ಚಿಕ್ಕಮಗಳೂರು: ಜಿಂಕೆ ಬೇಟೆಯಾಡಲು ಬಂದಿದ್ದವನ ಎದೆ ಸೀಳಿದ ಅರಣ್ಯಾಧಿಕಾರಿಯ ಗುಂಡು; ಸ್ಥಳದಲ್ಲೇ ಮೃತ

| Updated By: ವಿವೇಕ ಬಿರಾದಾರ

Updated on: Nov 05, 2023 | 12:55 PM

10 ಬೇಟೆಗಾರರ ತಂಡ ತಡರಾತ್ರಿ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಅರಣ್ಯ ರೇಂಜ್ ಬಳಿ ಜಿಂಕೆ ಬೇಟೆಯಾಡಲು ಬಂದಿದ್ದರು. ಬೇಟೆಗಾರರು ನಾಲ್ಕಕ್ಕೂ ಹೆಚ್ಚು ಕಡವೆ ಬೇಟೆಯಾಡಿ ಕೊಂಡೊಯ್ಯುತ್ತಿದ್ದರು. ಈ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬೇಟೆಗಾರರನ್ನು ಬಂಧಿಸಲು ಯತ್ನಿಸಿದ್ದಾರೆ. ಈ ವೇಳೆ ಬೇಟೆಗಾರರು ಅರಣ್ಯಾಧಿಕಾರಿಗಳ ಮೇಲೆ ದಾಳಿಗೆ ಯತ್ನಿಸಿದ್ದಾರೆ.

ಚಿಕ್ಕಮಗಳೂರು: ಜಿಂಕೆ ಬೇಟೆಯಾಡಲು ಬಂದಿದ್ದವನ ಎದೆ ಸೀಳಿದ ಅರಣ್ಯಾಧಿಕಾರಿಯ ಗುಂಡು; ಸ್ಥಳದಲ್ಲೇ ಮೃತ
ಮೃತ ಮನು
Follow us on

ಚಾಮರಾಜನಗರ ನ.05: ಗುಂಡ್ಲುಪೇಟೆ (Gundlupete) ತಾಲೂಕಿನ ಮದ್ದೂರು ರೇಂಜ್ ಬಳಿ ಬೇಟೆಗಾರನ ಮೇಲೆ ಅರಣ್ಯಾಧಿಕಾರಿ (Forest Officer) ಫೈರಿಂಗ್ ಮಾಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಭೀಮನಬೀಡು ಗ್ರಾಮದ ನಿವಾಸಿ ಮನು (35) ಗುಂಡಿನ ದಾಳಿಗೆ ಬಲಿಯದಾ ಬೇಟೆಗಾರ. 10 ಬೇಟೆಗಾರರ ತಂಡ ತಡರಾತ್ರಿ ಜಿಂಕೆ ಬೇಟೆಯಾಡಲು ಮದ್ದೂರು ರೇಂಜ್​ನ ಅರಣ್ಯದೊಳಗೆ ಪ್ರೇಶಿಸಿದ್ದಾರೆ. ಈ 10 ಜನರ ಬೇಟೆಗಾರರಲ್ಲಿ ಐದಕ್ಕೂ ಹೆಚ್ಚು ಜನ ಬೇಟೆಗಾರರ ಬಳಿ ನಾಡ ಬಂದೂಕು ಇತ್ತು. ಇವರು  ಅರಣ್ಯದೊಳಗೆ ಹೋಗಿ ನಾಲ್ಕಕ್ಕೂ ಅಧಿಕ ಕಡವೆ ಜಿಂಕೆಗಳನ್ನು ಕೊಂದು, ಕೊಂಡೊಯ್ಯುತ್ತಿದ್ದರು.

ಗುಂಡಿನ ಸದ್ದು ಕೇಳಿ ಅಲರ್ಟ್ ಆಗಿದ್ದ ಫಾರೆಸ್ಟ್ ಗಾರ್ಡ್ಸ್ ಹಾಗೂ ನೈಟ್ ಬೀಟ್​ನಲ್ಲಿದ್ದ ಡಿ.ಆರ್.ಎಫ್.ಓ ತಕ್ಷಣವೇ ವೆಪನ್ ಸಮೇತ ಕಾಡಿನೊಳಗೆ ತೆರಳಿದ್ದಾರೆ. ಅಲ್ಲಿ ಬೇಟೆಗಾರರನ್ನು ಕಂಡ ಅರಣ್ಯ ಇಲಾಖೆ ಅಧಿಕಾರಿ ಏರ್​ಫೈರ್ ಮಾಡಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಬೇಟೆಗಾರರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಎರೆಡು ಸುತ್ತು ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ.

ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿ ದಾಳಿ ಮಾಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿ ಹೊಡೆದ ಗುಂಡಿಗೆ ಬೇಟೆಗಾರ ಮನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಮೃತ ಬೇಟೆಗಾರ ಮನು ಸಂಬಂಧಿಕರು ಆಗಮಿಸಿದ್ದು,  ಆಕ್ರಂದನ ಮುಗಿಲು ಮುಟ್ಟಿದೆ.  ಎಸ್.ಪಿ ಪದ್ಮಿನಿ ಸಾಹು ಹಾಗೂ ಸಿಎಫ್ ರಮೇಶ್ ಕುಮಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ: ತುಮಕೂರು: ಮಾಂಸಕ್ಕಾಗಿ ಬಾವಲಿಗಳ ಬೇಟೆ: ನಾಲ್ವರನ್ನು ಬಂಧಿಸಿದ ಅರಣ್ಯಾಧಿಕಾರಿಗಳು

ಕೊಲೆ ಆರೋಪಿಯ ಕಾಲಿಗೆ ಫೈರಿಂಗ್​​

ಕೋಲಾರ: ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಕೊಲೆ ಆರೋಪಿ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಅ.21ರಂದು ನಡೆದಿದ್ದ ಗ್ರಾ.ಪಂ ಸದಸ್ಯ ಅನಿಲ್ ಕುಮಾರ್ ಕೊಲೆ ಪ್ರಕರಣದ ಆರೋಪಿ ಅಶೋಕ್​​ನನ್ನು ಪೊಲೀಸರು ಬಂಧಿಸಲು ಹೋಗಿದ್ದರು. ಈ ವೇಳೆ ಆರೋಪಿ ಅಶೋಕ್​ ಪೊಲೀಸ್ ಸಿಬ್ಬಂದಿಯಾದ ಕೋದಂಡಪಾಣಿ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗೆ ಮಾಲೂರು ಇನ್ಸ್​ಪೆಕ್ಟರ್ ವಸಂತ್​ಕುಮಾರ್​ರಿಂದ ಅಶೋಕ್​ ಬಲಗಾಲಿಗೆ ಫೈರಿಂಗ್ ಮಾಡಿದ್ದಾರೆ. ಆರೋಪಿ ಅಶೋಕ್​ನನ್ನು ಪೊಲೀಸರು ಮಾಲೂರು ಆಸ್ಪತ್ರೆಗೆ ದಾಖಲಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:51 am, Sun, 5 November 23