ಬಾಗೇಪಲ್ಲಿ: ಪೊಲೀಸ್ ವಸತಿಗೃಹ ಕಟ್ಟಡದ ಬಾಲ್ಕನಿ ಕುಸಿದು ಆತಂಕ, ಗೌರಿಬಿದನೂರಿನಲ್ಲಿ ದೇಗುಲ ಕಳ್ಳತನ
bagepalli Police: ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಗೂಳೂರು ವೃತ್ತದಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ಸಿಬ್ಬಂದಿ ಪ್ರಾಣ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. 3 ಅಂತಸ್ತಿನ ಕಟ್ಟಡದ ಬಾಲ್ಕನಿ ಕುಸಿದು ಸಿಬ್ಬಂದಿಗೆ ಆತಂಕ ತಂದೊಡ್ಡಿದೆ. ಕಳಪೆ ಕಾಮಗಾರಿಯಿಂದ ಬಾಲ್ಕನಿ ಕುಸಿದಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಈ ಬಾರಿಯ ಮುಂಗಾರು ಕೊನೆ ಕೊನೆಗೆ ವಿಪರೀತವಾಗಿ, ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಅನೇಕ ಸಾವು ನೋವು, ಆಸ್ತಿಪಾಸ್ತಿ ನಷ್ಟಗಳಿಗೂ ಕಾರಣವಾಗಿದೆ. ಹೆಚ್ಚು ಮಳೆಯನ್ನೇ ಕಾಣದ ಚಿಕ್ಕಬಳ್ಳಾಪುರ ಜಿಲ್ಲೆಯೂ ಇದಕ್ಕೆ ಹೊರತಲ್ಲ. ಜಿಲ್ಲಾ ಕೇಂದ್ರದ ಸಮೀಪದಲ್ಲಿರುವ ಬಾಗೇಪಲ್ಲಿ ಪಟ್ಟಣದ ಗೂಳೂರು ವೃತ್ತದ ಬಳಿ ಪೊಲೀಸ್ ವಸತಿಗೃಹ ಕಟ್ಟಡದ ಬಾಲ್ಕನಿ ಕುಸಿದು ಆತಂಕ ನಿರ್ಮಾಣವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಗೂಳೂರು ವೃತ್ತದಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ಸಿಬ್ಬಂದಿ ಪ್ರಾಣ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. 3 ಅಂತಸ್ತಿನ ಕಟ್ಟಡದ ಬಾಲ್ಕನಿ ಕುಸಿದು ಸಿಬ್ಬಂದಿಗೆ ಆತಂಕ ತಂದೊಡ್ಡಿದೆ. ಕಳಪೆ ಕಾಮಗಾರಿಯಿಂದ ಬಾಲ್ಕನಿ ಕುಸಿದಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಗೌರಿಬಿದನೂರು: ಶ್ರೀವರಮಹಾಲಕ್ಷ್ಮೀ ದೇವಾಲಯದ ಹುಂಡಿ ಕಳ್ಳತನ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ರಮಾಪುರ ಗ್ರಾಮದಲ್ಲಿ ಶ್ರೀ ವರಮಹಾಲಕ್ಷ್ಮೀ ದೇವಾಲಯದಲ್ಲಿ ಹುಂಡಿ ಕಳ್ಳತನವಾಗಿದೆ. ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

ಗೌರಿಬಿದನೂರು: ಶ್ರೀವರಮಹಾಲಕ್ಷ್ಮೀ ದೇವಾಲಯದ ಹುಂಡಿ ಕಳ್ಳತನ
ನೀರು ಪಾಲಾಯ್ತು ಬೀಡಿ ಕಾಲೋನಿ ಜನರ ಬದುಕು |Mandya Rain|TV9 Kannada
(Police quarters balcony collapse in bagepalli chikkaballapur district)
Published On - 9:19 am, Thu, 21 October 21