ಶಿವಮೊಗ್ಗ: ಅರಣ್ಯಾಧಿಕಾರಿಗಳಿಂದ ಮನೆಯ ಮೇಲೆ ದಾಳಿ; ಜಿಂಕೆ, ಕಾಡುಕೋಣದ ಕೊಂಬು ವಶಕ್ಕೆ

ನೂರಾರು ವರ್ಷಗಳಿಂದ ಈ ಮನೆಯಲ್ಲಿ ವನ್ಯಜೀವಿಯ ಟ್ರೋಫಿಯೊಂದು ಇದ್ದು, ಇದೀಗ ಅದನ್ನು ಸೀಜ್ ಮಾಡಿದ್ದಾರೆ. ಇನ್ನು ಮನೆ ಯಜಮಾನ ವಯಸ್ಸಾಗಿ ಅನಾರೋಗ್ಯದಲ್ಲಿದಲಿದ್ದಾರೆ. ಆದರೂ ಅರಣ್ಯ ಅಧಿಕಾರಿಗಳು ಆತನನ್ನು ಬಂಧಿಸಲು ಮುಂದಾಗಿದ್ದು, ಅರಣ್ಯ ಅಧಿಕಾರಿಗಳ ಧೋರಣೆಗೆ ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ: ಅರಣ್ಯಾಧಿಕಾರಿಗಳಿಂದ ಮನೆಯ ಮೇಲೆ ದಾಳಿ; ಜಿಂಕೆ, ಕಾಡುಕೋಣದ ಕೊಂಬು ವಶಕ್ಕೆ
ತೀರ್ಥಹಳ್ಳಿಯಲ್ಲಿ ಕಾಡು ಪ್ರಾಣಿಗಳ ಕೊಂಬು ಪತ್ತೆ
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 01, 2023 | 3:12 PM

ಶಿವಮೊಗ್ಗ, ನ.01: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಹುಲಿ ಉಗುರಿನ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಅದರಂತೆ ಇದೀಗ ವನ್ಯಜೀವಿ ಉಪ ಸಂರಕ್ಷಣಾ ಅಧಿಕಾರಿಗಳ ತಂಡ ಮತ್ತು ಅರಣ್ಯ ಜಾಗೃತ ದಳ ಅಧಿಕಾರಿಗಳು ಶಿವಮೊಗ್ಗ(Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಸಮೀಪದ ಬಸವನಗದ್ದೆಯಲ್ಲಿ ಜಂಟಿ ಕಾರ್ಯಾಚರಣೆ ಮಾಡಿ, ಕಾಡು ಪ್ರಾಣಿಗಳ ಕೊಂಬನ್ನು ವಶಕ್ಕೆ ಪಡೆದಿದ್ದಾರೆ. ಹೌದು, ಪ್ರಸನ್ನ ಎಂಬುವವರ ಮನೆ‘ಯ 12 ಜನ ಅಧಿಕಾರಿಗಳ ತಂಡವು ದಾಳಿ ಮಾಡಿ, ಮನೆಯಲ್ಲಿದ್ದ ಜಿಂಕೆ ಮತ್ತು ಕಾಡುಕೋಣದ ಕೊಂಬನ್ನು ವಶಕ್ಕೆ ಪಡೆದಿದ್ದಾರೆ.

ಅನಾರೋಗ್ಯದಲ್ಲಿರುವ ಮನೆ ಯಜಮಾನನ್ನು ಬಂಧಿಸಲು ಮುಂದಾದ ಅರಣ್ಯಾಧಿಕಾರಿಗಳು

ಹೌದು, ನೂರಾರು ವರ್ಷಗಳಿಂದ ಈ ಮನೆಯಲ್ಲಿ ವನ್ಯಜೀವಿಯ ಟ್ರೋಫಿಯೊಂದು ಇದ್ದು, ಇದೀಗ ಅದನ್ನು ಸೀಜ್ ಮಾಡಿದ್ದಾರೆ. ಇನ್ನು ಮನೆ ಯಜಮಾನ ವಯಸ್ಸಾಗಿ ಅನಾರೋಗ್ಯದಲ್ಲಿದಲಿದ್ದಾರೆ. ಆದರೂ ಅರಣ್ಯ ಅಧಿಕಾರಿಗಳು ಆತನನ್ನು ಬಂಧಿಸಲು ಮುಂದಾಗಿದ್ದು, ಅರಣ್ಯ ಅಧಿಕಾರಿಗಳ ಧೋರಣೆಗೆ ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳ ಈ ದಿಢೀರ್​ ಕ್ರಮವನ್ನು ಖಂಡಿಸಿ ಮಾಜಿ ಸಚಿವ ಆರಗ ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ಹುಲಿ ಉಗುರು ವಿವಾದ: ನನ್ನ ಬೆಡ್​​ರೂಮ್​ಗೆ ನುಗ್ಗಿ ಸರ್ಚ್​​ ಮಾಡಿದ್ದಾರೆ, ಅರಣ್ಯ ಅಧಿಕಾರಿಗಳ ವಿರುದ್ಧ ಸವದಿ ಕೆಂಡಾಮಂಡಲ

ಇನ್ನು ಶಾಸಕ ಲಕ್ಷ್ಮಣ್ ಸವದಿ ಅವರ ಪುತ್ರನಾದ ಸುಮಿತ್, ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್​ 31 ರಂದು ಅರಣ್ಯ ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆ ನಡೆಸಿದ್ದರು. ಇದರ ವಿರುದ್ಧ ಲಕ್ಷ್ಮಣ್ ಸವದಿ ಅವರು  ಕೆಂಡಾಮಂಡಲವಾಗಿದ್ದರು. ಹುಲಿ ಉಗುರು ಇಲ್ಲ, ಇಲಿ ಉಗುರೂ ಇಲ್ಲ. ಅದು ಕೃತಕ ಉಗುರು. ನಮ್ಮ ಮನೆ ಪರಿಶೀಲನೆ ಮಾಡಬೇಕಾದರೆ ನನ್ನ ಗಮನಕ್ಕೆ ತರಬೇಕಿತ್ತು. ಅಥವಾ ನೋಟಿಸ್ ನೀಡಬೇಕಿತ್ತು. ನಾನು ಊರಲ್ಲಿ ಇರದ ಸಮಯದಲ್ಲಿ ನನ್ನ ಬೆಡ್ ರೂಮ್​​ಗೆ ಹೊಗಿ ಪರಿಶೀಲನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Wed, 1 November 23

ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು