ಚಿರತೆ ದಾಳಿಯಿಂದ ಗಂಭೀರ ಗಾಯಗೊಡಿದ್ದ ಬಾಲಕಿ ಸಾವು; 15 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದ ಈಶ್ವರ ಖಂಡ್ರೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 15, 2023 | 1:12 PM

ಇತ್ತೀಚೆಗೆ ಚಿರತೆ ದಾಳಿಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅದರಂತೆ ನಿನ್ನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಗ್ಗಲಿಗುಂದಿ ಸೋಲಿಗರ ಹಾಡಿಯ ಬಾಲಕಿ ಮೇಲೆ ಚಿರತೆ ದಾಳಿ ಮಾಡಿತ್ತು. ಇದರಿಂದ ತೀವ್ರ ಗಾಯಗೊಂಡಿದ್ದ ಬಾಲಕಿ ಇದೀಗ ಸಾವನ್ನಪ್ಪಿದ್ದಾಳೆ.

ಚಿರತೆ ದಾಳಿಯಿಂದ ಗಂಭೀರ ಗಾಯಗೊಡಿದ್ದ ಬಾಲಕಿ ಸಾವು; 15 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದ ಈಶ್ವರ ಖಂಡ್ರೆ
ಚಿರತೆ ದಾಳಿ ಬಾಲಕಿ ಸಾವು, ಈಶ್ವರ್​ ಖಂಡ್ರೆ
Follow us on

ಚಾಮರಾಜನಗರ: ಚಿರತೆ(Leopard) ದಾಳಿಯಿಂದ ತೀವ್ರ ಗಾಯಗೊಂಡಿದ್ದ ಬಾಲಕಿ ಇದೀಗ ಸಾವನ್ನಪ್ಪಿದ್ದಾಳೆ. ಸುಶೀಲ(6) ಮೃತ ಬಾಲಕಿ. ಚಾಮರಾಜನಗರ ಜಿಲ್ಲೆಯ ಹನೂರು(Hanur) ತಾಲೂಕಿನ ಕಗ್ಗಲಿಗುಂದಿ ಸೋಲಿಗರ ಹಾಡಿಯಲ್ಲಿ ಬಾಲಕಿ ಮನೆಯಿಂದ ಹೊರಬಂದಿದ್ದ ವೇಳೆ ಚಿರತೆ ದಾಳಿ ಮಾಡಿ, ಎಳೆದೊಯ್ಯಲು ಯತ್ನಿಸಿತ್ತು. ಕೂಡಲೇ ಇದನ್ನ ನೋಡಿದ ಮನೆಯವರು ಕೂಗಿಕೊಳ್ಳುತ್ತಿದ್ದಂತೆ ಬಿಟ್ಟು ಓಡಿತ್ತು. ಬಳಿಕ ಆಕೆಯನ್ನ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಇದೀಗ ಗಂಭೀರ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ.

ಸರ್ಕಾರದ ವತಿಯಿಂದ 15 ಲಕ್ಷ ರೂ. ಪರಿಹಾರ ನೀಡಲು ಸೂಚನೆ

ಇನ್ನು ಮಂತ್ರಿ ಆದ ನಂತರ ಮೊದಲನೇ ಬಾರಿ ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಚಿವ ಈಶ್ವರ​ ಖಂಡ್ರೆ ಮಾತನಾಡಿ ‘ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಚಿರತೆ ದಾಳಿಗೆ ಬಾಲಕಿ ಸುಶೀಲಾ ಸಾವು ವಿಚಾರ ಕೇಳಿ ಬೇಸರ ಆಗಿದ್ದು, ಸರ್ಕಾರದ ವತಿಯಿಂದ 15 ಲಕ್ಷ ರೂ. ಪರಿಹಾರ ನೀಡಲು ಸೂಚನೆ ನೀಡಿ, 4 ಸಾವಿರ ಮಾಸಾಶನ ಬರುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟು ಜಾರಿಗೊಳಿಸಲು ಪ್ರಯತ್ನ ಪಡುತ್ತೇನೆ ಎಂದರು.

ಇದನ್ನೂ ಓದಿ:Leopard Attacks: ರಾಮನಗರ ಜಿಲ್ಲೆಯಲ್ಲಿ ಮತ್ತಷ್ಟು ಹೆಚ್ಚಿದ ಚಿರತೆ ದಾಳಿ ಭೀತಿ: ತಪ್ಪಿಸಿಕೊಳ್ಳಲು ಹೋಗಿ ಮರದಿಂದ ಕೆಳಗೆಬಿದ್ದ ಯುವತಿ

ಚಿರತೆ ದಾಳಿಯಿಂದ ಬದುಕುಳಿದ ಯುವ ರೈತ; ಚಿರತೆಯನ್ನ ಹಿಡಿಯಲು ಅರಣ್ಯಾಧಿಕಾರಿಗಳಿಂದ ಹರಸಾಹಸ

ಮೈಸೂರು: ಹುಣಸೂರು ತಾಲೂಕಿನ ಗ್ರಾಮದ ಸಂತೆಯಲ್ಲಿ 29 ವರ್ಷದ ಕುಮಾರಚಾರಿ ತನ್ನ ಸ್ನೇಹಿತರೊಂದಿಗೆ ಇದ್ದಾಗ ಚಿರತೆ ದಾಳಿ ಮಾಡಿತ್ತು. ಈ ವೇಳೆ ಭುಜ ಮತ್ತು ಮೊಣಕಾಲುಗಳಿಗೆ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದೀಗ ಚಿರತೆ ದಾಳಿಯಿಂದ ಕಂಗಾಲಾಗಿರುವ ಗ್ರಾಮಸ್ಥರು, ಕೂಡಲೇ ಚಿರತೆಯನ್ನ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ