ಚಾಮರಾಜನಗರ: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಿಂದ ಬಿದ್ದು ಮಹಿಳೆ ಸಾವು
ಕೆಎಸ್ಆರ್ಟಿಸಿ ಬಸ್ನಿಂದ ಮಹಿಳೆಯೊಬ್ಬರು ಬಿದ್ದು ಮೃತಪಟ್ಟಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮತ್ತೊಂದೆಡೆ ಫಾಲ್ಸ್ನಲ್ಲಿ ಈಜಲು ಹೋಗಿದ್ದ ಮಂಡ್ಯ ಜಿಲ್ಲೆಯ ಯುವಕನ ಶವ ಪತ್ತೆಯಾಗಿದೆ. ಈ ಎರಡೂ ಪ್ರತ್ಯೇಕ ಘಟನೆಗಳ ವಿವರ ಇಲ್ಲಿದೆ.
ಚಾಮರಾಜನಗರ, (ಆಗಸ್ಟ್ 29): ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಿಂದ (KSRTC Bus) ಮಹಿಳೆ ಬಿದ್ದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ (Chamarajanagar) ಜಿಲ್ಲೆಯಲ್ಲಿ ನಡೆದಿದೆ. ವಿನೋದಾ ಎನ್ನುವ ಮಹಿಳೆ ಹನೂರು ತಾಲೂಕಿನ ಮಲೆಮಹಾದೇಶ್ವರ ಬೆಟ್ಟದಿಂದ ಹನೂರು ಕಡೆ ತೆರಳುತ್ತಿದ್ದ ಸಾರಿಗೆ ಬಸ್ನಿಂದ ಬಿದ್ದು ಮೃತಪಟ್ಟಿದ್ದಾಳೆ. ನಿನ್ನೆ(ಆಗಸ್ಟ್ 28) ಮಾಧ್ಯಾಹ್ನ ಮಾದಪ್ಪನ ದರ್ಶನ ಪಡೆದು ಮನೆ ಹಿಂದಿರುಗುವಾಗ, ಬಸ್ನ ಹಿಂಬಾಗದ ಬಾಗಿಲಲ್ಲಿ ನಿಂತಿದ್ದ ವಿನೋದಾ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ವಿನೋದಾ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕರಡಿಗೆರೆ ಗ್ರಾಮದ ವಿನೋದಾ ನಿನ್ನೆ(ಆಗಸ್ಟ್ 28) ಮಾಧ್ಯಾಹ್ನ ಮಾದಪ್ಪನ ದರ್ಶನ ಪಡೆದು ವಾಪಸ್ ಮನೆಗೆ ಹಿಂದುರುವಾಗ ಈ ದುರ್ಘಟನೆ ಸಂಭವಿಸಿದೆ. ಬಸ್ ಫುಲ್ ಗದ್ದಲ ಇದ್ದಿದ್ದರಿಂದ ಹಿಂಬಾಗದ ಬಾಗಿಲಲ್ಲಿ ನಿಂತಿದ್ದಳು. ಆ ವೇಳೆ ಕಾಲು ಜಾರಿ ಬಸ್ನಿಂದ ಕೆಳಗೆ ಬಿದ್ದಿದ್ದಾರೆ. ಸದ್ಯ ಹನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆ ನಡೆದಿದ್ದು, ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಈ ಕುರಿತು ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಜಲು ಹೋಗಿ ನೀರಿನಲ್ಲಿ ಮುಳುಗಿ ಯುವಕ ಸಾವು
ಮಂಡ್ಯ: ಈಜಲು ಹೋಗಿ ನೀರಿನಲ್ಲಿ ಮುಳುಗಿ ಯುವಕನೋರ್ವ ಜೀವ ಕಳೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರಿನ ಗಾಣಾಳು ಪಾಲ್ಸ್ ನಲ್ಲಿ ನಡೆದಿದೆ. ಮನುಕುಮಾರ್(27)ಮೃತ ಯುವಕ. ಖಾಸಗಿ ಬಸ್ ನ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮನುಕುಮಾರ್, ಸ್ನೇಹಿತರೊಂದಿಗೆ ಪಾಲ್ಸ್ ನೋಡಲು ಹೋಗಿದ್ದ. ಈ ವೇಳೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ಕಳೆದೆರಡೂ ದಿನಗಳಿಂದ ಮೃತ ಯುವಕನ ಶವಕ್ಕಾಗಿ ಹುಡುಕಾಟ ನಡೆಸಿದ್ದು, ಆದ್ರೆ, ಇಂದು ಯುವಕನ ಶವ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:47 pm, Tue, 29 August 23