ಚಾಮರಾಜನಗರ ವ್ಯಾಪ್ತಿಯಲ್ಲಿ ಕಾಡಿಗೆ ಬೆಂಕಿ: ಕಿಡಿಗೇಡಿಗಳು ಬೆಂಕಿ ಹಾಕಿರುವುದು ಮೇಲ್ನೊಟಕ್ಕೆ ಪತ್ತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 04, 2024 | 10:10 PM

ಪುಣಜನೂರು ವ್ಯಾಪ್ತಿಯಲ್ಲಿ ಕಾಡಿಗೆ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಾಕಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ. ಬಿ.ಆರ್.ಟಿ ಮುಖ್ಯಸ್ಥೆ ದೀನಾ ಕಂಟ್ರ್ಯಾಕ್ಟರ್​ರಿಂದ ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಬೆಂಕಿ ಕಾಡಿಗೆ ಬಿದ್ದ ಕುರಿತು ತನಿಖೆ ನಡೆಯುತ್ತಿದೆ. 

ಚಾಮರಾಜನಗರ ವ್ಯಾಪ್ತಿಯಲ್ಲಿ ಕಾಡಿಗೆ ಬೆಂಕಿ: ಕಿಡಿಗೇಡಿಗಳು ಬೆಂಕಿ ಹಾಕಿರುವುದು ಮೇಲ್ನೊಟಕ್ಕೆ ಪತ್ತೆ
ಕಾಡಿಗೆ ಬೆಂಕಿ
Follow us on

ಚಾಮರಾಜನಗರ, ಮಾರ್ಚ್​ 4: ಪುಣಜನೂರು ವ್ಯಾಪ್ತಿಯಲ್ಲಿ ಕಾಡಿಗೆ ಬೆಂಕಿ (fire) ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಾಕಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ. ಬಿ.ಆರ್.ಟಿ ಮುಖ್ಯಸ್ಥೆ ದೀನಾ ಕಂಟ್ರ್ಯಾಕ್ಟರ್​ರಿಂದ ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಕಾಡಿನ ಮೂರು ಕಡೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸುಮಾರು 50 ಎಕರೆಯಷ್ಟು ಪ್ರದೇಶ ಬೆಂಕಿಯಿಂದ ನಾಶವಾಗಿದೆ. ಎರಡು ಕಡೆ ಬೆಂಕಿಯನ್ನ ನಂದಿಸುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬೆಂಕಿ ಕಾಡಿಗೆ ಬಿದ್ದ ಕುರಿತು ತನಿಖೆ ನಡೆಯುತ್ತಿದೆ.

ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಬೆಟ್ಟದಲ್ಲಿ ಕಾಡ್ಗಿಚ್ಚಿಗೆ ಅರಣ್ಯ ನಾಶ

ಪಶ್ಚಿಮ ಘಟ್ಟಗಳ ಸಾಲಿನ ಪ್ರವಾಸಿತಾಣಗಳು ಕಾಡ್ಗಿಚ್ಚಿಗೆ ಧಗಧಗಿಸಿ ಉರಿಯುತ್ತಿದೆ. ಪ್ರವಾಸಿಗರ ಪಾಲಿನ ಸ್ವರ್ಗದಂತಿದ್ದ ಮುಳ್ಳಯ್ಯನಗಿರಿ ,ಕೆಮ್ಮಣ್ಣುಗುಂಡಿ ಬೆಟ್ಟದಲ್ಲಿ ಕಾಡ್ಗಿಚ್ಚಿಗೆ ಅಪರೂಪದ ಶೋಲಾ ಅರಣ್ಯ ನಾಶವಾಗುತ್ತಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಚಿಕ್ಕಮಗಳೂರು ತಾಲೂಕಿನ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಪ್ರವಾಸಿಗರ ಸ್ವರ್ಗ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಕಾಡ್ಗಿಚ್ಚಿಗೆ ಪ್ರಕೃತಿ ನಾಶವಾಗುತ್ತಿದೆ.

ಇದನ್ನೂ ಓದಿ: ನಾಗಮಲೆಗೆ ಹೋಗುವ ಭಕ್ತರಿಗೆ ಶಾಕ್​​​! ಟ್ರಕ್ಕಿಂಗ್​ಗೆ ನಿರ್ಬಂಧ ವಿಧಿಸಿದ ಅರಣ್ಯ ಇಲಾಖೆ

ಇತ್ತೀಚಿನ ದಿನಗಳಿಂದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಮುಳ್ಳಯ್ಯನಗಿರಿ ಕೆಮ್ಮಣ್ಣುಗುಂಡಿ ಪ್ರದೇಶದ ಶೋಲಾ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸುತ್ತಿದ್ದು ಸಾವಿರಾರು ಎಕರೆ ಪ್ರದೇಶದಲ್ಲಿದ್ದ ಶೋಲಾ ಅರಣ್ಯ ಬೆಂಕಿಗೆ ಭಸ್ಮವಾಗಿದೆ. ಅಪರೂಪದ ಸಸ್ಯ ರಾಶಿಯನ್ನ ಹೊಂದಿರುವ ಮುಳ್ಳಯ್ಯನಗಿರಿ ಕೆಮ್ಮಣ್ಣುಗುಂಡಿ ಭಾಗದಲ್ಲಿ ಶೋಲಾ ಅರಣ್ಯ ನಾಶವಾಗುತ್ತಿರುವುದು ಪ್ರಕೃತಿ ಪ್ರೇಮಿಗಳಿಗೆ ಆಕ್ರೋಶ ತರಿಸಿದೆ.

ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ಮೋಜು ಮಸ್ತಿಯಿಂದ ಶೋಲಾ ಕಾಡಿನಲ್ಲಿ ಕಾಡ್ಗಿಚ್ಚಿಗೆ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರವಾಸಿಗರು ಸೂಕ್ಷ್ಮ ಪ್ರದೇಶದಲ್ಲಿ ಸಿಗರೆಟ್ ಸೇದಿ ಎಸೆಯುವುದರಿಂದ ಪದೇಪದೇ ಬೆಂಕಿ ಬಿಳಲು ಕಾರಣವಾಗುತ್ತಿದೆ ಎಂಬ ಆರೋಪದ ಕೇಳಿ ಬಂದಿತ್ತು.

ಈ ಹಿಂದೆ ಅರಣ್ಯ ಇಲಾಖೆ ಬೇಸಿಗೆ ಆರಂಭಕ್ಕೂ ಮುನ್ನವೇ ಫೈರ್ ಲೈ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಫೈರ್ ಲೈನ್ ಮಾಡೋದನ್ನ ಬಿಟ್ಟಿದೆ. ಒಂದು ಕಡೆ ಬಿಸಿಲ ಝಳಕ್ಕೆ ಬೆಂಕಿ ಬೀಳ್ತಿದ್ದರೆ ಮತ್ತೊಂದೆಡೆ ಹೇರಳವಾಗಿ ಬರುವ ಪ್ರವಾಸಿಗರು ಮನಸೋ ಇಚ್ಛೆ ಮೋಜು ಮಸ್ತಿ ಮಾಡಿ. ಬೀಡಿ, ಸಿಗರೇಟ್ ಸೇದಿ ಎಲ್ಲಂದ್ರಲ್ಲಿ ಹಾಕ್ತಿರೋದ್ರಿಂದ ಬೆಂಕಿ ಹತ್ತಿಕೊಳ್ಳುತ್ತಿದೆ.

ಇದನ್ನೂ ಓದಿ: ಚಾಮರಾಜನಗರ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ನಿಷೇಧ ವಾಪಸ್

ಇದೆಲ್ಲದರ ಜೊತೆಗೆ ಹೋಂ ಸ್ಟೇಗಳಲ್ಲಿ ಫೈರ್ ಹಾಕ್ತಿದ್ದಾರೆ ಇದ್ರಿಂದಾಗಿಯೂ ಕೂಡಾ ಬೆಂಕಿ ಹತ್ಕೊಳ್ತಿದೆ. ಈ ಕಾಡ್ಗಿಚ್ಚಿನಿಂದಾಗಿ ಅರನ್ಯದಲ್ಲಿರೋ ಸಣ್ಣ-ಪುಟ್ಟ ಪ್ರಾಣಿ ಪಕ್ಷಿಗಳು, ಸರಿಸೃಪಗಳು ಬೆಂಕಿಗಾಹುತಿಯಾಗುತ್ತಿವೆ. ಆದರೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ವೇನೋ ಅನ್ನೋ ರೀತಿ ಇದೆ‌. ಈ ಎಲ್ಲ ಅನಾಹುತಕ್ಕೆ ಅರಣ್ಯ ಇಲಾಖೆಯೇ ನೇರ ಹೊಣೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.