Chamarajanagar: ಬಂಡೀಪುರದ ಹಂಟಿಂಗ್ ಸ್ಪೆಷಲಿಸ್ಟ್ ರಾಣಾ ಇನ್ನಿಲ್ಲ

| Updated By: Rakesh Nayak Manchi

Updated on: Aug 02, 2022 | 10:05 AM

ಕಳ್ಳ ಬೇಟೆಗಾರರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಬಂಡೀಪುರದ ಹಂಟಿಂಗ್ ಸ್ಪೆಷಲಿಸ್ಟ್ ರಾಣಾ (9) ಇಂದು ಬೆಳಗ್ಗೆ ನಿಧನ ಹೊಂದಿದೆ. ರಾಣನಿಗೆ ವಯಸ್ಸಾದ ಕಾರಣ ನಿವೃತ್ತಿ ನೀಡಲು ಅರಣ್ಯ ಇಲಾಖೆ ಚಿಂತನೆ ನಡೆಸಿತ್ತು.

Chamarajanagar: ಬಂಡೀಪುರದ ಹಂಟಿಂಗ್ ಸ್ಪೆಷಲಿಸ್ಟ್ ರಾಣಾ ಇನ್ನಿಲ್ಲ
ಹಂಟಿಂಗ್ ಸ್ಪೆಷಾಲಿಸ್ಟ್ ರಾಣಾ
Follow us on

ಚಾಮರಾಜನಗರ: ಕಳ್ಳ ಬೇಟೆಗಾರರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಬಂಡೀಪುರದ ಹಂಟಿಂಗ್ ಸ್ಪೆಷಲಿಸ್ಟ್ ರಾಣಾ (9) ಇಂದು ಬೆಳಗ್ಗೆ ನಿಧನ ಹೊಂದಿದೆ. ರಾಣನಿಗೆ ವಯಸ್ಸಾದ ಕಾರಣ ನಿವೃತ್ತಿ ನೀಡಲು ಅರಣ್ಯ ಇಲಾಖೆ ಚಿಂತನೆ ನಡೆಸಿತ್ತು. ಆದರೆ ಇಂದು ಬೆಳಗ್ಗೆ ರಾಣ ಕೊನೆಯುಸಿರೆಳೆದಿದ್ದಾನೆ. ಸದ್ಯ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಇಲಾಖೆ ತೀರ್ಮಾನಿಸಿದೆ.

ಅರಣ್ಯ ಇಲಾಖೆಯ ಹೆಮ್ಮೆಯಾಗಿದ್ದ ರಾಣಾ ಸಾಮಾನ್ಯವಾದ ಶ್ವಾನ ಆಗಿರಲಿಲ್ಲ. ಕಳ್ಳ ಬೇಟೆಗಾರರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ರಾಣಾ ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಸೈ ಎನಿಸಿಕೊಂಡಿದ್ದ. ಹಲವು ಕಳ್ಳತನ ಪ್ರಕರಣ ಭೇಧಿಸುವಲ್ಲಿ ರಾಣಾನ ಪಾತ್ರಕೂಡ ದೊಡ್ಡದು. ಕೇವಲ ಬಂಡೀಪುರದಲ್ಲಿ ಮಾತ್ರವಲ್ಲ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದಲ್ಲೂ ಹುಲಿ‌ ಕಾರ್ಯಾಚರಣೆಯಲ್ಲಿಯೂ ರಾಣಾ ಭಾಗಿಯಾಗದ್ದ. ಇಂತಹ ಧೈರ್ಯಶಾಲಿ ರಾಣಾನನ್ನು ಕಳೆದುಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.

ಇಷ್ಟೆಲ್ಲಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ರಾಣಾ ಸೋಮವಾರ ಅನಾರೋಗ್ಯದಿಂದ ಬಳಲುತ್ತಿದ್ದ. ಆದರೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ. ಸಕಲ ಸರ್ಕಾರಿ ಗೌರವಗಳೊಂದಿಗೆ ರಾಣಾನ ಅಂತ್ಯಕ್ರಿಯೆ ನೆರವೇರಿಸಲು ಅರಣ್ಯ ಸಿಬ್ಬಂದಿ ಇಲಾಖೆ ಸಿಬ್ಬಂದಿಗಳು ಸಿದ್ಧತೆ ನಡೆಸುತ್ತಿದ್ದಾರೆ.

Published On - 9:54 am, Tue, 2 August 22