AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿಗಳ ಜೊತೆಗೆ ಅತಿ ಹೆಚ್ಚು ಆನೆಗಳೂ ಇರುವುದು ಬಂಡಿಪುರದಲ್ಲೇ!

ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಮತ್ತೊಂದು ಹೆಮ್ಮೆಯ ಮುಕುಟ. ಹುಲಿ (Tiger) ಆಯ್ತು ಈಗ ಆನೆಗಳ (Elephant) ಸಂಖ್ಯೆಯಲ್ಲಿಯೂ ಬಂಡಿಪುರಕ್ಕೆ ನಂಬರ್ ಓನ್ ಸ್ಥಾನ ಸಿಕ್ಕಿದೆ. ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳು ಹೊಂದಿರುವ ಪ್ರದೇಶ ಎಂಬ ಖ್ಯಾತಿ ಸಂದಿದೆ.

ಹುಲಿಗಳ ಜೊತೆಗೆ ಅತಿ ಹೆಚ್ಚು ಆನೆಗಳೂ ಇರುವುದು ಬಂಡಿಪುರದಲ್ಲೇ!
ಅತಿ ಹೆಚ್ಚು ಆನೆಗಳೂ ಇರುವುದು ಬಂಡಿಪುರದಲ್ಲೇ!
ಸೂರಜ್ ಪ್ರಸಾದ್ ಎಸ್.ಎನ್
| Updated By: ಸಾಧು ಶ್ರೀನಾಥ್​|

Updated on: Aug 10, 2023 | 11:54 AM

Share

ಚಾಮರಾಜನಗರ, ಆಗಸ್ಟ್​ 10: ಬಂಡಿಪುರ ಅಭಯಾರಣ್ಯಕ್ಕೆ ರಾಜ್ಯದಲ್ಲೇ ನಂಬರ್ ಒನ್ ಸ್ಥಾನ ಪ್ರಾಪ್ತಿಯಾಗಿದೆ. ಹುಲಿ ಸಂಖ್ಯೆಯಲ್ಲಿ ಅಗ್ರ ಸ್ಥಾನ ಪಡೆದಿದ್ದ ಬಂಡಿಪುರ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ (Bandipur) ಮತ್ತೊಂದು ಹೆಮ್ಮೆಯ ಮುಕುಟ ಇದಾಗಿದೆ. ಹುಲಿ (Tiger) ಆಯ್ತು ಈಗ ಆನೆಗಳ (Elephant) ಸಂಖ್ಯೆಯಲ್ಲಿಯೂ ಬಂಡಿಪುರಕ್ಕೆ ನಂಬರ್ ಓನ್ ಸ್ಥಾನ ಸಿಕ್ಕಿದೆ. ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳು ಹೊಂದಿರುವ ಪ್ರದೇಶ ಎಂಬ ಖ್ಯಾತಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂದಿದೆ.

ರಾಜ್ಯದಲ್ಲಿ ಒಟ್ಟು ಆನೆಗಳ ಸಂಖ್ಯೆ ಬರೋಬ್ಬರಿ 6395 ಇದೆ. ಚಾಮರಾಜನಗರ ಜಿಲ್ಲೆಯ (Chamarajanagar) ಬಂಡಿಪುರ ಒಂದರಲ್ಲೇ 1116 ಆನೆಗಳು ಪತ್ತೆಯಾಗಿವೆ. 1116 ಆನೆಗಳುಳ್ಳ ಬಂಡಿಪುರಕ್ಕೆ ಸಿಕ್ಕಿದೆ ಅಗ್ರಜ ಸ್ಥಾನ ದೊರೆತಿದೆ. ಒಟ್ಟಾರೆ ಆನೆಗಳ ಸಂಖ್ಯೆ ವಿಚಾರವಾಗಿ ಬಂಡಿಪುರ ಹಾಗೂ ನಾಗರಹೊಳೆ ಅಭಯಾರಣ್ಯದ ನಡುವೆ ಭಾರಿ ಪೈ ಪೋಟಿ ಇತ್ತು. 831 ಆನೆಗಳುಳ್ಳ ನಾಗರಹೊಳೆ ಎರಡನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ: ಮೊನ್ನೆಯಷ್ಟೆ ‘ಹೌದು ಹುಲಿಯಾ’ ನಮ್ಮಲ್ಲಿ ಹುಲಿಗಳು ಜಾಸ್ತಿಯಿವೆ ಎಂದು ಸಂಭ್ರಮಿಸಿದ್ದೆವು! ಆದರೆ ಈಗ

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಆನೆಗಣತಿ ಇದಾಗಿದೆ. ಆನೆಗಳ ನೇರ ಎಣಿಕೆ, ಲದ್ದಿ ಎಣಿಕೆ ಹಾಗೂ ವಾಟರ್ ಹೋಲ್ ಎಣಿಕೆ ಮೂಲಕ ನಡೆಯುವ ಗಣತಿ ಪ್ರಕ್ರಿಯೆ ಇದಾಗಿದೆ. ಬಿಡುಗಡೆಯಾದ ಆನೆಗಣತಿಯಲ್ಲಿ ಬಂಡಿಪುರಕ್ಕೆ ಪ್ರಥಮ ಸ್ಥಾನ ಸಿಕ್ಕಿದೆ. ಈ ಹಿಂದೆ 191 ಹುಲಿಗಳನ್ನ ಹೊಂದಿರುವ ಬಂಡಿಪುರಕ್ಕೆ ಪ್ರಥಮ ಸ್ಥಾನ ಲಭ್ಯವಾಗಿತ್ತು. ಈಗ 1116 ಆನೆಗಳನ್ನ ಹೊಂದಿರುವ ಬಂಡಿಪುರಕ್ಕೆ ಮತ್ತೆ ಮೊದಲ ಸ್ಥಾನ ಲಭ್ಯವಾಗಿದೆ.

ಚಾಮರಾಜನಗರ ಜಿಲ್ಲೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ