಆದಿದ್ದೇ ಬೇರೆ…

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:19 am, Fri, 15 September 23

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ