ಭೂಗರ್ಭ ಗಣಿ ಶ್ರೀಮಂತ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಗೆ ತಿರುಗುಬಾಣ! ಇ.ಡಿ. ಉರುಳು ಸಾಧ್ಯತೆ

chamarajanagar MLA Puttarangashetty: ಗುಜರಾತ್ ಮೂಲದ ಗಣಿ ಉದ್ಯಮಿಯೊಬ್ಬರು ಚಾಮರಾಜನಗರ ಶಾಸಕರ ವಿರುದ್ಧ 9 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿದ್ರು. ಆ ಆರೋಪಕ್ಕೆ ಉತ್ತರ ಕೊಟ್ಟು ನಾನು‌ ವಂಚನೆ ಮಾಡಿಲ್ಲ ಅಂತ ಸ್ಪಷ್ಟನೆ ಕೊಟ್ಟರು. ಆದ್ರೀಗಾ ಶಾಸಕರು ಕೊಟ್ಟ ಸ್ಪಷ್ಟನೆ ಅವರಿಗೇ ತಿರುಗುಬಾಣವಾಗುತ್ತಿದೆ. ಶಾಸಕರು ಕೊಟ್ಟ ಸ್ಪಷ್ಟನೆ ಬಿಜೆಪಿಗೆ ಆಹಾರವಾಗಿದ್ದು ಇದೀಗಾ ಶಾಸಕರ ವಿರುದ್ಧ ಇ.ಡಿ.ಗೆ ದೂರು ಕೊಡಲು ಮುಂದಾಗಿದ್ದಾರೆ.

ಭೂಗರ್ಭ ಗಣಿ ಶ್ರೀಮಂತ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಗೆ ತಿರುಗುಬಾಣ! ಇ.ಡಿ. ಉರುಳು ಸಾಧ್ಯತೆ
ಭೂಗರ್ಭ ಗಣಿ ಶ್ರೀಮಂತ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಗೆ ತಿರುಗುಬಾಣ! ಇ.ಡಿ. ಉರುಳು ಸಾಧ್ಯತೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Nov 26, 2022 | 2:14 PM

ಗುಜರಾತ್ ಮೂಲದ ಗಣಿ ಉದ್ಯಮಿಯೊಬ್ಬರು (Mining businessman) ಚಾಮರಾಜನಗರ ಶಾಸಕರ ವಿರುದ್ಧ 9 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿದ್ರು. ಆ ಆರೋಪಕ್ಕೆ ಉತ್ತರ ಕೊಟ್ಟು ನಾನು‌ ವಂಚನೆ ಮಾಡಿಲ್ಲ ಅಂತ ಸ್ಪಷ್ಟನೆ ಕೊಟ್ಟರು. ಆದ್ರೀಗಾ ಶಾಸಕರು ಕೊಟ್ಟ ಸ್ಪಷ್ಟನೆ ಅವರಿಗೇ ತಿರುಗುಬಾಣವಾಗುತ್ತಿದೆ. ಶಾಸಕರು ಕೊಟ್ಟ ಸ್ಪಷ್ಟನೆ ಬಿಜೆಪಿಗೆ ಆಹಾರವಾಗಿದ್ದು ಇದೀಗಾ ಶಾಸಕರ ವಿರುದ್ಧ ಇ.ಡಿ.ಗೆ ದೂರು ಕೊಡಲು ಮುಂದಾಗಿದ್ದಾರೆ.

ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ (Chamarajanagar MLA Puttarangashetty)… ಅವರೇ ಹೇಳಿದ್ದಂತೆ ಅವರು ಕೇವಲ ಶಾಸಕರಷ್ಟೆ ಅಲ್ಲ, ಗಣಿ ಉದ್ಯಮಿ ಕೂಡ. ಶಾಸಕರು ಹೇಳಿದ್ದ ಗಣಿ ಉದ್ಯಮವನ್ನೇ ಬಜೆಪಿ ಇದೀಗಾ ಉರುಳು ಮಾಡಲು ಹೊರಟಿದೆ. ಹೌದು, ಕಳೆದ ವಾರವಷ್ಟೆ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಗುಜರಾತ್ ಮೂಲದ ಉದ್ಯಮಿ 9 ಕೋಟಿ ವಂಚನೆ ಮಾಡಿದ್ದಾರೆ ಅಂತ ಆರೋಪ ಮಾಡಿದ್ರು. ಈ ವಿಚಾರವಾಗಿ ಶಾಸಕ ಪುಟ್ಟರಂಗಶೆಟ್ಟಿ ಬಿಜೆಪಿ ಪ್ರತಿಕ್ರಿಯಿಸಿ ಉದ್ಯಮಿ ವಿರುದ್ಧವೆ ಆರೋಪ ಮಾಡಿದ್ರು.

ಅಷ್ಟೆ ಅಲ್ಲದೆ ತಾನು 9 ಕೋಟಿ ಹಣವನ್ನು ಸಹ ಕೊಟ್ಟಿದ್ದೇನೆ, ಇದರಲ್ಲಿ ಗುಜರಾತ್ ಉದ್ಯಮಿಗೆ 3.5 ಕೋಟಿ ಹಣವನ್ನ ಕೊಟ್ಟಿದ್ದು ಅದರಲ್ಲಿ 1.5 ಕೋಟಿ ಬ್ಯಾಂಕ್ ಮೂಲಕ ಟ್ರಾನ್ಸ್ಪರ್ ಮಾಡಿದ್ದರೆ 2 ಕೋಟಿ ಹಣವನ್ನ ನಗದು ರೂಪದಲ್ಲಿ ಸಹ ಕೊಟ್ಟಿರುವುದಾಗಿ ಹೇಳಿದ್ರು‌. ಇನ್ನು ಇದರ ಜೊತೆಗೆ ಗುಜರಾತ್ ಮೂಲದ ಉದ್ಯಮಿ ಆರೋಪಕ್ಕೆ ಬಿಜೆಪಿ ಷ್ಯಡ್ಯಂತ್ರ ಮಾಡಿದೆ. ಈ ಕಾರಣದಿಂದ ಆತ ಆರೋಪ ಮಾಡಿದ್ದಾನೆ ಅಂತ ಆರೋಪಿಸಿದ್ರು. ಯಾವಾಗ ಶಾಸಕರು ಪ್ರಕರಣಕ್ಕೆ ಬಿಜೆಪಿ ಹೆಸರು ಎಳೆತಂದ್ರು ಇದೀಗಾ ಬಿಜೆಪಿ ಮುಖಂಡರು ಇದನ್ನೆ ಅಸ್ತ್ರ ಮಾಡಿಕೊಂಡು ಶಾಸಕರ‌ ವಿರುದ್ಧ ತಿರುಗಿಬಿದ್ದಿದ್ದಲ್ಲೆ ಅವರ ವಿರುದ್ಧ ಇ.ಡಿ. ಹಾಗೂ ಐ.ಟಿ.ಗೆ ದೂರು ಕೊಡಲು ಮುಂದಾಗಿದ್ದಾರೆ.

ಇದಷ್ಟೆ ಅಲ್ಲದೆ ಶಾಸಕರು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟದೆ ಮೋಸ ಮಾಡಿದ್ದಾರೆ. ಅವರೆ ಹೇಳಿದ್ದಂತೆ 2 ಕೋಟಿ ಹಣವನ್ನ‌‌ ನಗದು ರೂಪದಲ್ಲಿ ಹೇಗೆ ವರ್ಗಾವಣೆ ಮಾಡಿದ್ರಿ ಅಂತ ಪ್ರಶ್ನೆ ಮಾಡಿದ್ದಾರೆ. ಅಷ್ಟೆ ಅಲ್ಲದೆ ಶಾಕರು ಹೇಳಿದಂತೆ ಅವರ 40 ವರ್ಷದಿಂದ ಗಣಿ ಉದ್ಯಮಿಯಾಗಿದ್ದೇನೆ ಅಂತ ಹೇಳಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ 3.5 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಇವರು ಹಣದ ವ್ಯವಹಾರ ಬ್ಲಾಕ್‌ ಮನಿಯಿಂದ ನಡೆಯುತ್ತಿದೆಯಾ ಅಥವಾ ವೈಟ್ ಮನಿಯಾ ಅಂತ ತಿಳಿಸಲಿ ಅಂತ ಆರೋಪಿಸಿದ್ದಾರೆ.

ಜೊತೆಗೆ ಚಾಮರಾಜನಗರದ ಯರಿಯೂರು ಬಳಿ 24 ಎಕರೆ ಕ್ವಾರಿ, ಗುಂಬಳ್ಳಿಯಲ್ಲಿ 15 ಎಕರೆ ಕ್ವಾರಿ, ಉಪ್ಪಿನಮೋಳೆಯಲ್ಲಿ ಪೆಟ್ರೋಲ್ ಬಂಕ್, ಚಾಮರಾಜನಗರದಲ್ಲಿ ಐಷಾರಾಮಿ ಬಂಗಲೆ, ಶಂಕರಪುರ ಬಡಾವಣೆಯಲ್ಲಿ ಕೋಟಿಗಟ್ಟಲೆ ಬೆಲೆಬಾಳುವ 20 ಗುಂಟೆ ಭೂಮಿ ಇವೆಲ್ಲಾ ಹೇಗೆ ಬಂತು ಶಾಸಕರೇ ಅಂತ ಪ್ರಶ್ನೆ ಮಾಡಿದ್ದಾರೆ ಕಾಡ ಅಧ್ಯಕ್ಷ, ಬಿಜೆಪಿ‌ ಮುಖಂಡ ನಿಜಗುಣ ರಾಜು.

ಒಟ್ಟಾರೆ, ಶಾಸಕರು ಸ್ಪಷ್ಟನೆ ಕೊಡುವ ಭರದಲ್ಲಿ ಬಿಜೆಪಿ ಹೆಸರು ಎಳೆತಂದಿದ್ದು ಇದೀಗ ಶಾಸರಿಗೆ ತಿರುಗುಬಾಣವಾಗುತ್ತಿದೆ. ಶಾಸಕರ ವಿರುದ್ಧ ಬಿಜೆಪಿ ಇ.ಡಿ.ಗೆ ದೂರು ಕೊಡಲು ಮುಂದಾಗಿದ್ದು ಈ ಬಗ್ಗೆ ಶಾಸಕರು ಯಾವ ಉತ್ತರ ಕೊಡುತ್ತಾರೆ ಕಾದು ನೋಡಬೇಕು. (ವರದಿ: ದಿಲೀಪ್ ಚೌಡಹಳ್ಳಿ, ಟಿ ವಿ9, ಚಾಮರಾಜನಗರ)

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ