AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನೇಹಿತನ ಪತ್ನಿಯನ್ನೇ ಪಟಾಯಿಸಿ ಬಾಳು ಕೊಟ್ಟಿದ್ದ! ಇದೀಗ ದೋಖಾ, ಬೀದಿಗೆ ಬಂದ ಮಹಿಳೆಯಿಂದ ತಮಟೆ ಹೊಡೆದು ಧರಣಿ

ಅಂದಹಾಗೆ ಈ ಪೋಟೋದಲ್ಲಿ ಮಹಿಳೆ ಜೊತೆ ಚಕ್ಕಂದಾ ಆಡುತ್ತಾ ಸೆಲ್ಫಿಗೆ ಪೋಸ್ ಕೊಟ್ಟಿರುವ ಇವನ ಹೆಸರು ಪುರುಷೋತ್ತಮ. ವಿಜಯಪುರ ಪಟ್ಟಣದ ಜಯಮಾಲಿನಿ ಬಡಾವಣೆಯ ನಿವಾಸಿ. ಇವನು ಇದೇ ಪಟ್ಟಣದ ಸ್ನೇಹಿತನ ಪತ್ನಿಯನ್ನೇ ಪಟಾಯಿಸಿಕೊಂಡು ಆಕೆಯನ್ನ ಗಂಡನಿಂದ ದೂರ ಮಾಡಿ ತನ್ನ ಜೊತೆಯೆ ಕಳೆದ ಹಲವು ವರ್ಷಗಳಿಂದ ಮನೆ ಮಾಡಿ ಇಟ್ಟುಕೊಂಡಿದ್ನಂತೆ.

ಸ್ನೇಹಿತನ ಪತ್ನಿಯನ್ನೇ ಪಟಾಯಿಸಿ ಬಾಳು ಕೊಟ್ಟಿದ್ದ! ಇದೀಗ ದೋಖಾ, ಬೀದಿಗೆ ಬಂದ ಮಹಿಳೆಯಿಂದ ತಮಟೆ ಹೊಡೆದು ಧರಣಿ
ಸ್ನೇಹಿತನ ಪತ್ನಿಯನ್ನೇ ಪಟಾಯಿಸಿ ಬಾಳು ಕೊಟ್ಟಿದ್ದ, ಇದೀಗ ದೋಖಾ!
ನವೀನ್ ಕುಮಾರ್ ಟಿ
| Edited By: ಸಾಧು ಶ್ರೀನಾಥ್​|

Updated on: Mar 21, 2024 | 12:47 PM

Share

ಆಕೆ ಆತ ಜೀವನ ಪೂರ್ತಿ ತನ್ನ ಜೊತೆ ಇರ್ತಾನೆ, ತನಗೊಂದು ಬಾಳು ಕೊಡ್ತಾನೆ ಅಂತ ಅಂತ ನಂಬಿ ಹಣ ಆಭರಣದ ಜೊತೆಗೆ ಸರ್ವಸ್ವವನ್ನು ಆತನಿಗೇ ನೀಡಿದ್ಲು. ಜೊತೆಗೆ ಪತ್ನಿಯಂತೆ (wife) ಎಲ್ಲೆಡೆ ಪೂಜೆ ಪುನಸ್ಕಾರ ಮಾಡಿದ್ದು ಇನ್ನೇನು ಹೊಸ ಮನೆ ತನಗೆ ಕೊಡ್ತಾನೆ ( live in together) ಅಂತಲೆ ಅಂದುಕೊಂಡಿದ್ಲು. ಆದ್ರೆ ಹಣ ಆಭರಣ ಎಲ್ಲ ಪಡೆದವನು ರಾತ್ರೋ ರಾತ್ರಿ ಮನೆಯಿಂದ ಆಕೆಯನ್ನ ಹೊರ ಹಾಕಿಬಿಟ್ಟಿದ್ದಾನೆ (cheating). ಇದೀಗ ನ್ಯಾಯಕ್ಕಾಗಿ ಮಹಿಳೆ ಆತನ ಮನೆಯ ಮುಂದೆ ಧರಣಿಗೆ ಮುಂದಾಗಿದ್ದಾಳೆ. ಸೈಟ್ ನಲ್ಲಿ ಸಾಕ್ಷಾತ್​ ದಂಪತಿಯಂತೆ ಕುಳಿತು ಪೂಜೆ ಮಾಡ್ತಿದ್ದಾರೆ ಒಬ್ಬರಿಗೋಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿ. ಒಂದೇ ಮನೆಯಲ್ಲಿ ತಿಂದು ಉಂಡು ಪೋಟೋಗೆ ಪೋಸ್ ಸಹ ಕೊಟ್ಟಿದ್ದಾರೆ. ಇನ್ನು ಇಬ್ಬರು ದಂಪತಿಯೇ ಅಂತ ಅಂದುಕೊಳ್ಳುವಷ್ಟರಲ್ಲಿ ಉಂಡು ಹೋದ ಕೊಂಡು ಹೋದ ಎಂಬಂತೆ ಮಹಿಳೆ ಬಳಿ ಇದ್ದ ಹಣವನ್ನೆಲ್ಲ ಲಪಟಾಯಿಸಿದ ಭೂಪ ಮನಸು ಕೊಟ್ಟವಳನ್ನ ಮನೆಯಿಂದ ಹೊರಗಡೆ ಹಾಕಿಬಿಟ್ಟಿದ್ದಾನೆ. ನ್ಯಾಯಕ್ಕಾಗಿ ವೃದ್ದ ಪೋಷಕರ ಜೊತೆ ಮಹಿಳೆ ಹೋರಾಟದ ಹಾದಿ ಹಿಡಿದಿದ್ದಾಳೆ. ಅಂದಹಾಗೆ ಈ ರೀತಿ ಲಕ್ಷ ಲಕ್ಷ ಹಣ, ಆಭರಣ ಪಡೆದು ಮಹಿಳೆಗೆ ವಂಚನೆ ಮಾಡಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ( Vijayapura, Devanahalli).

ಹೌದು ಅಂದಹಾಗೆ ಈ ಪೋಟೋದಲ್ಲಿ ಮಹಿಳೆ ಜೊತೆ ಚಕ್ಕಂದಾ ಆಡುತ್ತಾ ಸೆಲ್ಫಿಗೆ ಪೋಸ್ ಕೊಟ್ಟಿರುವ ಇವನ ಹೆಸರು ಪುರುಷೋತ್ತಮ. ವಿಜಯಪುರ ಪಟ್ಟಣದ ಜಯಮಾಲಿನಿ ಬಡಾವಣೆಯ ನಿವಾಸಿ. ಇವನು ಇದೇ ಪಟ್ಟಣದ ಸ್ನೇಹಿತನ ಪತ್ನಿಯನ್ನೇ ಪಟಾಯಿಸಿಕೊಂಡು ಆಕೆಯನ್ನ ಗಂಡನಿಂದ ದೂರ ಮಾಡಿ ತನ್ನ ಜೊತೆಯೆ ಕಳೆದ ಹಲವು ವರ್ಷಗಳಿಂದ ಮನೆ ಮಾಡಿ ಇಟ್ಟುಕೊಂಡಿದ್ನಂತೆ.

ಜೊತೆಗೆ ಗಂಡ ಹೆಂಡತಿಯಂತೆ ಇಬ್ಬರೂ ಸಹ ಜೀವನ ನಡೆಸಿದ್ದು ಮಹಿಳೆಗೆ ತವರು ಮನೆಯಿಂದ ಬಂದಿದ್ದ 10 ಲಕ್ಷ ಹಣ ಹಾಗೂ ಆಭರಣಗಳನ್ನೆಲ್ಲ ಸೈಟ್ ತೆಗೆದುಕೊಂಡಿರುವುದಾಗಿ ಹೇಳಿ ತಾನೆ ಪಡೆದುಕೊಂಡು ಸೈಟ್ ನಲ್ಲಿ ಮನೆ ಕಟ್ಟೋಕೆ ಭೂಮಿ ಪೂಜೆ ಸಹ ಮಾಡಿಸಿದ್ನಂತೆ. ಆದ್ರೆ ಭೂಮಿ ಪೂಜೆ ಮಾಡಿ ಮನೆ ನಿರ್ಮಾಣ ಮಾಡ್ತಿದ್ದಂತೆ ಮಹಿಳೆ ಸೈಟ್ ಮತ್ತು ಮನೆಯನ್ನ ಇಬ್ಬರ ಹೆಸರಿಗೂ ಜಂಟಿಯಾಗಿ ಮಾಡುವಂತೆ ಕೇಳಿದ್ದಾಳೆ. ಈ ವೇಳೆ ಮನೆಯಲ್ಲಿ ಭಾಗ ಕೇಳ್ತಿದ್ದಂತೆ ಪುರುಷೋತ್ತಮ ತನ್ನ ಅಸಲಿ ರೂಪವನ್ನ ತೋರಿಸಿದ್ದು ಮಹಿಳೆಯ ವಿರುದ್ದ ಕಿಡಿಕಾಡಿದ್ದಾನೆ. ಜೊತೆಗೆ ಮಹಿಳೆಯನ್ನ ರಾತ್ರೋರಾತ್ರಿ ಮನೆಯಿಂದ ಹೊರಗಡೆ ಹಾಕಿದ್ದು ಇದೀಗ ನನಗೂ-ನಿನಗೂ ಯಾವುದೇ ಸಂಬಂಧವಿಲ್ಲ ಅಂತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ ನೊಂದ ಮಹಿಳೆ ಶಾರದಾ.

Also Read: ಉಡುಪಿ – ಪರ್ಕಳದ ಕೆರೆ ಅಭಿವೃದ್ಧಿ ವೇಳೆ ಪುರಾತನ ದೇವಾಲಯದ ಅವಶೇಷಗಳು ಪತ್ತೆ

ಮನೆಯಿಂದ ಹೊರಗಡೆ ಹಾಕಿದ ಪರಿಣಾಮ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಹಿಳೆಯ ಕುಟುಂಬಸ್ಥರು ಆಕೆಯನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಜೊತೆಗೆ ಇದೀಗ ಹಣ ಆಭರಣವನ್ನೆಲ್ಲ ಪಡೆದು ಮೋಸ ಮಾಡಿದ್ದಾನೆ ಅಂತ ವಂಚಿಸಿದ ಪುರುಷೋತ್ತಮನ ಮನೆ ಮುಂದೆ ತಮಟೆ ಹೊಡೆದು ನ್ಯಾಯಕ್ಕಾಗಿ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಧರಣಿ ನಡೆಸಿದ್ರು. ಇನ್ನು ಮಹಿಳೆ ಧರಣಿ ನಡೆಸುತ್ತಿದ್ದಂತೆ ಸ್ಥಳಕ್ಕಾಗಮಿಸಿದ ವಿಜಯಪುರ ಠಾಣೆ ಪೊಲೀಸರು ಮಹಿಳೆಯಿಂದ ದೂರು ಪಡೆದು ಆರೋಪಿ ವಿರುದ್ದ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಒಟ್ಟಾರೆ ಸ್ನೇಹಿತ ಬಾಳು ಕೊಡ್ತಾನೆ, ಜೀವನ ಚೆನ್ನಾಗಿರುತ್ತೆ ಅಂತ ನಂಬಿ ಬಂದ ಮಹಿಳೆ ಇದೀಗ ಗಂಡನೂ ಇಲ್ಲದೆ ಹಣವೂ ಇಲ್ಲದೆ ಬೀದಿಗೆ ಬಿದ್ದಿದ್ದು ನ್ಯಾಯಕ್ಕಾಗಿ ಪರದಾಡ್ತಿದ್ದಾಳೆ. ಇಂತಹ ಅಮಾಯಕ ಮಹಿಳೆಯರನ್ನೆ ಟಾರ್ಗೆಟ್ ಮಾಡಿಕೊಂಡು ವಂಚಿಸುವ ಇಂತಹ ನಯವಂಚಕರನ್ನ ನಂಬುವ ಮುನ್ನ ಸ್ವಲ್ಪ ಎಚ್ಚರದಿಂದಿರುವುದು ಒಳ್ಳೆಯದು ಅಲ್ಲವೇ ಹೆಂಗೆಳೆಯರೇ?

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Naveen Kumar
Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ