Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್ ಮೂಲದ ವ್ಯಕ್ತಿಗೆ 9 ಕೋಟಿ ದೋಖಾ: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಆರೋಪ

ಗುಜರಾತ್ ಮೂಲದ ವ್ಯಕ್ತಿಯೊಂದ ಗಣಿ ಜಮೀನನ್ನು ಖರೀದಿಸಿದ ವಿಚಾರದಲ್ಲಿ 9 ಕೋಟಿ ವಂಚಿಸಿರುವ ಆರೋಪ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಕೇಳಿಬಂದಿದೆ.

ಗುಜರಾತ್ ಮೂಲದ ವ್ಯಕ್ತಿಗೆ 9 ಕೋಟಿ ದೋಖಾ: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಆರೋಪ
ಚಾಮರಾಜನಗರ ಶಾಸಲ ಪುಟ್ಟರಂಗಶೆಟ್ಟಿ ಹಾಗೂ ಅವರ ಅಳಿಯ ರಾಮಚಂದ್ರ
Follow us
TV9 Web
| Updated By: Rakesh Nayak Manchi

Updated on:Nov 19, 2022 | 3:00 PM

ಚಾಮರಾಜನಗರ: ಗುಜರಾತ್ ಮೂಲದ ವ್ಯಕ್ತಿಯಿಂದ ಗಣಿ ಜಮೀನನ್ನು ಖರೀದಿಸಿ ನೀಡಬೇಕಾಗಿದ್ದ ಹಣದಲ್ಲಿ 9 ಕೋಟಿ ವಂಚಿಸಿರುವ ಆರೋಪ ಚಾಮರಾಜನಗರ ಶಾಸಕ (Chamarajanagar MLA) ಪುಟ್ಟರಂಗಶೆಟ್ಟಿ (Puttarangashetty) ವಿರುದ್ಧ ಕೇಳಿಬಂದಿದೆ. ಶಾಸಕರ ವಿರುದ್ಧ ದೂರು ನೀಡಿದರೂ ಪ್ರಕರಣ ದಾಖಲಿಸದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿದ ಗುಜರಾತ್​ನ ಕಮಲೇಶ್, ನನ್ನ ಜಮೀನನ್ನು ವಾಪಸ್ ಕೊಡಿ , ಅವರು ಕೊಟ್ಟಿರುವ ಹಣವನ್ನು ವಾಪಸ್ ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ.

ಗುಜರಾತ್​ನ ರಾಜ್ ಘೋಟ್ ನಿವಾಸಿ ಕಮಲೇಶ್ ಅವರು ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಜಮೀನು ಖರೀದಿಮಾಡಿ ಸುಮಾರು 8 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದರು. ಕಾರಣಾಂತರದಿಂದ ಶಾಸಕ ಪುಟ್ಟರಂಗಶೆಟ್ಟಿಗೆ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿದ್ದರು. ಶಾಸಕ ಹಾಗೂ ಶಾಸಕರ ಅಳಿಯ ರಾಮಚಂದ್ರ ಅವರು ಕಮಲೇಶ್ ಜೊತೆ 14 ಕೋಟಿಗೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಚಿಲುಮೆ ಸಂಸ್ಥೆ ಜೊತೆ ಡಾ.ಅಶ್ವತ್ಥ್‌ನಾರಾಯಣ ಸಂಪರ್ಕ, ಟ್ವಿಟರ್‌ ಮೂಲಕ ಕಾಂಗ್ರೆಸ್ ಆರೋಪ

ಒಂದು ಕೋಟಿ ಹಣವನ್ನ ಮುಂಗಡವಾಗಿ ಶಾಸಕರ ಖಾತೆಯಿಂದ ಕಮಲೇಶ್ ಖಾತೆಗೆ ವರ್ಗಾವಣೆ ಮಾಡಲಾಗಿದ್ದು, ಬಳಿಕ 2.5 ಕೋಟಿಯನ್ನು ಕೆಲ ತಿಂಗಳ ಬಳಿಕ ಶಾಸಕರು ನೀಡಿದ್ದಾರೆ. ಈ ನಡುವೆ ಗಲಾಟೆಯಿಂದ ಜಮೀನಿ ಯಾವುದೇ ರಿಜಿಸ್ಟರ್ ಆಗಿಲ್ಲ. ಆದರೆ ಶಾಸಕ ಪುಟ್ಟರಂಗ ಶೆಟ್ಟಿ ಅಳಿಯ ರಾಮಚಂದ್ರ ಹಾಗೂ ಬೆಂಬಲಿಗ ಶಾಂತ ಕುಮಾರ್ ಕೊಲೆ ಬೆದರಿಕೆ ಹಾಕಿ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂದು ಕಮಲೇಶ್ ಆರೋಪಿಸಿದ್ದಾರೆ.

ಸದ್ಯ 1,200 ಕ್ಯುಬಿಕ್ ಮೀಟರ್ ಕರಿ ಕಲ್ಲನ್ನು ತೆಗೆದಿದ್ದಾರೆ ಎಂದು ಆರೋಪ ಮಾಡಿರುವ ಕಮಲೇಶ್, ಜಮೀನು ವಿಚಾರದಲ್ಲಿ ನಡೆದ ಡೀಲ್​ನಲ್ಲಿ ಕೊಟ್ಟ ಹಣವನ್ನು ವಾಪಸ್ ಶಾಸಕರಿಗೆ ಕೊಡುತ್ತೇನೆ, ನನ್ನ ಕರಿಕಲ್ಲನ್ನು ವಾಪಸ್ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಶಾಸಕರ ವಿರುದ್ಧ ದೂರು ನೀಡಿದರೂ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಸ್ಪೀಕರ್ ಅನುಮತಿ ಬೇಕು ಎಂದು ಪೊಲೀಸರು ಹೇಳುತ್ತಿದ್ದಾರೆ. ಸದ್ಯ ಶಾಸಕರ ಅಳಿಯ ರಾಮಚಂದ್ರ ಹಾಗೂ ಶಾಂತ ಕುಮಾರ್ ವಿರುದ್ಧ ಅಷ್ಟೇ ಎಫ್​ಐಆರ್ ದಾಖಲಾಗಿದೆ ಎಂದಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:55 pm, Sat, 19 November 22