ಇಬ್ಬರೂ ಜತೆಗಿರುವ ವಿಡಿಯೋ ನೋಡಿದ್ದೀರಾ, ಈಗ ಅವರು ಯಾರೆಂಬುದು ಗೊತ್ತಿಲ್ಲ ಅಂದ್ರೆ ಏನು?: HDKಗೆ ಚಲುವರಾಯಸ್ವಾಮಿ ಟಾಂಗ್

| Updated By: ಸಾಧು ಶ್ರೀನಾಥ್​

Updated on: Jan 13, 2021 | 2:24 PM

ರಾಧಿಕಾ, ಹೆಚ್‌ಡಿಕೆ ಜತೆಯಲ್ಲಿ ಓಡಾಡಿದ್ದು ನೋಡಿದ್ದೀರಾ. ಅವರಿಬ್ಬರು ಜತೆಯಲ್ಲಿ ಹೋಗಿರೋದನ್ನು ನೋಡಿದ್ದೀರಾ. ಈಗ ಅವರು ಯಾರೆಂಬುದು ಗೊತ್ತಿಲ್ಲ ಅಂದ್ರೆ ಏನು? ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

ಇಬ್ಬರೂ ಜತೆಗಿರುವ ವಿಡಿಯೋ ನೋಡಿದ್ದೀರಾ, ಈಗ ಅವರು ಯಾರೆಂಬುದು ಗೊತ್ತಿಲ್ಲ ಅಂದ್ರೆ ಏನು?: HDKಗೆ ಚಲುವರಾಯಸ್ವಾಮಿ ಟಾಂಗ್
ಮಾಜಿ ಸಚಿವ ಚಲುವರಾಯಸ್ವಾಮಿ
Follow us on

ಮಂಡ್ಯ: ರಾಧಿಕಾ, ಹೆಚ್‌ಡಿಕೆ ಜತೆಯಲ್ಲಿ ಓಡಾಡಿದ್ದು ನೋಡಿದ್ದೀರಾ. ಅವರಿಬ್ಬರು ಜತೆಯಲ್ಲಿ ಹೋಗಿರೋದನ್ನು ನೋಡಿದ್ದೀರಾ. ಈಗ ಅವರು ಯಾರೆಂಬುದು ಗೊತ್ತಿಲ್ಲ ಅಂದ್ರೆ ಏನು? ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

ಕೆಲದಿನಗಳ ಹಿಂದೆ ಶ್ರೀರಂಗಪಟ್ಟಣದ ನೇರಳೆಕೆರೆ ಗ್ರಾಮಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ರಾಧಿಕಾಗೆ ಸಿಸಿಬಿ ನೋಟಿಸ್​ ಬಂದಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಯಾರಪ್ಪ ಅವರೆಲ್ಲ? ಅದ್ಯಾರೋ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು. ಇದೇ HDK ಹೇಳಿಕೆಗೆ ಇಂದು ಚಲುವರಾಯಸ್ವಾಮಿ ವ್ಯಂಗ ಮಾಡಿದ್ದಾರೆ.

ರಾಧಿಕಾ, ಹೆಚ್‌ಡಿಕೆ ಜತೆಯಲ್ಲಿ ಓಡಾಡಿದ್ದು ನೋಡಿದ್ದೀರಾ. ಅವರಿಬ್ಬರು ಜತೆಯಲ್ಲಿ ಹೋಗಿರೋದನ್ನು ನೋಡಿದ್ದೀರಾ. ಇಬ್ಬರೂ ಜತೆಗಿರುವ ವಿಡಿಯೋವನ್ನೂ ನೋಡಿದ್ದೀರಾ. ಈಗ ಅವರು ಯಾರೆಂಬುದು ಗೊತ್ತಿಲ್ಲ ಅಂದ್ರೆ ಏನು? ಅವರ ವೈಯಕ್ತಿಕ ಜೀವನದ ಬಗ್ಗೆ ನಾನು ಹೇಳಿಕೆ ಕೊಡಲ್ಲ ಎಂದು ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಹೇಳಿದ್ರು.

ರಾಧಿಕಾ ಕುಮಾರಸ್ವಾಮಿ ಯಾರು ಅಂತಾ ಗೊತ್ತಿಲ್ಲ: HD ಕುಮಾರಸ್ವಾಮಿ