ಚಾಮರಾಜನಗರ: ಮಗುವಿನ ಹಾಡಿಯಲ್ಲಿ 60 ಮನೆಗಳಿಗಿಲ್ಲ ವಿದ್ಯುತ್; ಕಗ್ಗತ್ತಲಲ್ಲೇ ಕಾಲ ಕಳೆಯುತ್ತಿರುವ ಜನರು

ರಾಜ್ಯದ್ಯಂತ ಗೃಹ ಜ್ಯೋತಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಇದರ ಪ್ರಯೋಜನವನ್ನು ಫಲಾನುಭವಿಗಳು ಪಡೆಯುತ್ತಿದ್ದಾರೆ. ಆದರೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಿನಲ್ಲಿರುವ ಮಗುವಿನ ಹಾಡಿಯಲ್ಲಿರುವ 60 ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲೇ ಕಾಲ ಕಳೆಯುತ್ತಿದ್ದಾರೆ.

ಚಾಮರಾಜನಗರ: ಮಗುವಿನ ಹಾಡಿಯಲ್ಲಿ 60 ಮನೆಗಳಿಗಿಲ್ಲ ವಿದ್ಯುತ್; ಕಗ್ಗತ್ತಲಲ್ಲೇ ಕಾಲ ಕಳೆಯುತ್ತಿರುವ ಜನರು
ಬಂಡೀಪುರ ಅರಣ್ಯ ಪ್ರದೇಶದ ಮಗುವಿನ ಹಾಡಿಯಲ್ಲಿ 60 ಮನೆಗಳಿಗಿಲ್ಲ ವಿದ್ಯುತ್; ಕಗ್ಗತ್ತಲಲ್ಲೇ ಕಾಲ ಕಳೆಯುತ್ತಿರುವ ಜನರು
Edited By:

Updated on: Jan 04, 2024 | 1:45 PM

ಚಾಮರಾಜನಗರ, ಜ.4: ರಾಜ್ಯದ್ಯಂತ ಗೃಹ ಜ್ಯೋತಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಇದರ ಪ್ರಯೋಜನವನ್ನು ಫಲಾನುಭವಿಗಳು ಪಡೆಯುತ್ತಿದ್ದಾರೆ. ಆದರೆ, ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಿನಲ್ಲಿರುವ ಮಗುವಿನ ಹಾಡಿಯಲ್ಲಿರುವ 60 ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲೇ ಕಾಲ ಕಳೆಯುತ್ತಿದ್ದಾರೆ.

ಸರ್ಕಾರದ ಯಾವುದೇ ಯೋಜನೆಗಳು ಕಾಡಂಚಿನಲ್ಲಿರುವ ಮಗುವಿನ ಹಾಡಿಯ ಜನರಿಗೆ ತಲುತ್ತಿಲ್ಲ. ಜನಪ್ರತಿನಿಧಿಗಳು, ನಾಯಕರು ಕೇವಲ ಮತಯಾಚಣೆ ಮಾಡಲು ಬಂದು ಹೋಗುತ್ತಾರೆ. ಗೆದ್ದ ನಂತರ ಇತ್ತ ತಲೆಯೇ ಹಾಕುವುದಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ತಲೆನೇ ಕೆಡಿಸಿಕೊಳ್ಳುವುದಿಲ್ಲ. ಹಾಡಿಯಲ್ಲಿ ವಿದ್ಯುತ್ ಕಂಬಳಿದ್ದರೂ 60 ಮನೆಗಳಿಗೆ ಸಂಪರ್ಕ ಕಲ್ಪಿಸಿಲ್ಲ. ಕಗ್ಗತ್ತಲಲ್ಲೆ ಕಾಲ ಕಳೆಯುತ್ತಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಅಳಿವಿನಂಚಿನಲ್ಲಿರುವ ಶತಮಾನದ ಶಾಲೆಗೆ ಬೇಕಿದೆ ಸಹಾಯ ಹಸ್ತ

ಅತಿ ಹೆಚ್ಚು ಜೇನು ಕುರುಬರೇ ವಾಸವಾಗಿರುವ ಮಗುವಿನ ಹಾಡಿ ಗ್ರಾಮದಲ್ಲಿ ಸೂಕ್ತ ಸೌಲಭ್ಯ ಕಲ್ಪಿಸುವಂತೆ ಜನರು ಪರಿತಪ್ಪಿಸುತ್ತಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ, ಇಂಧನ ಸಚಿವರು ಹಾಗೂ ಅಧಿಕಾರಿಗಳು ಎಚ್ಚೆತ್ತು 60 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಾರಾ ಎಂದು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ