ಚಾಮರಾಜನಗರ: ಕಾರಿನ ಚಕ್ರಕ್ಕೆ ಸಿಲುಕಿ 4 ವರ್ಷದ ಬಾಲಕ ಸಾವು
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಜಡೆಕಲ್ಲಿನ ಬಳಿ ಕಾರಿನ ಚಕ್ರಕ್ಕೆ ಸಿಲುಕಿ 4 ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದೆ.
ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಜಡೆಕಲ್ಲಿನ ಬಳಿ ಕಾರಿನ ಚಕ್ರಕ್ಕೆ ಸಿಲುಕಿ 4 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ನೆಲಮಂಗಲ ಮೂಲದ ಧ್ರುವನಂದನ್(4) ಸಾವನ್ನಪ್ಪಿದ್ದಾನೆ. ಬಾಲಕ ಧ್ರುವನಂದನ್ನನ್ನು ಹನೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಜಗಳವಾಡಿ ನದಿಗೆ ಹಾರಿದ ವ್ಯಕ್ತಿ
ಬಾಗಲಕೋಟೆ: ವ್ಯಕ್ತಿಯೋರ್ವ ಸೇತುವೆ ಮೇಲಿನಿಂದ ಘಟಪ್ರಭಾ ನದಿಗೆ ಹಾರಿರುವ ಘಟನೆ ಬೀಳಗಿ ತಾಲ್ಲೂಕಿನ ಅನಗವಾಡಿ ಘಟಪ್ರಭಾ ಸೇತುವೆ ಬಳಿ ನಡೆದಿದೆ. ಚೆನ್ನಬಸಪ್ಪ ಯಲಗಣ್ಣವರ ಎಂಬುವ ನದಿಗೆ ಹಾರಿದ್ದು, ಈತನು ನದಿಯಲ್ಲಿ ಮುಳುಗೋದನ್ನು ಗಮನಿಸಿ ಕುರಿಗಾರರು ಕೂಗಾಡಿ ಜನ ಕರೆದದಿದ್ದಾರೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ಈ ವೇಳೆ ಅನಗವಾಡಿ ಗ್ರಾಮದಲ್ಲಿ ಅನತಿ ದೂರದಲ್ಲಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದ್ದಾರೆ . ಅಗ್ನಿಶಾಮಕ ದಳ ಸಿಬ್ಬಂದಿ ಸೇತುವೆಯಿಂದ ಹಗ್ಗ ಸೇಪ್ಡಿ ಟ್ಯೂಬ್ ಬಿಟ್ಟು ಮುಳುಗುತ್ತಿದ್ದ ಚೆನ್ನಬಸಪ್ಪನ ರಕ್ಷಣೆ ಮಾಡಿದ್ದಾರೆ.
ಚೆನ್ನಬಸಪ್ಪ ಮನೆಯಲ್ಲಿ ಜಗಳವಾಡಿಕೊಂಡು ಬಂದು ನದಿಗೆ ಹಾರಿದ್ದಾನೆ ಎಂದು ತಿಳಿದು ಬಂದಿದೆ.
ಮುರಿದು ಬಿದ್ದ ವಿಂಡಪವರ್ ಪ್ಯಾನ್ ರೆಕ್ಕೆ
ಬಾಗಲಕೋಟೆ: ಇಳಕಲ್ ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿ ಅಳವಡಿಸಿದ್ದ ವಿಂಡಪವರ್ ಪ್ಯಾನ್ನ ರೆಕ್ಕೆ ಮುರಿದು ಬಿದ್ದಿದೆ. ಸುಜಲಾನ್ ಕಂಪನಿಯ ವಿಂಡ್ ಪವರ್ ಫ್ಯಾನ್ ರೆಕ್ಕೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅನಾಹುತವಾಗಿಲ್ಲ. ಘಟನೆ ನಡೆದರೂ ಕಂಪನಿ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ.
ವಿಂಡ್ ಒವರ್ ಪ್ಯಾನ್ ಗಳನ್ನು ತೆರವುಗೊಳಿಸಬೇಕು. ಸ್ಥಳದಲ್ಲಿ ಕೃಷಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಲ್ಲರೂ ಓಡಿ ಹೋಗಿದ್ದರಿಂದ ಸುರಕ್ಷೆಯಿಂದ ಇದ್ದಾರೆ. ಒಂದು ವೇಳೆ ಯಾರಿಗಾದರೂ ತೊಂದರೆಯಾಗಿದ್ದರೆ ಯಾರು ಹೊಣೆ ? ಕೂಡಲೆ ಸ್ಥಳದಲ್ಲಿನ ವಿಂಡ್ ಪವರ್ ತೆರವುಗೊಳಿಸಬೇಕೆಂದು ರೈತಮುಖಂಡ ಬಸವರಾಜ ಆಗ್ರಹಿಸಿದ್ದಾರೆ.
ನಾಯಿ ಕಡಿತ: ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ಸಾವು
ಚಿತ್ರದುರ್ಗ: ನಾಯಿ ಕಡಿದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಚಿತ್ರದುರ್ಗ ತಾಲೂಕಿನ ಬಿಳಿಕಲ್ಲು ನಾಯಕರಹಟ್ಟಿಯ ರೇಖಾ-ಕೇಶವ ದಂಪತಿಯ ಪುತ್ರ ಯಶವಂತ್(8) ಸಾವನ್ನಪ್ಪಿದ್ದಾನೆ. ಜುಲೈ 10ರಂದು ಮನೆ ಬಳಿ ಆಟವಾಡುತ್ತಿದ್ದ ಬಾಲಕನಿಗೆ ನಾಯಿ ಕಡಿದಿತ್ತು.
ಬಾಲಕನಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆ, ದಾವಣಗೆರೆ ಆಸ್ಪತ್ರೆ, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಗಿತ್ತು. ಆದೆ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಯಶವಂತ್ ಸಾವನ್ನಪ್ಪಿದ್ದಾನೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಬಾಲಕ ಸಾವನ್ನಪ್ಪಿದ್ದಾನೆಂದು ಆರೋಪಿಸಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 3:27 pm, Sun, 24 July 22