ಚಾಮರಾಜನಗರ, ಫೆ.08: ಚಾಮರಾಜನಗರ (Chamarajanagar ) ಜಿಲ್ಲೆಗೆ ಮತ್ತೊಂದು ಹೆಮ್ಮೆಯ ಗರಿ ಲಭಿಸಿದೆ. ಪೊಲೀಸ್ ಠಾಣೆ ನಿರ್ವಹಣೆ ಹಾಗೂ ಜನ ಸ್ನೇಹಿ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆಗೆ ಕುದೇರು ಪೊಲೀಸ್ ಠಾಣೆ ಪಾತ್ರವಾಗಿದೆ. ಕೇಂದ್ರ ಗೃಹ ಇಲಾಖೆ ನಡೆಸಿದ ಸರ್ವೆಯಲ್ಲಿ ಕುದೇರು ಪೊಲೀಸ್ ಠಾಣೆ (Kudur Police Station) ನಂಬರ್ ಓನ್, ದೇಶದಲ್ಲೇ ಐದನೇ ಸ್ಥಾನ ಲಭಿಸಿದೆ.
ಪೊಲೀಸ್ ಠಾಣೆ ಅಂದ್ರೆ ಸಾಮಾನ್ಯವಾಗಿ ಮೂಗು ಮುರಿಯುವವರೆ ಹೆಚ್ಚು. ಯಾಕಪ್ಪ ಈ ಪೊಲೀಸರ ಸಹವಾಸ ಅಂತ ಮಾತಾಡ್ತಾರೆ. ಅದ್ರಲ್ಲೂ ಪೊಲೀಸ್ ಠಾಣೆ ಮೆಟ್ಟಿಲೇರೊ ಗೋಜೆ ಬೇಡ ಅಂತ ಮಾತನಾಡುವವರ ಸಂಖ್ಯೆ ಹೆಚ್ಚು. ಇನ್ನು ಠಾಣೆಗೆ ಹೋದ್ರೆ ಸರಿಯಾಗಿ ರೆಸ್ಪಾನ್ಸ್ ಮಾಡಿಲ್ಲ. ಏಕ ವಚನದಲ್ಲಿ ಮಾತಾಡ್ತಾರೆ ಅನ್ನೋ ದೂರುಗಳು ಸಹಜ. ಆದ್ರೆ ಇದೆಲ್ಲದಕ್ಕು ವಿರುದ್ದವಾಗಿ ರಾಜ್ಯದಲ್ಲಿ ಅತ್ಯುತ್ತಮ ಹಾಗೂ ಜನಸ್ನೇಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಗೃಹ ಇಲಾಖೆ ನಡೆಸಿದ ಸರ್ವೆಯಲ್ಲಿ ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಕುದೇರು ಪೊಲೀಸ್ ಠಾಣೆ ರಾಜ್ಯದಲ್ಲೇ ನಂಬರ್ ಓನ್ ಪೊಲೀಸ್ ಠಾಣೆ ಹಾಗೂ ದೇಶದಲ್ಲೇ ಐದನೇ ಸ್ಥಾನ ಎಂಬ ಪ್ರಶಂಸೆ ಪಡೆದಿದೆ.
ಇದನ್ನೂ ಓದಿ:ಆನೇಕಲ್: ಪ್ರೀತಿಸಿದ ವಿಚ್ಚೇದಿತ ಯುವತಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ; ಮನನೊಂದ ಯುವಕ ಆತ್ಮಹತ್ಯೆ
ಇನ್ನು ಯಾವ ಆಯಾಮದಲ್ಲಿ ಈ ಕುದೇರು ಪೊಲೀಸ್ ಠಾಣೆಗೆ ನಂಬರ್ ಓನ್ ಸ್ಥಾನ ಸಿಕ್ಕಿದೆ ಎಂದು ನೋಡುವುದಾದರೆ. ಕ್ರೈಂ ಕಂಟ್ರೋಲ್, ಅಬಕಾರಿ ನೀತಿ, ಜನಸ್ನೇಹಿ, ಶುಚಿತ್ವ, ಕ್ರೈಂ ಪ್ರಿವೆನ್ಷನ್ ಸೇರಿದಂತೆ ಈ ಎಲ್ಲಾ ಆಯಾಮಗಳನ್ನ ಪರಿಶೀಲಿಸಿ ರಾಜ್ಯದ 2223 ಪೊಲೀಸ್ ಠಾಣೆಗಳ ಪೈಕಿ ಈಗ ಕುದೇರು ಪೊಲೀಸ್ ಠಾಣೆಗೆ ನಂಬರ್ ಓನ್ ಸ್ಥಾನ ಸಿಕ್ಕಿದ್ದು ಈಗ ಸಾಕಷ್ಟು ಜನ ಮನ್ನಣೆಗೆ ಪಾತ್ರವಾಗಿದೆ.
ಒಟ್ಟಾರೆ ಚಾಮರಾಜನಗರ ಜಿಲ್ಲೆಯ ಕುದೇರು ಪೊಲೀಸ್ ಠಾಣೆಗೆ ರಾಜ್ಯದಲ್ಲೇ ನಂಬರ್ ಓನ್ ಸ್ಥಾನ, ದೇಶದಲ್ಲೇ ಐದನೇ ಸ್ಥಾನ ಪಡೆದು ಈಗ ಸದ್ದು ಮಾಡುತ್ತಿದ್ದು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ