ಚಾಮರಾಜನಗರ: ಹಣಕಾಸು ಸಂಸ್ಥೆವೊಂದು (Bank) ತಾನು ನೀಡಿದ ಸಾಲಕ್ಕಿಂತ ಹೆಚ್ಚಿಗೆ ಹಣ ವಸೂಲಿ ಮಾಡಿಕೊಳ್ಳಲು ಮುಂದಾಗಿರುವ ಆರೋಪ ಕೇಳಿಬಂದಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ನಿವಾಸಿ ಪ್ರಕಾಶ್ ಎಂಬುವರು 2012ರಲ್ಲಿ ಕೆಎಸ್ಎಫ್ಸಿ ಸಂಸ್ಥೆಯಿಂದ 84 ಲಕ್ಷ ಸಾಲ ಪಡೆದಿದ್ದರು. ಈ ಹಣದಿಂದ ಗುಂಡ್ಲುಪೇಟೆ ಪಟ್ಟಣದಲ್ಲಿರುವ ಸ್ವಂತ ಜಾಗದಲ್ಲಿ ಲಾಡ್ಜ್ ನಿರ್ಮಾಣ ಮಾಡಿದ್ದರು. ಬಳಿಕ 37 ಲಕ್ಷ ರೂವನ್ನು 2015 ರವರೆಗೆ ಮರುಪಾವತಿ ಮಾಡಿದ್ದರು. ಹಣಕಾಸು ಸಂಸ್ಥೆ ಮಾತ್ರ ಈ ಹಣವನ್ನು ಬಡ್ಡಿಗೆ ಜಮೆ ಮಾಡಿಕೊಂಡಿದ್ದು, ಈಗ 4 ಕೋಟಿ ರೂ ಕಟ್ಟಿ ಎನ್ನುತ್ತಿದೆ.
ಹಣಕಾಸು ಸಂಸ್ಥೆ ಪ್ರಕಾಶ ಅವರ ಲಾಡ್ಜ್ ಮುಟ್ಟುಗೋಲು ಹಾಕಿಕೊಂಡಿದ್ದು, ಆಸ್ತಿ ಮಾರಿ ಸಾಲ ತೀರಿಸುವುದಾಗಿ ಹೇಳಿದರು ಹಣಕಾಸು ಸಂಸ್ಥೆ ಬಿಡುತ್ತಿಲ್ಲ. ಸದ್ಯ ಪ್ರಕಾಶ್ ಜೀವನ ನಡೆಸಲು ಪರದಾಟ ನಡೆಸುತ್ತಿದ್ದಾರೆ. ಹೀಗಾಗಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಚಾಮರಾಜನಗರ ಜಿಲ್ಲಾಧಿಕಾರಿಗೆ ದಯಾಮರಣಕ್ಕೆ ಅರ್ಜಿ ಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:36 pm, Fri, 18 November 22