ಭತ್ತ ಬೆಳೆದಿದ್ದರೂ ಖರೀದಿ ಮಾಡದ ಸರ್ಕಾರ, ದಲ್ಲಾಳಿಗಳು: ಹತಾಶೆಯಿಂದ ರೈತ ಆತ್ಮಹತ್ಯೆಗೆ ಶರಣು
ಸಾಲಬಾಧೆಯಿಂದ ಮನನೊಂದು ರೈತನೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜ್ಯೋತಿಗೌಡನಪುರದಲ್ಲಿ ನಡೆದಿದೆ. 33 ವರ್ಷದ ರೈತ ಬಸಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚಾಮರಾಜನಗರ: ಸಾಲಬಾಧೆಯಿಂದ ಮನನೊಂದು ರೈತನೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜ್ಯೋತಿಗೌಡನಪುರದಲ್ಲಿ ನಡೆದಿದೆ. 33 ವರ್ಷದ ರೈತ ಬಸಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಸಪ್ಪ ಭತ್ತ ಬೆಳೆದಿದ್ದರೂ ಅದನ್ನು ಸರ್ಕಾರ ಹಾಗೂ ದಲ್ಲಾಳಿಗಳು ಖರೀದಿ ಮಾಡಿರಲಿಲ್ಲ. ಈ ಮಧ್ಯೆ, ವ್ಯವಸಾಯಕ್ಕಾಗಿ ರೈತ ಬ್ಯಾಂಕ್ ಮತ್ತು ಖಾಸಗಿ ವ್ಯಕ್ತಿಗಳಿಂದ 5 ಲಕ್ಷ ಸಾಲ ಮಾಡಿದ್ದರು. ಹೀಗಾಗಿ, ಅತ್ತ ಬೆಳೆ ಮಾರಾಟವಾಗದೇ ಇತ್ತ ಬಡ್ಡಿ ಕಟ್ಟಲಾಗದೆ ಹತಾಶೆಯಿಂದ ರೈತ ಬಸಪ್ಪ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಂಬಾನಿ ವಿರುದ್ಧ ರೈತರ ರಣಕಹಳೆ: ಮೈಸೂರಿನಲ್ಲಿ ಜಿಯೋ ಸಿಮ್ಗೆ ಉಗಿದು.. ವಾಪಸ್ ಮಾಡಿದ ಕೃಷಿಕರು