ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಅಭಿನವ ಹಾಲಶ್ರೀ

| Updated By: ರಮೇಶ್ ಬಿ. ಜವಳಗೇರಾ

Updated on: Sep 15, 2023 | 9:45 AM

Chaitra Kundapura Cheating Case ಉದ್ಯಮಿಗೆ ವಿಧಾನಸಭೆ ಟಿಕೆಟ್​ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿ ಅಭಿನವ ಹಾಲಶ್ರೀ ಬಂಧನದಿಂದ ತಪ್ಪಿಸಿಕೊಳ್ಳಲು ಕೋರ್ಟ್​ಗೆ ಮೊರೆ ಹೋಗಿದ್ದಾರೆ. ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ ಅಭಿನವ ಹಾಲಶ್ರೀ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ  ಅಭಿನವ ಹಾಲಶ್ರೀ
ಅಭಿನವ ಹಾಲಶ್ರೀ
Follow us on

ಬೆಂಗಳೂರು, (ಸೆಪ್ಟೆಂಬರ್ 15): ಉದ್ಯಮಿಗೆ ವಿಧಾನಸಭೆ ಟಿಕೆಟ್​ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿ ಅಭಿನವ ಹಾಲಶ್ರೀ(Abhinava Hala Swamiji) ಕೊರ್ಟ್ ಮೊರೆ ಹೋಗಿದ್ದಾರೆ. ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ ಅಭಿನವ ಹಾಲಶ್ರೀ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ (bail) ಅರ್ಜಿ ಸಲ್ಲಿಸಿದ್ದಾರೆ. ಅಭಿನವ ಹಾಲಶ್ರೀ ಪರ ವಕೀಲರು 57ನೇ CCH​​ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಈ ಜಾಮೀನು ಅರ್ಜಿ ವಿಚಾರಣೆ ನಾಳೆ (ಸೆಪ್ಟೆಂಬರ್ 16) ನಡೆಯಲಿದೆ.

MLA ಟಿಕೆಟ್ ಡೀಲಿಂಗ್ ಹಿಂದೆ ಇರೋ ಆ ದೊಡ್ಡವರು ಯಾರು ಅನ್ನೋ ಕುತೂಹಲ ಮನೆ ಮಾಡಿದೆ. ಇದೇ ಪ್ರಕರಣದಲ್ಲಿ ಎ3 ಆಗಿರೋ ಹಗಡಲಿ ತಾಲೂಕಿನ ಹಿರೇಹಡಗಲಿ ಹಾಲು ಮಠ ಅಭಿನವ ಹಾಲಶ್ರೀ ಅಜ್ಞಾತ ಸ್ಥಳ ಸೇರಿದ್ದಾರೆ. ಹಾಲು ಮಠಕ್ಕೂ ಬಾರದ ಸ್ವಾಮೀಜಿ ಎರಡು ದಿನಗಳೀಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ದೂರುದಾರ ಗೋವಿಂದ್ ಪೂಜಾರಿಯಿಂದ ಒಂದೂವರೆ ಕೋಟಿ ಪಡೆದಿದ್ದ ಸ್ವಾಮೀಜಿ ಸಿಕ್ಕಿಬಿದ್ದರೆ ದೊಡ್ಡವರ ಹೆಸರು ಬಾಯಿಬಿಡೋ ಸಾಧ್ಯತೆ ಇದೆ. ಹೀಗಾಗಿ ಸಿಸಿಬಿ ಪೊಲೀಸ್ರು ಸ್ವಾಮೀಜಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಸ್ವಾಮೀಜಿ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ಅವರಿಗೆ ಜಾಮೀನು ನೀಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ಮಠದಲ್ಲೇ ಟಿಕೆಟ್​ ಡೀಲ್​​ ನಡೆದಿತ್ತಾ? ಗೋವಿಂದ್​ ಬಾಬು, ಚೈತ್ರಾ-ಸ್ವಾಮೀಜಿ ಭೇಟಿ ಫೋಟೋಸ್ ವೈರಲ್

ಜಾಮೀನು ಸಿಗುವ ಸಾಧ್ಯತೆಗಳು ಕಡಿಮೆ ಇವೆ. ಒಂದು ವೇಳೆ ಕೋರ್ಟ್​ ಜಾಮೀನು ಅರ್ಜಿ ತಿರಸ್ಕೃತಗೊಳಿಸಿದರೆ, ಸ್ವಾಮೀಜಿ ಹೈಕೋರ್ಟ್​ ಮೆಟ್ಟಿಲೇರಬಹುದು. ಇತ್ತ ಸಿಸಿಬಿ ಅಷ್ಟರೊಳಗೆ ಸ್ವಾಮಿಜಿಯನ್ನು ಬಂಧಿಸಿ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಲು ಪ್ಲ್ಯಾನ್ ಮಾಡಿದ್ದಾರೆ. ಒಂದು ವೇಳೆ ಅಭಿನವಶ್ರೀ ಬಂಧನವಾಗ ಚೈತ್ರಾ ಹೇಳಿದ ಆ ದೊಡ್ಡವರ ಹೆಸರನ್ನ ಬಾಯಿ ಬಿಡ್ತಾರಾ ಅನ್ನೋ ಕುತೂಹಲ ಮನೆ ಮಾಡಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:31 am, Fri, 15 September 23