ಭಾನುವಾರ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ್ ಶ್ರೇಣಿಯಲ್ಲಿ ಏಳು ವರ್ಷದ ಹುಲಿ (Tiger) ಯ ಮೃತದೇಹ ಪತ್ತೆಯಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಿಗದಿಪಡಿಸಿದ ಮಾರ್ಗಸೂಚಿಯಂತೆ ಅರಣ್ಯ ಇಲಾಖೆಯ ಪಶುವೈದ್ಯ ಡಾ. ವಾಸಿಂ ಮಿರ್ಜಾ ಮರಣೋತ್ತರ ಪರೀಕ್ಷೆಯನ್ನು ನಡೆಸಿದರು ಮತ್ತು ಮೃತದೇಹವನ್ನು ಸುಡಲಾಯಿತು. ಮತ್ತೊಂದು ಹುಲಿಯೊಂದಿಗೆ ಕಾದಾಟದಿಂದ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಘಟನಾ ಸ್ಥಳಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಪಿ. ರಮೇಶ್ ಕುಮಾರ್ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿದ್ದು, ಮೃತ ಹುಲಿಯ ಉಗುರುಗಳು ಹಾಗೂ ಇತರೆ ಅಂಗಾಂಗಗಳು ಯಥಾಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಇದೇ ಜನವರಿಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವ್ಯಾಪ್ತಿಯಲ್ಲಿ ಎಂಟು ವರ್ಷದ ಹುಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ಅದೇ ಅರಣ್ಯ ವ್ಯಾಪ್ತಿಯಲ್ಲಿ ಮಾರ್ಚ್‌ನಲ್ಲಿ ಎಂಟರಿಂದ ಒಂಬತ್ತು ವರ್ಷದೊಳಗಿನ ಹುಲಿ ಸಾವನ್ನಪ್ಪಿದ್ದು, ಅದಕ್ಕೆ ನೈಸರ್ಗಿಕ ಕಾರಣ ಎಂದು ಇಲಾಖೆ ಹೇಳಿದೆ. ಗಮನಾರ್ಹವಾಗಿ, ಕರ್ನಾಟಕವು 2019 ರಲ್ಲಿ 12, 2020 ರಲ್ಲಿ 12 ಮತ್ತು 2021 ರಲ್ಲಿ 15 ಹುಲಿಗಳ ಸಾವುಗಳ ವರದಿ ಆಗಿದೆ.
ಇದನ್ನೂ ಓದಿ:
ಈರುಳ್ಳಿ ದರ ದಿಢೀರ್ ಕುಸಿತ, ಕಂಗಾಲಾದ ರೈತ; ಮಾರುಕಟ್ಟೆಗೆ ಈರುಳ್ಳಿ ತಂದು ದರವಿಲ್ಲದೇ ಅಲ್ಲಿಯೇ ಬಿಟ್ಟು ಹೋದ ರೈತರು
ಶ್ರೀರಂಗಪಟ್ಟಣದ ಬಳಿ ಮಸೀದಿ ನಿರ್ಮಾಣ ವಿವಾದ, ಅಕ್ರಮವಾಗಿ ಕಟ್ಟಲಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತರ ಪ್ರತಿಭಟನೆ