ಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಿದ್ದ ಪ್ರೊಬೇಷನರಿ ಪಿಎಸ್ಐ, ದೂರು ದಾಖಲು

ಚಾಮರಾಜನಗರದ ಎಸ್ಪಿ ಕಚೇರಿಯಲ್ಲಿ ಪ್ರೊಬೇಷನರಿ ಪಿಎಸ್ಐ ಆಗಿ ಕೆಲಸ ಮಾಡುತ್ತಿರುವ ಜಗದೀಶ್ ಎಂಬಾತ ಫೇಸ್ ಬುಕ್ ಮೂಲಕ ಕಾಲೇಜು ವಿದ್ಯಾರ್ಥಿನಿಯರನ್ನು ಪರಿಚಯ ಮಾಡಿಕೊಂಡು ಅವರ ಫೋನ್ ನಂಬರ್ ಪಡೆದು ಅಸಭ್ಯವಾಗಿ ಮೆಸೇಜ್ ಮಾಡಿದ್ದಾನೆ. ಅಲ್ಲದೆ ಮರ್ಮಾಂಗದ ಫೋಟೋ ಕಳಿಸಿ ಮಂಚಕ್ಕೆ ಕರೆದಿದ್ದಾನೆ. ಘಟನೆ ಸಂಬಂಧ ದೂರು ದಾಖಲಾಗಿದೆ.

ಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಿದ್ದ ಪ್ರೊಬೇಷನರಿ ಪಿಎಸ್ಐ, ದೂರು ದಾಖಲು
ಪ್ರೊಬೇಷನರಿ ಪಿಎಸ್ಐ ಜಗದೀಶ್
Edited By:

Updated on: Mar 21, 2024 | 1:32 PM

ಚಾಮರಾಜನಗರ, ಮಾರ್ಚ್​.21: ಲಾ ಎಂಡ್ ಆರ್ಡರ್ ಕಾಪಾಡೋ ಪ್ರೊಬೇಷನರಿ ಪಿಎಸ್ಐನಿಂದಲೇ (Probationary PSI) ವಿದ್ಯಾರ್ಥಿನಿಯರಿಗೆ (Students) ಕಿರುಕುಳ ಆರೋಪ ಕೇಳಿ ಬಂದಿದೆ. ಪಿಎಸ್ಐ ಜಗದೀಶ್ ಎಂಬ ಕಾಮುಕ ಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಾನೆ ಎಂಬ ಬಗ್ಗೆ ದೂರು ದಾಖಲಾಗಿದ್ದು ಚಾಮರಾಜನಗರ (Chamarajanagar) ಎಸ್​ಪಿ ಕಚೇರಿಗೆ ತನಿಖೆ ನಡೆಸುವಂತೆ ಐಜಿ ಕಚೇರಿಯಿಂದ ತಾಕೀತು ಬಂದಿದೆ. ಸದ್ಯ ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಚಾಮರಾಜನಗರ ಡಿವೈಎಸ್ಪಿಗೆ ತನಿಖೆ ಹೊಣೆ ನೀಡಿದ್ದಾರೆ.

ಪಿಎಸ್ಐ ಜಗದೀಶ್ ಫೇಸ್ ಬುಕ್ ಮೂಲಕ ಮೈಸೂರು ಮೂಲದ ಕಾಲೇಜು ವಿದ್ಯಾರ್ಥಿನಿಯರಿಗೆ ಗಾಳ ಹಾಕುತ್ತಿದ್ದ. ಮೊದಲಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದ. ವಿದ್ಯಾರ್ಥಿನಿಯರು ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿದ ತಕ್ಷಣ ವಿದ್ಯಾರ್ಥಿನಿಯರಿಗೆ ಮೊಬೈಲ್ ನಂಬರ್ ಕೇಳಿ ಪಡೆಯುತ್ತಿದ್ದ. ಬಳಿಕ ವಾಟ್ಸಪ್ ಮೂಲಕ ದಿನ ನಿತ್ಯ ವಿದ್ಯಾರ್ಥಿನಿಯರಿಗೆ ಟಾರ್ಚರ್ ಮಾಡುತ್ತಿದ್ದ. ಲವ್ ಮಾಡು ಔಟಿಂಗ್​ಗೆ ಹೋಗೋಣ ಮಜಾ ಮಾಡೋಣ ಅಂತ ಸಂದೇಶ ಕಳಿಸುತ್ತಿದ್ದ. ಆಚೆ ಬರದೆ ಹೋದ್ರೆ ಸರಿ ಇರುವುದಿಲ್ಲವೆಂದು ಬ್ಲಾಕ್ ಮೇಲ್ ಮಾಡುತ್ತಿದ್ದ.

ಇದನ್ನೂ ಓದಿ: ಸ್ನೇಹಿತನ ಪತ್ನಿಯನ್ನೇ ಪಟಾಯಿಸಿ ಬಾಳು ಕೊಟ್ಟಿದ್ದ! ಇದೀಗ ದೋಖಾ, ಬೀದಿಗೆ ಬಂದ ಮಹಿಳೆಯಿಂದ ತಮಟೆ ಹೊಡೆದು ಧರಣಿ

ಬ್ಲಾಕ್ ಮೇಲ್ ಮಾಡಿ ಹಣವನ್ನ ಸಹ ಪೀಕಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಚಾಮರಾಜನಗರದ ಎಸ್ಪಿ ಕಚೇರಿಯಲ್ಲಿ ಪ್ರೊ ಪಿಎಸ್ಐ ಆಗಿ ಜಗದೀಶ್ ಕಾರ್ಯನಿರ್ವಹಿಸುತ್ತಿದ್ದಾನೆ. ಮೈಸೂರಿನ ಖಾಸಗಿ ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ಗಿರಿಜನ ವಿದ್ಯಾರ್ಥಿನಿಯರಿಗೆ ಮೆಸೇಜ್ ಮಾಡಿ ಟಾರ್ಚರ್ ಮಾಡಿದ್ದಾನೆ. ಮೈ ಜಿ ಬುಡಕಟ್ಟು ಸೋಲಿಗ ಅಭಿವೃದ್ಧಿ ಸಂಘದವರು ಮೈಸೂರಿನ ಐಜಿ ಕಚೇರಿಗೆ ವಿದ್ಯಾರ್ಥಿನಿಯರ ಪರ ದೂರು ನೀಡಿದ್ದಾರೆ. ಚಾಮರಾಜನಗರ ಎಸ್​ಪಿ ಕಚೇರಿಗೆ ತನಿಖೆ ನಡೆಸುವಂತೆ ಐಜಿ ಕಚೇರಿಯಿಂದ ತಾಕೀತು ಬಂದಿದೆ. ಸದ್ಯ ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಚಾಮರಾಜನಗರ ಡಿವೈಎಸ್ಪಿಗೆ ತನಿಖೆ ಹೊಣೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:30 pm, Thu, 21 March 24