ಚಾಮರಾಜನಗರ ಮಹಿಳಾ ಅಧಿಕಾರಿ ವಿರುದ್ಧ ಕಾಂಗ್ರೆಸ್ ಶಾಸಕನಿಂದ ದ್ವೇಷದ ರಾಜಕಾರಣ ಆರೋಪ! ವರ್ಗಾವಣೆ ದಂಧೆ ನಡೀತಿದ್ಯಾ?
ಒಂದೆಡೆ ಮಹಿಳಾ ಅಧಿಕಾರಿ ವಿರುದ್ಧ ಶಾಸಕ ದ್ವೇಷದ ರಾಜಕಾರಣ ಮಾಡ್ತಿದ್ರೆ, ಮತ್ತೊಂದೆಡೆ ಸದ್ದಿಲ್ಲದೇ ಸರ್ಕಾರದ ಮಟ್ಟದಲ್ಲಿ ವರ್ಗಾವಣೆ ದಂಧೆ ನಡೀತಿದ್ಯಾ ಅನ್ನೋ ಅನುಮಾನ ಹುಟ್ಟಿಸಿದೆ. ತಮ್ಮ ವ್ಯಾಪ್ತಿಗೆ ಬಾರದ ಕ್ಷೇತ್ರಕ್ಕೂ ಕಾಂಗ್ರೆಸ್ ಶಾಸಕರು ಯಾಕೆ ಕೈ ಹಾಕಿದ್ದಾರೆ ಎಂಬುದೇ ಸದ್ಯದ ಪ್ರಶ್ನೆ
ಮಹಿಳಾ ಅಧಿಕಾರಿ ಜಾಗಕ್ಕೆ ಮತ್ತೊಬ್ಬರನ್ನು ನಿಯೋಜಿಸುವಂತೆ ಕೈ ಶಾಸಕನೊಬ್ಬ ಸಿಎಂಗೆ ಪತ್ರ ಬರೆದಿದ್ದಾನೆ. ಈ ಪತ್ರ ಇದೀಗಾ ವೈರಲ್ ಆಗಿದ್ದು, ಸದ್ದಿಲ್ಲದೇ ಕಾಂಗ್ರೆಸ್ ಸರ್ಕಾರದಲ್ಲಿ (karnataka government) ವರ್ಗಾವಣೆ ದಂಧೆ (transfer scam) ನಡೀತಿದ್ಯಾ ಅನ್ನೋ ಚರ್ಚೆ ನಡೀತಿದೆ.ಇದೀಗಾ ಮಹಿಳಾ ಅಧಿಕಾರಿ ವಿರುದ್ಧ ಎಲ್ಲೋ ಒಂದು ಕಡೆ ಕಾಂಗ್ರೆಸ್ ಶಾಸಕ ದ್ವೇಷದ ರಾಜಕಾರಣ ಮಾಡ್ತಿರುವ ಆರೋಪ ಕೇಳಿಬಂದಿದೆ.ಈ ಕುರಿತು ಒಂದು ರಿಪೋರ್ಟ್ ನಿಮ್ಮ ಮುಂದೆ. ಹೌದು ಚಾಮರಾಜನಗರ (Chamarajanagar) ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಮಹಿಳಾ ಅಧಿಕಾರಿ ಮೇಲೆ ಗಧಾ ಪ್ರಹಾರ ನಡೆಸ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ತಮ್ಮದಲ್ಲದ ಕ್ಷೇತ್ರಕ್ಕೂ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಕೈ ಹಾಕಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ದ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಸ್ಥಾನಕ್ಕೆ ಕೆಎಎಸ್ ಅಧಿಕಾರಿಯೊಬ್ಬರನ್ನು ನಿಯೋಜಿಸುವಂತೆ ಶಾಸಕ ಪುಟ್ಟರಂಗಶೆಟ್ಟಿ ಪತ್ರ ಬರೆದಿದ್ದಾರೆ.ಕೆಎಎಸ್ ಅಧಿಕಾರಿ ಮಹೇಶ್ ಜೆ ನಿಯೋಜಿಸುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.ಹಿಂದೆ ಚಾಮರಾಜನಗರ ಜಿ.ಪಂ.ಉಪ ಕಾರ್ಯದರ್ಶಿ ಆಗಿದ್ದ ಸರಸ್ವತಿ ಅವರನ್ನು ವರ್ಗಾಯಿಸುವಲ್ಲಿಯೂ ಶಾಸಕರು ಪತ್ರ ಬರೆದಿದ್ದರೆಂಬ ಮಾತು ಕೇಳಿಬಂದಿತ್ತು.
ಇದೀಗಾ ಮತ್ತೇ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯ ಹುದ್ದೆಯಿಂದಲೂ ವರ್ಗಾಯಿಸಲು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.ಜಿ.ಪಂ.ಉಪ ಕಾರ್ಯದರ್ಶಿ ಹುದ್ದೆಯ ವರ್ಗಾವಣೆಯ ಬಳಿಕ ಸದ್ಯ ಸ್ಥಳ ನೀರಿಕ್ಷಣೆಯಲ್ಲಿರುವ ಅಧಿಕಾರಿ ಸರಸ್ವತಿ,ಸದ್ಯ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಹೆಚ್ಚುವರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸ್ತಿದ್ದಾರೆ.ಇದೀಗಾ ಅವರ ವರ್ಗಾವಣೆಗೆ ಶಾಸಕ ಪಟ್ಟು ಹಿಡಿದಿದ್ದಾರೆಂಬ ಮಾತು ಬಂದಿದೆ ಎಂದು ಕನ್ನಡ ಪರ ಹೋರಾಟಗಾರ ನವೀನ್ ತಿಳಿಸಿದ್ದಾರೆ.
ಇನ್ನು ಉತ್ತಮ ಕಾರ್ಯನಿರ್ವಹಣೆ ಮೂಲಕ ಮಹಿಳಾ ಅಧಿಕಾರಿ ಸರಸ್ವತಿ ಜನರ ಮನ ಗೆದ್ದಿದ್ದಾರೆ.ಜಿ.ಪಂ. ಉಪ ಕಾರ್ಯದರ್ಶಿ ಹುದ್ದೆಯಿಂದಷ್ಟೇ ಅಲ್ಲ,ಪ್ರಾಧಿಕಾರದ ಕಾರ್ಯದರ್ಶಿ ಹುದ್ದೆಯಿಂದಲೂ ವರ್ಗಗೊಳಿಸುವಂತೆ ಬರೆದಿರುವ ಪತ್ರದ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಶಾಸಕರ ನಡೆಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.ತಮ್ಮದಲ್ಲದ ಹನೂರು ಕ್ಷೇತ್ರದ ವ್ಯಾಪ್ತಿಗೂ ಶಾಸಕ ಪುಟ್ಟರಂಗಶೆಟ್ಟಿ ಮೂಗು ತೂರಿಸ್ತಿರೋದ್ರಿಂದ ತಮ್ಮ ಕ್ಷೇತ್ರದ ಕೆಲಸದ ಬಗ್ಗೆ ಗಮನಹರಿಸಿ ಅನ್ನೋ ಮಾತು ಕೇಳಿಬರ್ತಿದೆ.ಹಿಂದೆಯೂ ಕೂಡ ಅಧಿಕಾರಿ ವಿರುದ್ಧ ವೈಯಕ್ತಿಕ ದ್ವೇಷವಿತ್ತು,ಆಗಲೂ ಕೂಡ ಸಮಾಜ ಕಲ್ಯಾಣ ಇಲಾಖೆ ಡಿಡಿಯಾಗಿದ್ದ ಸರಸ್ವತಿಯನ್ನು ಶಾಸಕರು ವರ್ಗಾಯಿಸಿದರೆಂಬ ಆರೋಪವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ