Sign In

By signing in or creating an account, you agree with Associated Broadcasting Company's Terms & Conditions and Privacy Policy.

Leopard spotted: ಹಾಸನದ ಹೊಸಳ್ಳಿ ಗ್ರಾಮದಲ್ಲಿ ದನದ ಕೊಟ್ಟಿಗೆ ಹೊಕ್ಕಿರುವ ಚಿರತೆ ಹಸುಗಳಿಗೆ ತೊಂದರೆ ನೀಡದೆ ಸೊಂಪಾಗಿ ನಿದ್ರಿಸುತ್ತಿದೆ!

Leopard spotted: ಹಾಸನದ ಹೊಸಳ್ಳಿ ಗ್ರಾಮದಲ್ಲಿ ದನದ ಕೊಟ್ಟಿಗೆ ಹೊಕ್ಕಿರುವ ಚಿರತೆ ಹಸುಗಳಿಗೆ ತೊಂದರೆ ನೀಡದೆ ಸೊಂಪಾಗಿ ನಿದ್ರಿಸುತ್ತಿದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 14, 2023 | 6:38 PM

ಚಿರತೆ ಮಧ್ಯಾಹ್ನ 1.30 ರಿಂದ ಅಲ್ಲಾಡದಂತೆ ಮಲಗಿರುವುದು ಅಚ್ಚರಿ ಹುಟ್ಟಿಸುತ್ತದೆ. ಅ ಚಿರತೆಗೇನಾದರೂ ಆಗಿದೆಯಾ ಎಂಬ ಸಂಶಯ ಕೂಡ ಮೂಡುತ್ತಿದೆ.

ಹಾಸನ: ಇದೆಲ್ಲೋ ಸಸ್ಯಾಹಾರಿ ಚಿರತೆ (leopard) ಇರಬೇಕು ಮಾರಾಯ್ರೇ. ಯಾಕೆ ಅಂತ ನೀವೇ ನೋಡಿ. ಹಲವು ಹಸುಗಳಿರುವ ದನದ ಕೊಟ್ಟಿಗೆ (cattle shed) ಹೊಕ್ಕರೂ ಯಾವುದೇ ಪ್ರಾಣಿಯ ಮೇಲೆ ಆಕ್ರಮಣ ನಡೆಸದೆ, ದನಕರುಗಳಿಗೆ ಹುಲ್ಲು ಹಾಕುವ ಜಾಗದಲ್ಲಿ ಪ್ರಶಸ್ತವಾಗಿ ಮಲಗಿಬಿಟ್ಟಿದೆ. ಹಾಸನ ತಾಲ್ಲೂಕಿನ ಹೊಸಳ್ಳಿ ಗ್ರಾಮದ (Hosalli village) ನಿವಾಸಿ ಮಹೇಶ್ ಅವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಕಂಡು ಬಂದಿರುವ ದೃಶ್ಯ ಇದು. ಪಶುವೈದ್ಯರು, ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಚಿರತೆಯನ್ನು ಹಿಡಿಯಲು ಹರಸಾಹಸ ನಡೆಸಿದ್ದಾರೆ ಆದರೆ ಸಾಧ್ಯವಾಗುತ್ತಿಲ್ಲ. ಟಿವಿ9 ಹಾಸನ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಕೊಟ್ಟಿಗೆಯ ಮಾಳಿಗೆ ಮೇಲಿನ ಹೆಂಚುಗಳನ್ನು ತೆಗೆದು ಕುಡಗೋಲಿನಿಂದ ಹಸುಗಳ ಕೊರಳಿಗೆ ಬಿಗಿದಿದ್ದ ಹಗ್ಗಗಳನ್ನು ಕುಯ್ದು ಅವುಗಳ ರಕ್ಷಣೆ ಮಾಡಲಾಗಿದೆಯಂತೆ. ಅಷ್ಟೆಲ್ಲ ಗಲಾಟೆ ಸದ್ದು ಕೊಟ್ಟಿಗೆಯ ಸುತ್ತಮುತ್ತ ಆಗುತ್ತಿದ್ದರೂ ಚಿರತೆ ಮಧ್ಯಾಹ್ನ 1.30 ರಿಂದ ಅಲ್ಲಾಡದಂತೆ ಮಲಗಿರುವುದು ಅಚ್ಚರಿ ಹುಟ್ಟಿಸುತ್ತದೆ. ಅ ಚಿರತೆಗೇನಾದರೂ ಆಗಿದೆಯಾ ಎಂಬ ಸಂಶಯ ಕೂಡ ಮೂಡುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ