ಚಿಕ್ಕಮಗಳೂರು: ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾರೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿ ಸಂಭವಿಸಿದೆ. ಬೈಕ್ ಸವಾರ ರಾಜೇಶ್ (24) ಮೇಲೆ ಬಸ್ ಹತ್ತಿದ ಪರಿಣಾಮ ದೇಹ ಛಿದ್ರ ಛಿದ್ರವಾಗಿದೆ. ಬೈಕ್ನಲ್ಲಿ ಹಿಂಬದಿ ಕುಳಿತಿದ್ದ ದಾಸರಹಳ್ಳಿ ಅಶೋಕ್ ಎಂಬುವರಿಗೆ ಗಂಭೀರ ಗಾಯವಾಗಿದೆ.
ಗಾರೆ ಕೆಲಸಕ್ಕೆ ಅಂತ ಬೈಕ್ ಸವಾರರು ಬಣಕಲ್ ನಿಂದ ಮತ್ತಿಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಬಾಳೂರು ಸಮೀಪದ ಚನ್ನಡ್ಲು ಗ್ರಾಮದ ರಾಜೇಶ್ ಮೃತಪಟ್ಟಿದ್ದು, ದಾಸರಹಳ್ಳಿಯ ಅಶೋಕ್ಗೆ ಗಂಭೀರ ಗಾಯಗಳಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿಂಬದಿಯಿಂದ ಬಸ್ನ ಓವರ್ ಟೇಕ್ ಮಾಡಲು ಹೋಗಿದ್ದೆ ಅಪಘಾತಕ್ಕೆ ಕಾರಣ ಅಂತಾ ಹೇಳಲಾಗುತ್ತಿದೆ.
ಸರಣಿ ಅಪಘಾತ
ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತ ಸಂಭವಿಸಿದೆ. ಎರಡು ಕಾರುಗಳು, ಗೂಡ್ಸ್ ವಾಹನದ ನಡುವೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಏಸ್ ಪಲ್ಟಿಯಾಗಿದೆ. ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ತಾಲೂಕಿನ ಕುಲುಮೆಪಾಳ್ಯ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ
ನಾಯಂಡಹಳ್ಳಿ-ಕೆಂಗೇರಿ ನಡುವೆ ನಮ್ಮ ಮೆಟ್ರೋ ಮಾರ್ಗದಲ್ಲಿ ಕಳಪೆ ರಸ್ತೆಗಳ ನಿರ್ಮಾಣ: ಬಿಬಿಎಂಪಿಗೆ ಆತಂಕ
ಬಾಗೇಪಲ್ಲಿ: ಪೊಲೀಸ್ ವಸತಿಗೃಹ ಕಟ್ಟಡದ ಬಾಲ್ಕನಿ ಕುಸಿದು ಆತಂಕ, ಗೌರಿಬಿದನೂರಿನಲ್ಲಿ ದೇಗುಲ ಕಳ್ಳತನ
Published On - 10:46 am, Thu, 21 October 21