ನನ್ನನ್ನು ಬಿಜೆಪಿಯಿಂದ ಉಚ್ಛಾಟಿಸಲು ಸಾಧ್ಯವಿಲ್ಲ; ನನ್ನ ಹಿಂದೆ ಹಿಂದೂ ಧರ್ಮ ಮತ್ತು ನನ್ನ ಸಮಾಜದ ಶಕ್ತಿ ಇದೆ: ಬಸನಗೌಡ ಪಾಟೀಲ ಯತ್ನಾಳ್
Karnataka Politics: ದುಬೈ, ಮಾರಿಷಸ್ನಲ್ಲಿ ಹೋಟೆಲ್ ಖರೀದಿಸುವ ಕೆಲಸವನ್ನು ನಾನು ಮಾಡಲ್ಲ. ಅಧಿಕಾರ ಸಿಕ್ಕರೆ ಎಲ್ಲ ಜಿಲ್ಲೆಯಲ್ಲಿ ಗುಣಮಟ್ಟದ ಹಾಸ್ಟೆಲ್ ತೆರೆಯುವೆ ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಚಾಮರಾಜನಗರ: ನನ್ನನ್ನು ಎಂದಿಗೂ ಬಿಜೆಪಿಯಿಂದ ಉಚ್ಚಾಟಿಸಲು ಸಾಧ್ಯವಿಲ್ಲ. ನನ್ನ ಹಿಂದೆ ಹಿಂದೂ ಧರ್ಮ ಮತ್ತು ನನ್ನ ಸಮಾಜದ ಶಕ್ತಿ ಇದೆ ಎಂದು ಚಾಮರಾಜನಗರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ದುಬೈ, ಮಾರಿಷಸ್ನಲ್ಲಿ ಹೋಟೆಲ್ ಖರೀದಿಸುವ ಕೆಲಸವನ್ನು ನಾನು ಮಾಡಲ್ಲ. ಅಧಿಕಾರ ಸಿಕ್ಕರೆ ಎಲ್ಲ ಜಿಲ್ಲೆಯಲ್ಲಿ ಗುಣಮಟ್ಟದ ಹಾಸ್ಟೆಲ್ ತೆರೆಯುವೆ. ನಮ್ಮ ಸಮುದಾಯಕ್ಕೆ 2A ಮೀಸಲಾತಿಗಾಗಿ ಆಗ್ರಹಿಸಿ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡೋಣ. ನಮ್ಮ ಸಮಸ್ಯೆ ಪ್ರಧಾನ ಮಂತ್ರಿಗೆ ಅರ್ಥ ಮಾಡಿಸೋಣ ಎಂದು ಬಸನಗೌಡ ಯತ್ನಾಳ್ ಹೇಳಿದ್ದಾರೆ.
ನನ್ನನ್ನು ಹಗರಣದಲ್ಲಿ ಸಿಲುಕಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಚಾಮರಾಜನಗರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ನಾನು ಅಕ್ರಮ ಮಾಡಿದ್ದೇನೆಂದು ಪತ್ತೆ ಹಚ್ಚಲು ಇಂಟಲಿಜೆನ್ಸ್ ರಚನೆ ಆದರೆ ಇಂಟಲಿಜೆನ್ಸ್ಗೆ ಒಂದೇ ಒಂದು ಅಕ್ರಮ ಸಿಗಲಿಲ್ಲ. ನಮಗೆ ಯಾವುದೇ ರೀತಿ ರಾಜಕೀಯ ಮೀಸಲಾತಿ ಬೇಡ. ನಮ್ಮ ಸಮಾಜದ ಅಭಿವೃದ್ಧಿಗೆ ನಮ್ಮನ್ನು 2A ಗೆ ಸೇರಿಸಿ ಎಂದು ತಿಳಿಸಿದ್ದಾರೆ.
ನಾನು ಕೇಂದ್ರ ಮಂತ್ರಿಯಾಗಿದ್ದಾಗ ನನ್ನನ್ನು ಅಧಿಕಾರದಿಂದ ತೆಗೆಸಲು ಬಂದಿದ್ದರು. ಅಧಿಕಾರದಿಂದ ಕೆಳಗಿಳಿಸಲು ಆಗಲೇ ಹುನ್ನಾರ ಮಾಡಿದ್ದರು. ಆದರೆ ಅದು ಸಕ್ಸಸ್ ಆಗಲಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಚಾಮರಾಜನಗರ: ಯಡಿಯೂರಪ್ಪ ವಿರುದ್ಧ ಯತ್ನಾಳ್ ಟೀಕೆಗೆ ವೀರಶೈವ ಮಹಾಸಭಾ ಖಂಡನೆ
(BJP MLA Basanagouda Patil Yatnal says he believes in Hindu Dharma and his People in Political Career)