ಮತ್ತೆ ಸುದ್ದಿಯಾದ ಬಂಡೀಪುರ ಅರಣ್ಯ ಸಿಬ್ಬಂದಿಗಳು: ಕಳ್ಳಬೇಟೆ ಶಿಬಿರಕ್ಕೆ ಪ್ರವಾಸಿಗರನ್ನ ಕರೆದುಕೊಂಡು ಹೋಗಿ ಎಡವಟ್ಟು

ಬಂಡೀಪುರ ಅರಣ್ಯದ ಅಧಿಕಾರಿಗಳು ಎನ್‌ಟಿಸಿ ನಿಯಮ ಉಲ್ಲಂಘಿಸಿ ಪ್ರವಾಸಿಗರನ್ನು ಕಳ್ಳಬೇಟೆ ತಡೆ ಶಿಬಿರಕ್ಕೆ ಕರೆದೊಯ್ದಿದ್ದಾರೆ. ಇದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. "ಫ್ರೆಂಡ್ಸ್ ಆಫ್ ಬಂಡೀಪುರ" ಹೆಸರಿನಲ್ಲಿ ಈ ಕಾನೂನು ಉಲ್ಲಂಘನೆ ನಡೆದಿದೆ. ಈ ಕ್ರಮದಿಂದ ಹುಲಿ ಮತ್ತು ಇತರ ವನ್ಯಜೀವಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತೆ ಸುದ್ದಿಯಾದ ಬಂಡೀಪುರ ಅರಣ್ಯ ಸಿಬ್ಬಂದಿಗಳು: ಕಳ್ಳಬೇಟೆ ಶಿಬಿರಕ್ಕೆ ಪ್ರವಾಸಿಗರನ್ನ ಕರೆದುಕೊಂಡು ಹೋಗಿ ಎಡವಟ್ಟು
ಬಂಡೀಪುರ
Updated By: ಗಂಗಾಧರ​ ಬ. ಸಾಬೋಜಿ

Updated on: Jun 13, 2025 | 8:12 AM

ಚಾಮರಾಜನಗರ, ಜೂನ್​ 13: ದೇಶದಲ್ಲಿ ಅತೀ ಹೆಚ್ಚು ಖ್ಯಾತಿ ಪಡೆದಿರುವ ಟೈಗರ್ ರಿಸರ್ವ್ ಫಾರೆಸ್ಟ್​ನಲ್ಲಿ ಬಂಡೀಪುರ (Bandipur) ಕೂಡ ಒಂದು. ಬಂಡೀಪುರ ಸಫಾರಿಗೆ ಅದರ ಪ್ರಕೃತಿಯ ಸೊಬಗಿಗೆ ಮೈ, ಮನ ಸೋಲದವರೇ ಇಲ್ಲ. ಇಂತಹ ಬಂಡೀಪುರಕ್ಕೆ ಸಿಎಫ್ ಆಗಿ ಬಂದ ಅಧಿಕಾರಿ ಮಾಡುತ್ತಿರುವ ಎಡವಟ್ಟಿನಿಂದ ಪರಿಸರವಾದಿಗಳು ರೊಚ್ಚಿಗೆದ್ದಿದ್ದಾರೆ. ಫ್ರೆಂಡ್ಸ್ ಆಫ್ ಬಂಡೀಪುರ ಹೆಸರಿನಲ್ಲಿ ಅರಣ್ಯ ಸಿಬ್ಬಂದಿ ಎನ್​​ಟಿಸಿ (NTC) ನಿಯಮ ಗಾಳಿಗೆ ತೂರಿರುವ ಘಟನೆಯೊಂದು ನಡೆದಿದೆ.

ಗಡಿನಾಡು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್​ ಪ್ರವಾಸಿಗರ ನೆಚ್ಚಿನ ತಾಣ. ಆದರೆ ಕಳ್ಳಬೇಟೆ ಶಿಬಿರಕ್ಕೆ ಪ್ರವಾಸಿಗರನ್ನ ಕರೆದುಕೊಂಡು ಹೋಗಿ ಎಡವಟ್ಟು ಸೃಷ್ಟಿಸಲಾಗಿದೆ. ಹೌದು.. ‘ಆಂಟಿ ಪೋಚಿಂಗ್ ಕ್ಯಾಂಪ್ ಅಂದರೆ ಕಳ್ಳಬೇಟೆ ತಡೆ ಶಿಬಿರ’ ವನ್ಯ ಮೃಗಗಳನ್ನ ಬೇಟೆಯಾಡುವುದನ್ನ ತಡೆಯಲು ಹಾಗೂ ಹುಲಿ ಸೇರಿದಂತೆ ಇನ್ನಿತರೆ ಕಾಡು ಪ್ರಾಣಿಗಳಿಗೆ ಅಪಾಯ ಎದುರಾದಾಗ ಈ ಕ್ಯಾಂಪ್​​ನ ಸಿಬ್ಬಂದಿ ಅಖಾಡಕ್ಕೆ ಇಳಿದು ರಕ್ಷಿಸುವ ಕೆಲಸ ಮಾಡುತ್ತಾರೆ.

ಇದನ್ನೂ ಓದಿ: ಚಾಮರಾಜನಗರ: ಮೂತ್ರ ವಿಸರ್ಜನೆಗೆಂದು ಹೊರ ಬಂದ ವ್ಯಕ್ತಿ ಮೇಲೆ ಹುಲಿ ದಾಳಿ

ಇದನ್ನೂ ಓದಿ
ಖಾಸಗಿ ಶಾಲೆಗಳಿಗೆ ಗುಡ್​ ಬೈ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳ
ಚಾಮರಾಜನಗರದಲ್ಲಿ ಅತಿ ಶೀಘ್ರದಲ್ಲಿ ಕಾನೂನು ಕಾಲೇಜು ಆರಂಭ
ವರ್ಷದ ಮೊದಲ ಮಳೆಗೆ ಬಂಡೀಪುರ ಹಸಿರುಮಯ: ಸಫಾರಿಗೆ ಒಳ್ಳೆ ಸಮಯ
ನೆಲಕಚ್ಚಿದ್ದ ರೇಷ್ಮೆ ಕೃಷಿಗೆ ಮತ್ತೆ ಚೈತನ್ಯ:ಸರ್ಕಾರದಿಂದ ರೈತರಿಗೆ ಸವಲತ್ತು

ಇಂತ ಪ್ರದೇಶ ಟೈಗರ್ ಕೌರ್ ಹ್ಯಾಬಿಟೇಟ್ ಪ್ರದೇಶದಲ್ಲಿ ಇರುತ್ತೆ ಅಂದರೆ ದಟ್ಟ ಅರಣ್ಯ ಒಳಗಡೆ ಈ ಕ್ಯಾಂಪ್ ಗಳನ್ನ ನಿರ್ಮಾಣ ಮಾಡಲಾಗಿರುತ್ತೆ. ಇಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಎನ್​​​ಟಿಸಿ ಕಾಯ್ದೆಯಡಿ ಯಾರನ್ನೂ ಸಹ ಈ ಪ್ರದೇಶಕ್ಕೆ ಕರೆದುಕೊಂಡು ಹೋಗಬಾರದು. ಜೊತೆಗೆ ಇದನ್ನು ಬಹಿರಂಗ ಪಡಿಸಬಾರದು ಆದರೆ ಅರಣ್ಯ ಸಿಬ್ಬಂದಿ ಈ ಜಾಗಕ್ಕೆ ಫ್ರೆಂಡ್ಸ್ ಆಫ್ ಬಂಡೀಪುರ ಶಿರ್ಷಿಕೆಯಡಿಯಲ್ಲಿ ಪ್ರವಾಸಿಗರನ್ನ ಕರೆದುಕೊಂಡು ಬಂದು ಬಹಿರಂಗ ಮಾಡಲಾಗುತ್ತಿದೆ. ಇದರಿಂದ ಪರಿಸರವಾದಿಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಈಡೇರಿತು ವಿದ್ಯಾರ್ಥಿಗಳ ಕನಸು: ಚಾಮರಾಜನಗರದಲ್ಲಿ ಅತಿ ಶೀಘ್ರದಲ್ಲಿ ಕಾನೂನು ಕಾಲೇಜು ಆರಂಭ

ಫ್ರೆಂಡ್ಸ್ ಆಫ್ ಬಂಡೀಪುರ ಅಂದರೆ ಸಾರ್ವಜನಿಕರಿಗೆ ಅರಣ್ಯ ಹಾಗೂ ಅದರ ಸಂರಕ್ಷಣೆ ಮತ್ತು ವನ್ಯ ಮೃಗಗಳ ಕುರಿತು ಮಾಹಿತಿ ನೀಡುವುದು. ಇದು ಉತ್ತಮ ಕಾರ್ಯ ನಿಜ, ಆದರೆ ಎಪಿಸಿ ಕ್ಯಾಂಪ್​ಗಳಿಗೆ ಪ್ರವಾಸಿಗರನ್ನ ಕರೆದುಕೊಂಡು ಹೋದರೆ ಆ ಸ್ಥಳ ಬಹಿರಂಗವಾಗುತ್ತದೆ. ಒಂದು ವೇಳೆ ಯಾರಾದರೂ ಬೇಟೆಯಾಡಲು ಬಂದರೆ ಈ ಸ್ಥಳವನ್ನ ಗುರುತಿಸಿಕೊಂಡು ಹುಲಿ, ಜಿಂಕೆ, ಅಥವಾ ಆನೆಗಳನ್ನ ಶಿಕಾರಿ ಆಡುವ ಸಾಧ್ಯತೆಯಿದೆ. ಈ ಸ್ಥಳವನ್ನ ಬಹಿರಂಗ ಮಾಡುವುದು ಎನ್.ಟಿ.ಸಿ ಕಾಯ್ದೆ ಪ್ರಕಾರ ತಪ್ಪು ಎಂಬುದು ಪರಿಸರವಾದಿ ಡಿಸೆಲ್ವಾ ಅವರ ಮಾತಾಗಿದೆ.

ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ಎಡವಟ್ಟು

ಕಳೆದ ತಿಂಗಳ ಹಿಂದೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕೇರಳದ ಮಲಿಯಾಳಂ ಚಿತ್ರಕ್ಕೆ ಶೂಟಿಂಗ್​ಗೆ ಅನುಮತಿ ಕೊಟ್ಟು ಎನ್.ಟಿ.ಸಿ ಕಾಯ್ದೆ ಉಲ್ಲಂಘನೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಮತ್ತೆ ಈಗ ಫ್ರೆಂಡ್ಸ್ ಆಫ್ ಬಂಡೀಪುರ ಹೆಸರಿನಲ್ಲಿ NTC ಕಾಯ್ದೆ ಉಲ್ಲಂಘನೆ ಮಾಡಿ ಬಂಡೀಪುರ ಅರಣ್ಯ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದು ನಿಜಕ್ಕೂ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:10 am, Fri, 13 June 25