Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರು ಸಾಕಿದ ಜಾನುವಾರುಗಳ ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆ ಫರ್ಮಾನು

ಸಾಗುವಳಿಗೆ ಬೇಕಾಗುವಷ್ಟು ಮಾತ್ರ ದನಗಳನ್ನು ಇಟ್ಟುಕೊಂಡು ಉಳಿದದ್ದನ್ನು ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆ ವಿಚಿತ್ರ ಆದೇಶವೊಂದನ್ನು ಹೊರಡಿಸಿದ್ದು, ರೈತರು ತಬ್ಬಿಬ್ಬಾಗಿದ್ದಾರೆ.

ರೈತರು ಸಾಕಿದ ಜಾನುವಾರುಗಳ ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆ ಫರ್ಮಾನು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Dec 23, 2022 | 7:59 AM

ಚಾಮರಾಜನಗರ: ರೈತರು ಸಾಕಿದ ಜಾನುವಾರುಗಳ (Cattles) ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆ (Forest Department) ಫರ್ಮಾನು ಹೊರಡಿಸಿದ್ದು, ಸೂಚನೆ ಪಾಲಿಸದಿದ್ದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ. ಅರಣ್ಯ ಇಲಾಖೆಯ ಸೂಚನೆಗೆ ಗ್ರಾಮಸ್ಥರು ತಬ್ಬಿಬ್ಬಾಗಿದ್ದಾರೆ. ವನ್ಯಜೀವಿ ವಲಯ ಅರಣ್ಯಾಧಿಕಾರಿ ಗೋಪಿನಾಥಂ ಅವರು ಈ ವಿಚಿತ್ರ ಆದೇಶವನ್ನು ಹೊರಡಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ವನ್ಯಜೀವಿಧಾಮ (Male Mahadeshwara Wildlife Sanctuary) ವ್ಯಾಪ್ತಿಯಲ್ಲಿ ಸಾಗುವಳಿಗೆ ಬೇಕಾಗುವಷ್ಟು ಮಾತ್ರ ದನ, ಮೇಕೆಗಳನ್ನ ಇಟ್ಟುಕೊಂಡು ಹೆಚ್ಚುವರಿ ಆಗಿ ಇರೋದನ್ನ ಸ್ಥಳಾಂತರ ಮಾಡಿ ಎಂದು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Covid19 Guidelines: ಕರ್ನಾಟಕದಲ್ಲಿ ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಬಿಡುಗಡೆ

ಆದೇಶವನ್ನು ಪಾಲಿಸದದಿದ್ದ ಕ್ರಮ ಜರುಗಿಸುವುದಾಗಿ ಕ್ರಮದ ಎಚ್ಚರಿಕೆಯನ್ನೂ ಅಧಿಕಾರಿ ನೀಡಿದ್ದಾರೆ. ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದ ಟಿಆರ್ ತಂಡದ ಅಧಿಕಾರಿಗಳು ಹೆಚ್ಚುವರಿ ಜಾನುವಾರುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಅರಣ್ಯ ಇಲಾಖೆಯ ಸೂಚನೆಗೆ ಗ್ರಾಮಸ್ಥರು ತಬ್ಬಿಬ್ಬಾಗಿದ್ದಾರೆ. ಇಷ್ಟು ದಿವಸ ಆಗದ ತೊಂದರೆ ಈಗ ಏನಾಗುತ್ತಿದೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಅರಣ್ಯ ಇಲಾಖೆಯ ವಿಚಿತ್ರ ಆದೇಶ ವಿರೋಧಿಸಿ ರೈತ ಸಂಘ ಇಂದು ಚಾಮರಾಜನಗರದಲ್ಲಿ ಪ್ರತಿಭಟನೆಗೆ ಕರೆಕೊಟ್ಟಿದೆ.

Published On - 7:39 am, Fri, 23 December 22